LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

ನಟಿ ಕತ್ರೀನಾ ಕೈಫ್ ಗೆ ಬಾಡಿ ಶೇಮಿಂಗ್ : ಟ್ರೋಲ್‌ಗಳ ವಿರುದ್ಧ ರಮ್ಯಾ ತೀವ್ರ ಆಕ್ರೋಶ 

Advertisement

ಬೆಂಗಳೂರು: ಬಾಲಿವುಡ್‌ನ ಜನಪ್ರಿಯ ನಟಿ ಕತ್ರೀನಾ ಕೈಫ್ ಅವರ ಶರೀರದ ಬದಲಾದ ನೋಟದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಬಾಡಿ ಶೇಮಿಂಗ್ ಮತ್ತು ಟ್ರೋಲ್‌ಗಳಿಗೆ ಸ್ಯಾಂಡಲ್‌ವುಡ್ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.

ತಾಯಿಯಾದ ನಂತರ ಕತ್ರೀನಾ ಕೈಫ್ ಅವರ ದೇಹದ ತೂಕದಲ್ಲಿ ಸಹಜವಾಗಿಯೇ ಒಂದಷ್ಟು ಬದಲಾವಣೆಗಳಾಗಿದ್ದವು. ಇತ್ತೀಚೆಗೆ ಅಂಬಾನಿ ನಿವಾಸದಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮಕ್ಕೆ ತಮ್ಮ ಪತಿ ವಿಕ್ಕಿ ಕೌಶಲ್ ಅವರೊಂದಿಗೆ ಆಗಮಿಸಿದ್ದ ವೇಳೆ ಅವರು ಮಾಧ್ಯಮಗಳ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದರು.

ಆದರೆ, ಈ ಹೊಸ ರೂಪವನ್ನು ಸೋಷಿಯಲ್ ಮೀಡಿಯಾದಲ್ಲಿ ಕೀಳಾಗಿ ಬಿಂಬಿಸಿ, ಅವರ ದೇಹದ ಆಕಾರವನ್ನು ಹಳೆಯ ರೂಪಕ್ಕೆ ಹೋಲಿಸಿ ಅಪಹಾಸ್ಯ ಮಾಡುವ ಪೋಸ್ಟ್‌ಗಳು ಭಾರೀ ಪ್ರಮಾಣದಲ್ಲಿ ವೈರಲ್ ಆಗಿದ್ದವು.

ಈ ವಿಚಾರವಾಗಿ ತಮ್ಮ 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ಧ್ವನಿ ಎತ್ತಿರುವ ರಮ್ಯಾ, ಮಹಿಳೆಯ ದೇಹದ ಕುರಿತು ಸಾರ್ವಜನಿಕವಾಗಿ ಚರ್ಚಿಸುವುದು ಮತ್ತು ಅನಗತ್ಯ ಹೋಲಿಕೆಗಳನ್ನು ಮಾಡುವುದೇ ತಪ್ಪು ಎಂದು ಖಂಡಿಸಿದ್ದಾರೆ.

ಕತ್ರೀನಾ ಅವರನ್ನು ಬೆಂಬಲಿಸುವ ನೆಪದಲ್ಲಿ ಕೆಲವರು ಅವರ ವಯಸ್ಸು, ಸಾಧನೆ ಹಾಗೂ ಬ್ಯಾಂಕ್ ಬ್ಯಾಲೆನ್ಸ್ ಎಳೆದು ತರುತ್ತಿರುವುದಕ್ಕೂ ರಮ್ಯಾ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಮಹಿಳೆಗೆ 'ಪ್ರೈಮ್ ಏಜ್' (ಅತ್ಯುತ್ತಮ ಹಂತ) ಹಾಗೂ 'ಎಕ್ಸ್‌ಪೈರಿ ಡೇಟ್' (ಮುಕ್ತಾಯದ ದಿನಾಂಕ) ಇರುತ್ತದೆ ಎಂದು ವಿಂಗಡಿಸಿ ಪೋಸ್ಟ್ ಹಾಕುವ ಮನಸ್ಥಿತಿಯನ್ನು ಅವರು ಕಟುವಾಗಿ ಪ್ರಶ್ನಿಸಿದ್ದಾರೆ.‌

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಮಿತ್ ಶಾ ಆರೋಗ್ಯದಲ್ಲಿ ಏರುಪೇರು : ಹುಬ್ಬಳ್ಳಿಯ ಹೋಟೆಲ್‌ನಲ್ಲಿಯೇ ಚಿಕಿತ್ಸೆ, ಕಾರ್ಯಕ್ರಮ ಗೈರುಮಹಿಳೆ ಕೊಂದು ಶವದ ಮೇಲೆ ಮಗು ಮಲಗಿಸಿದ ಪಾಪಿಗಳುನಿಪ್ಪಾಣಿ ನಗರದಲ್ಲಿ ಸಣ್ಣಪುಟ್ಟ ವಿವಾದಕ್ಕೆ ಯುವಕನ ಬರ್ಬರ ವಾಗಿ ಮರ್ಡರ್ಅವರಾದಿ ಗ್ರಾಮ ಪಂಚಾಯ್ತಿಗೆ ನುಗ್ಗಿ ತಂದೆ, ಮಗಳ ಕೊಲೆ ಕೇಸ್ : ಮೂವರು ಹಂತಕರು ಅರೆಸ್ಟ್ನಿರಂತರ ವಿದ್ಯುತ ಸರಬರಾಜುಗೆ ಆಗ್ರಹಿಸಿ ಹೆಸ್ಕಾಂ ಚಿಕ್ಕೊಡಿ ಕಚೇರಿಗೆ ಮುತ್ತಿಗೆ ಹಾಕಲು ಕರವೇ ಹಾಗೂ ರೈತರ ನಿರ್ಧಾರಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ಹೊಸ ರೂಲ್ಸ್ : ಸೆಲ್ಫಿ, ರೀಲ್ಸ್‌ಗೆ ಬ್ರೇಕ್ಗಣೇಶ ವಿಸರ್ಜನೆ ವೇಳೆ ಟ್ರ್ಯಾಕ್ಟರ್ ಹರಿದು ಇಬ್ಬರು ಬಾಲಕರು ಸಾವುಬೆಳಗಾವಿಯಲ್ಲಿ ಅಕ್ರಮ ಪೆಟ್ರೋಲ್, ಡೀಸೆಲ್ ದಂಧೆ ಜಾಲ ಭೇದಿಸಿದ ಸಿಸಿಬಿ: ಇಬ್ಬರ ಬಂಧನ, ಲಕ್ಷಾಂತರ ರೂ. ಮೌಲ್ಯದ ಇಂಧನ ಜಪ್ತಿ!ಅವರಾದಿಯಲ್ಲಿ ಆಸ್ತಿಗಾಗಿ ತಂದೆ-ಮಗಳು ಕೊಲೆ , ಮೂವರು ಆರೋಪಿಗಳ ಬಂಧನಕಾರಾಗೃಹ ಇಲಾಖೆಯಲ್ಲಿ 576 ಹುದ್ದೆಗಳಿಗೆ ಅರ್ಜಿ ಆಹ್ವಾನ : ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ