ನಟಿ ತ್ರಿಶಾ ಬಗ್ಗೆ ದ್ವಂದ್ವಾರ್ಥ ಬರುವ ಹೇಳಿಕೆ ನೀಡಿದ ಕಾರಣಕ್ಕೆ ತಮಿಳುನಾಡು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು ಪೊಲೀಸರು ಮನೆಗೆ ತೆರಳಿ ಬಂಧಿಸಿದ್ದಾರೆ.
ತಂಜಾವೂರಿನಲ್ಲಿ ನಡೆದ ಕಾವೇರಿ ಸಮಸ್ಯೆ ಪ್ರತಿಭಟನೆ ಕಾರ್ಯಕ್ರಮದಲ್ಲಿವಿಜಯ್ ಅವರನ್ನು ಟೀಕಿಸುತ್ತಾ "ನಮ್ಮ ಮುಖ್ಯಮಂತ್ರಿ ಕಾವೇರಿ ನೀರಿನ ಬಗ್ಗೆ ಬಾಯಿ ತೆರೆಯುತ್ತಿಲ್ಲ.
ಡಿಎಂಕೆ ವಿರುದ್ಧ ಸುಳ್ಳು ಪ್ರಕರಣಗಳನ್ನು ಹೂಡುವುದೇ ಅವರ ಚಿಂತೆ" ಎಂದು ಹೇಳಿದರು.ಈ ವೇಳೆ ಗುಂಪಿನಿಂದ "ತ್ರಿಶಾ… ತ್ರಿಶಾ…" ಎಂದು ಕೂಗಾಟ ಪ್ರಾರಂಭವಾಯಿತು. ಆಗ ಉದಯನಿಧಿ ನಗುತ್ತಾ “ನಮಗೆ ನೀರು ಬರುತ್ತೋ ಇಲ್ವೋ ಅಲ್ಲಿಗೆ ಹೋಗಬೇಕು” ಎಂದು ಹೇಳಿಕೆ ನೀಡಿದ್ದರು.
ಈ ಹೇಳಿಕೆಯಲ್ಲಿ ದ್ವಂದ್ವಾರ್ಥವಿದೆ, ವಿಜಯ್ ಹಾಗೂ ತ್ರಿಶಾ ನಡುವೆ ಸಂಬಂಧ ಕಲ್ಪಿಸಿ ಕೀಳುಮಟ್ಟದ ಹೇಳಿಕೆ ನೀಡಿ ಓರ್ವ ಮಹಿಳೆ ಬಗ್ಗೆ ಅವಹೇಳನ ಮಾಡಲಾಗಿದೆ ಎಂದು ದೂರು ದಾಖಲಾದ ಹಿನ್ನೆಲೆಯಲ್ಲಿ ಉದಯನಿಧಿ ಸ್ಟಾಲಿನ್ ಅವರನ್ನು ಬಂಧಿಸಲಾಗಿದೆ.


