ಬೆಂಗಳೂರು : ಎಸ್ಐಆರ್ ಇಲ್ಲದಿದ್ದರೆ ಅವರಪ್ಪನ ಆಣೆ ಬಿಜೆಪಿಯವರು ಗೆಲ್ಲಲಾಗಲ್ಲ. ದೇಶದಲ್ಲಿ ಎಸ್ಐಆರ್ ವಿರುದ್ಧದ ಈ ಹೋರಾಟ ಎರೆನೇ ಸಂಗ್ರಾಮ. ಇದರಲ್ಲಿ ನಾವು ಯಶಸ್ಸು ಗಳಿಸುತ್ತೇವೆ. 2029ರಲ್ಲಿ ಯಾವ ಕಾರಣಕ್ಕೂ ಬಿಜೆಪಿ ಅಧಿಕಾರಕ್ಕೆ ಬರಲ್ಲ.
ದೇಶದಲ್ಲಿ ಪ್ರಧಾನಿ ಮೋದಿ ವರ್ಚಸ್ಸು ಕಡಿಮೆಯಾಗುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಎಸ್ಐಆರ್ ವಿರೋಧಿಸಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ದೇಶಾದ್ಯಂತ ಎಸ್ಐಆರ್ ಪ್ರಕ್ರಿಯೆ ಕಾನೂನು ಪ್ರಕಾರ ನಡೆದಿಲ್ಲ. ಅದಕ್ಕಾಗಿ SIR ರದ್ದಾಗಬೇಕು. ಸಿಇಸಿ ಜ್ಞಾನೇಶ್ ಕುಮಾರ್ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಜ್ಞಾನೇಶ್ ಕುಮಾರ್ ಆಯ್ಕೆ ಆಗಿದ್ದು ಹೇಗೆ ಗೊತ್ತಾ? ಎಂದು ವಿವರಣೆ ನೀಡಿದ ಅವರು, 2024ರಲ್ಲಿ ಲೋಕಸಭಾ ಚುನಾವಣೆಯಲ್ಲಿ NDA 240 ಸ್ಥಾನ ಮಾತ್ರ ಗೆಲ್ತು. ಬಿಜೆಪಿಗೆ ಮೆಜಾರಿಟಿ ಬರಲಿಲ್ಲ, ಅದಕ್ಕೋಸ್ಕರ ಮೋದಿ, ಅಮಿತ್ ಶಾ ಕುತಂತ್ರ ಮಾಡಿದ್ರು.
ಐಎಎಸ್ ಅಧಿಕಾರಿ ಜ್ಞಾನೇಶ್ ಕುಮಾರ್ ಇತಿಹಾಸ ಸರಿ ಇಲ್ಲ. ಜ್ಞಾನೇಶ್ ಕುಮಾರ್ ಕೇರಳದಲ್ಲಿ ಐಎಎಸ್ ಅಧಿಕಾರಿಯಾಗಿದ್ರು. ಆಯ್ಕೆ ಸಮತಿಯಲ್ಲಿ ಪ್ರಧಾನಿ, ಸಿಜೆಐ, ವಿಪಕ್ಷ ನಾಯಕರು ಇರ್ತಾರೆ.
ಆದರೆ ಇವರನ್ನು ಆಯ್ಕೆ ಮಾಡುವ ಮೊದಲೇ ಸಮಿತಿ ಬದಲಾಯಿಸ್ತಾರೆ. ಸಿಜೆಐ ತೆಗೆದು ಸಂಪುಟದವರನ್ನು ಸದಸ್ಯರನ್ನಾಗಿ ಮಾಡಿಕೊಳ್ಳುತ್ತಾರೆ. ಇದಕ್ಕೆ ರಾಹುಲ್ ಗಾಂಧಿ ವಿರೋಧ ಮಾಡ್ತಾರೆ.
ಆದರೂ ಜ್ಞಾನೇಶ್ ಕುಮಾರ್ ಅವರನ್ನು ಆಯ್ಕೆ ಮಾಡ್ತಾರೆ. ಆಮೇಲೆ ಎಸ್ಐಆರ್ ಏಕಮುಖವಾಗಿ ಮಾಡುವ ಮೂಲಕ ಜ್ಞಾನೇಶ್ ಕುಮಾರ್ ಅವರನ್ನು ಬಿಜೆಪಿಯ ಕೈಗೊಂಬೆ ಮಾಡಿಕೊಳ್ತಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.


