LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

ಹಿರಿಯ ನಟ ಅನಂತ್ ನಾಗ್‌ಗೆ ಪ್ರತಿಷ್ಠಿತ 'ದಾದಾಸಾಹೇಬ್ ಫಾಲ್ಕೆ' ಪ್ರಶಸ್ತಿ ಗರಿ

Advertisement

ನವದೆಹಲಿ : ಭಾರತೀಯ ಚಿತ್ರರಂಗಕ್ಕೆ ನೀಡಿದ ಅದ್ಭುತ ಕೊಡುಗೆ ಹಾಗೂ ಐದು ದಶಕಗಳ ಕಾಲದ ಸುದೀರ್ಘ ಕಲಾ ಸೇವೆಯನ್ನು ಗೌರವಿಸಿ ಕನ್ನಡದ ಹಿರಿಯ ನಟ ಅನಂತ್ ನಾಗ್  ಅವರಿಗೆ 2024ರ ಸಾಲಿನ ಪ್ರತಿಷ್ಠಿತ 'ದಾದಾಸಾಹೇಬ್ ಫಾಲ್ಕೆ' ಜೀವಮಾನ ಸಾಧನೆ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಪ್ರಶಸ್ತಿ ಆಯ್ಕೆ ಸಮಿತಿಯ ಶಿಫಾರಸಿನಂತೆ ಈ ಪ್ರಕಟಣೆ ಮಾಡಿದೆ.

ಗುಜರಾತ್‌ನ ಏಕತಾ ನಗರದಲ್ಲಿ ಸೆಪ್ಟೆಂಬರ್ 22, 2026 ರಂದು ನಡೆಯಲಿರುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನಂತ್ ನಾಗ್ ಅವರಿಗೆ ಈ ಅತ್ಯುನ್ನತ ಪುರಸ್ಕಾರವನ್ನು ಪ್ರದಾನ ಮಾಡಲಾಗುವುದು.

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆಯುತ್ತಿರುವ ಕನ್ನಡ ಚಿತ್ರರಂಗದ 3ನೇ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಅನಂತ್ ನಾಗ್ ಪಾತ್ರರಾಗಿದ್ದಾರೆ.

ಈ ಹಿಂದೆ ವರನಟ ಡಾ. ರಾಜ್‌ಕುಮಾರ್ (1995) ಹಾಗೂ ಖ್ಯಾತ ಛಾಯಾಗ್ರಾಹಕ ವಿ.ಕೆ. ಮೂರ್ತಿ (2008) ಅವರಿಗೆ ಈ ಪ್ರಶಸ್ತಿ ಲಭಿಸಿತ್ತು.

1970ರ ದಶಕದಿಂದ ಸ್ಯಾಂಡಲ್‌ವುಡ್, ಬಾಲಿವುಡ್ ಸೇರಿದಂತೆ ವಿವಿಧ ಭಾಷೆಗಳಲ್ಲಿ ನೂರಾರು ಚಿತ್ರಗಳಲ್ಲಿ ಅಭಿನಯಿಸಿರುವ ಅನಂತ್ ನಾಗ್, ಸಮಾಂತರ ಹಾಗೂ ಕಮರ್ಷಿಯಲ್ ಎರಡೂ ಮಾದರಿಯ ಸಿನಿಮಾಗಳಲ್ಲಿ ತಮ್ಮ ನಟನೆಯ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಶಿಯನ್ ಗೇಮ್ಸ್ ನಲ್ಲಿ ಕ್ರಿಕೆಟ್: ನಾಳೆ ಭಾರತ- ಜಪಾನ್ ಮಹಿಳೆಯರ ಪಂದ್ಯ ಪದಕಗಳ ಭೇಟೆಗೆ ಭಾರತೀಯ ಕ್ರೀಡಾಳುಗಳು ಸಜ್ಜು ಬಿಜೆಪಿ ವತಿಯಿಂದ ಒಂದು ತಿಂಗಳು 'ಸೇವಾ ಸಂಕಲ್ಪ ದಿನ' ಆಚರಣೆ : ಮಾಜಿ ಎಂ.ಎಲ್.ಸಿ ಮಹಾಂತೇಶ ಕವಟಗಿಮಟ್ಟ.ಕುಡಿದು ಕೋರ್ಟ್ ನಲ್ಲಿ ಗಲಾಟೆ : ವಕೀಲನಿಗೆ ಒಂದು ದಿನ ಜೈಲು ಶಿಕ್ಷೆ, 2 ಸಾವಿರ ದಂಡ ವಿಧಿಸಿದ ಹೈಕೋರ್ಟ್ ಪ್ರೀತಿಸಿ ಮದುವೆಯಾದ ಹೆಂಡತಿಯನ್ನ ಲಾಡ್ಜ್‌ನಲ್ಲಿ ಕೊಂದ ಕಿರಾತಕ ಗಂಡ ಭಾರತದ ಕ್ರೀಡಾ ಪಟುಗಳಿಗೆ ಅದ್ದೂರಿ ಸ್ವಾಗತ ಪಾವಗಡಕ್ಕೆ ತಕ್ಷಣ ಭದ್ರಾ ಮೇಲ್ದಂಡೆ ನೀರು ಹರಿಸಿ :  ರೈತ ಸಂಘದಿಂದ ಉಗ್ರ ಹೋರಾಟ ಮಾಡುತ್ತೇವೆ ಎಂದು : ಜಿಲ್ಲಾಧ್ಯಕ್ಷ ಪೂಜಾರಪ್ಪ ನಕ್ಸಲ್ ಶಂಕಿತ ಕನಕಲಬಂಡೆ ವೆಂಕಟೇಶ್ ಬಂಧನ ಹಿನ್ನೆಲೆ : ಎಸ್ಪಿ ಅಶೋಕ್ ಸ್ಪಷ್ಟನೆಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಭಾರತೀಯ ಜನತಾ ಪಕ್ಷದ ವತಿಯಿಂದ ಸೆ.17ರಿಂದ ಅ.17ರವರೆಗೆ ಒಂದು ತಿಂಗಳ ಕಾಲ ‘ಸೇವಾ ಸಂಕಲ್ಪ ಯಾತ್ರೆ’ ಹಮ್ಮಿಕೊಳ್ಳಲಾಗಿದೆ ಅಕ್ರಮ ಪಂಪ್‌ಸೆಟ್ ತೆರವುಗೊಳಿಸಿ, ಶಿರಾಡೋಣ–ಹಾಲಹಳ್ಳಿ ರೈತರಿಗೆ ನೀರು ಒದಗಿಸಲು ಆಗ್ರಹ