ಸಿಗರೇಟ್ ಪ್ರಿಯರಿಗೆ ಪ್ರಮುಖ ಕಂಪನಿ ಐಟಿಸಿ (ITC) ಶಾಕ್ ನೀಡಿದೆ. ಫೆಬ್ರವರಿ 1ರಿಂದ ತಂಬಾಕು ಉತ್ಪನ್ನಗಳ ಮೇಲಿನ ಜಿಎಸ್‌ಟಿ (GST) ದರವನ್ನು ಶೇ.40ಕ್ಕೆ ಹೆಚ್ಚಿಸುವುದರ ಜೊತೆಗೆ, ಹೊಸದಾಗಿ ಹೆಚ್ಚುವರಿ ಅಬಕಾರಿ ಸುಂಕವನ್ನೂ ವಿಧಿಸಲಾಗಿದೆ.
ಸರ್ಕಾರದ ತೆರಿಗೆ ಹೆಚ್ಚಳದ ಹೊರೆ ಎದುರಿಸಲು ಐಟಿಸಿ ಮತ್ತೊಮ್ಮೆ ತನ್ನ ಜನಪ್ರಿಯ ಸಿಗರೇಟ್ ಬ್ರ್ಯಾಂಡ್‌ಗಳ ಬೆಲೆಗಳನ್ನು ಪರಿಷ್ಕರಿಸಿದೆ.
ಡೀಲರ್‌ಗಳಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಹೊಸ ದರಗಳನ್ನು ಹೊಂದಿರುವ ಸಿಗರೇಟ್ ಪ್ಯಾಕೆಟ್‌ಗಳು ಈಗಾಗಲೇ ಮಾರುಕಟ್ಟೆಗೆ ಬರಲು ಆರಂಭಿಸಿವೆ.
ಮುಖ್ಯವಾಗಿ ಕ್ಲಾಸಿಕ್ ಕನೆಕ್ಟ್ (Classic Connect) ಮತ್ತು ಗೋಲ್ಡ್ ಫ್ಲೇಕ್ ಸೂಪರ್ ಸ್ಟಾರ್ (Gold Flake Super Star) ಸಿಗರೇಟ್‌ಗಳ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ.


