LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅಂಬೇಡ್ಕರ್ ಓದು ಕಾರ್ಯಕ್ರಮ: ಉತ್ತರಾದೇವಿ ಮಠಪತಿ

Advertisement

ಮಾನ್ವಿ: ಪಟ್ಟಣದ ಕಲ್ಮಠ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ  ಅಂಬೇಡ್ಕರ್ ಓದು ಕಾರ್ಯಕ್ರಮದಲ್ಲಿ  ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ರಾಯಚೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ  ಉತ್ತರಾದೇವಿ ಮಠಪತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು, ಚಿಂತನೆ, ಹೋರಾಟ, ಸಾಹಿತ್ಯ ಕುರಿತು ಹಾಗೂ ಅವರ ಆಶಯ ಮತ್ತು ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಒಂದು ವಿಶೇಷ ಜಾಗೃತಿ ಕಾರ್ಯಕ್ರಮ ಹಾಗೂ ಅನೇಕ ಸ್ಪರ್ಧೆಗಳನ್ನು ವಿವಿಧ ಕಾಲೇಜುಗಳಲ್ಲಿ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಉಪನ್ಯಾಸಕ ದುರ್ಗಪ್ಪ ಅಮರಾವತಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬದುಕು ಮತ್ತು ಹೋರಾಟ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶಿಕ್ಷಣ ಸಂಘಟನೆ, ಹೋರಾಟದ ಮೂಲಕ ಮನುಕುಲದ ಒಳಿತಿಗಾಗಿ ದುಡಿದ ಮಹಾನ್ ನೇತಾರರಾಗಿದ್ದಾರೆ ಅವರು ಸಂವಿಧಾನದ ಮೂಲಕ ನೀಡಿದ ಸಮಾನತೆ, ಸ್ವಾತಂತ್ರ‍್ಯವನ್ನು  ಭ್ರಾತೃತ್ವದಿಂದ ನಾವೆಲ್ಲರೂ ಕೂಡಿ ಬಾಳುವ ಮೂಲಕ ಅವರ ಜೀವನ ತತ್ವಗಳನ್ನು ಪ್ರತಿಯೊಬ್ಬರು ಕೂಡ  ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ತಿಳಿಸಿದರು.
ಕಾಲೇಜಿನಲ್ಲಿ ನಡೆದ  ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಸಂಗೀತ, ಪದ್ಮಾವತಿ. ತೃತೀಯ ಸ್ಥಾನ ಪಡೆದ ವೈಷ್ಣವಿ ರವರಿಗೆ ಪ್ರಮಾಣ ಪತ್ರ ಹಾಗೂ ಪುಸ್ತಕಗಳನ್ನು ನೀಡಿ ಗೌರವಿಸಲಾಯಿತು.
ಶ್ರೀ ಪಂಪಾ ವಿರೂಪಾಕ್ಷೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್.ಎಸ್.ಪಾಟೀಲ್. ಕಲ್ಮಠ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಸಿದ್ದನಗೌಡ ಪಾಟೀಲ, ಹಿರಿಯ ಸಾಹಿತಿ ರಮೇಶಬಾಬು ಯಾಳಗಿ, ಕಾರ್ಯಕ್ರಮದ ಸಂಚಾಲಕ ಚನ್ನಬಸಪ್ಪ, ಮಲ್ಲಿಕಾರ್ಜುನ ಬ್ಯಾಗವಾಟ, ಆನಂದಕುಮಾರ ,ಕು.ಪ್ರಿಯಾಂಕ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ  ಇನ್ನಿತರರು ಇದ್ದರು.
ವರದಿ :ಆಂಜನೇಯ ನಸಲಾಪುರ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಜಯದಾಸರ ಕಟ್ಟೆಯಲ್ಲಿ ಭಕ್ತರನ್ನು ಅನುಗ್ರಹಿಸಿದ ಉಡುಪಿ ಪಲಿಮಾರು ಮಠದ ಶ್ರೀಗಳು.ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುಂಜಾಗ್ರತೆ ವಹಿಸಿ: ಎನ್.ಎಸ್. ಬೋಸರಾಜುಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅಂಬೇಡ್ಕರ್ ಓದು ಕಾರ್ಯಕ್ರಮ: ಉತ್ತರಾದೇವಿ ಮಠಪತಿಎಸ್​​ಐಆರ್​​ ಇಲ್ಲದಿದ್ದರೆ ಅವರಪ್ಪನ ಆಣೆ ಬಿಜೆಪಿ ಗೆಲ್ಲಲ್ಲ': ಸಿದ್ದರಾಮಯ್ಯ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ: ಜಿಲ್ಲಾದ್ಯಂತ ಮದ್ಯ ಮಾರಾಟ ನಿಷೇಧ ಶಿಸ್ತು ಮತ್ತು ಆತ್ಮವಿಶ್ವಾಸವೇ ಯಶಸ್ಸಿನ ಮೆಟ್ಟಿಲು: ಆಂಜನೇಯ ನಸಲಾಪುರ40 ವರ್ಷದ ಬ್ರಿಂಡನ್ ಟೇಲರ್ ಭರ್ಜರಿ ಶತಕ ಅಮೀರ್ ಜಂಗೋ ಶತಕ: ದೊಡ್ಡ ಮೊತ್ತದತ್ತ ವೆಸ್ಟ್ ಇಂಡೀಸ್ ಬೆಂಗಳೂರಿಗೆ ಅಣ್ಣನ ಆರೋಗ್ಯ ವಿಚಾರಿಸಲು ಬಂದ ರಜನಿಕಾಂತ್ ರೈತರ ಖಾತೆಗೆ ₹2,500 ಬೆಳೆ ಪರಿಹಾರ ಜಮೆ : ಹಣ ಬಿಡುಗಡೆಗೆ ಸಿಎಂ ಚಾಲನೆ