LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

ಘೋರ ದುರಂತ : ಗಣೇಶ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿ ಆರು ಮಕ್ಕಳು ಸಾವು

Advertisement

ತೆಲಂಗಾಣ: ಗಣೇಶ ಮೂರ್ತಿ ವಿಸರ್ಜನೆ ವೇಳೆ ಭೀಕರ ದುರ್ಘಟನೆ ಸಂಭವಿಸಿದ್ದು, ಕೆರೆಯಲ್ಲಿ ಮುಳುಗಿ ಆರು ಮಂದಿ ಯುವಕರು ಮೃತಪಟ್ಟಿದ್ದಾರೆ. ಬುಧವಾರ ಸಂಜೆ ತೆಲಂಗಾಣದ ಪಟಾಂಚೆರು ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡ ಕಂಜರ್ಲಾ ಗ್ರಾಮದ ನೇರೇಡುಚೆರ್ಲಾ ಕೆರೆಯಲ್ಲಿ ಈ ದುರಂತ ಸಂಭವಿಸಿದೆ.

ಮೃತರು ಪಟಾಂಚೆರು ಮಂಡಲದ ಇನೋಲ್ ಗ್ರಾಮದ ಶಿರಿಷಾ ಚಾರಿಟಬಲ್ ಟ್ರಸ್ಟ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.

ಗಣೇಶ ಮೂರ್ತಿ ವಿಸರ್ಜನೆಗಾಗಿ ಚಾರಿಟಬಲ್ ಟ್ರಸ್ಟ್‌ನ ವಿದ್ಯಾರ್ಥಿಗಳು ನೇರೇಡುಚೆರ್ಲಾ ಕೆರೆಗೆ ತೆರಳಿದ್ದರು. ಕೆರೆಯ ನೀರಿನ ಅಡಿಯಲ್ಲಿ ಆಳವಾದ ಗುಂಡಿಯಿರುವುದು ವಿದ್ಯಾರ್ಥಿಗಳಿಗೆ ತಿಳಿದಿರಲಿಲ್ಲ. ಹೀಗಾಗಿ ಅವರು ನೀರಿನಲ್ಲಿ ಮುಂದೆ ಸಾಗಿದಾಗ ಆಳಕ್ಕೆ ಸಿಲುಕಿ ಮುಳುಗಿದ್ದಾರೆ.

 ಒಟ್ಟು ಒಂಬತ್ತು ಮಂದಿ ವಿದ್ಯಾರ್ಥಿಗಳು ನೀರಿಗೆ ಇಳಿದಿದ್ದು, ಈ ಪೈಕಿ ಈಜು ಬಲ್ಲ ಮೂವರು ಈಜಿ ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೃತರನ್ನು ನರಸಿಂಹ ರಾಜು (18), ಸುಮಂತ್ (19), ಗಣೇಶ್ (20), ಉದಯ್ ಕುಮಾರ್ (21), ಶಾಮ್ ಕುಮಾರ್ (18) ಮತ್ತು ಸಿದ್ಧಾರ್ಥ್ (16) ಎಂದು ಗುರುತಿಸಲಾಗಿದೆ.

 ಮೊದಲ ಐವರು ಪಾಲಿಟೆಕ್ನಿಕ್ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದರು. ಸಿದ್ಧಾರ್ಥ್ 10ನೇ ತರಗತಿಯಲ್ಲಿ ಓದುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಶಿಯನ್ ಗೇಮ್ಸ್ ನಲ್ಲಿ ಕ್ರಿಕೆಟ್: ನಾಳೆ ಭಾರತ- ಜಪಾನ್ ಮಹಿಳೆಯರ ಪಂದ್ಯ ಪದಕಗಳ ಭೇಟೆಗೆ ಭಾರತೀಯ ಕ್ರೀಡಾಳುಗಳು ಸಜ್ಜು ಬಿಜೆಪಿ ವತಿಯಿಂದ ಒಂದು ತಿಂಗಳು 'ಸೇವಾ ಸಂಕಲ್ಪ ದಿನ' ಆಚರಣೆ : ಮಾಜಿ ಎಂ.ಎಲ್.ಸಿ ಮಹಾಂತೇಶ ಕವಟಗಿಮಟ್ಟ.ಕುಡಿದು ಕೋರ್ಟ್ ನಲ್ಲಿ ಗಲಾಟೆ : ವಕೀಲನಿಗೆ ಒಂದು ದಿನ ಜೈಲು ಶಿಕ್ಷೆ, 2 ಸಾವಿರ ದಂಡ ವಿಧಿಸಿದ ಹೈಕೋರ್ಟ್ ಪ್ರೀತಿಸಿ ಮದುವೆಯಾದ ಹೆಂಡತಿಯನ್ನ ಲಾಡ್ಜ್‌ನಲ್ಲಿ ಕೊಂದ ಕಿರಾತಕ ಗಂಡ ಭಾರತದ ಕ್ರೀಡಾ ಪಟುಗಳಿಗೆ ಅದ್ದೂರಿ ಸ್ವಾಗತ ಪಾವಗಡಕ್ಕೆ ತಕ್ಷಣ ಭದ್ರಾ ಮೇಲ್ದಂಡೆ ನೀರು ಹರಿಸಿ :  ರೈತ ಸಂಘದಿಂದ ಉಗ್ರ ಹೋರಾಟ ಮಾಡುತ್ತೇವೆ ಎಂದು : ಜಿಲ್ಲಾಧ್ಯಕ್ಷ ಪೂಜಾರಪ್ಪ ನಕ್ಸಲ್ ಶಂಕಿತ ಕನಕಲಬಂಡೆ ವೆಂಕಟೇಶ್ ಬಂಧನ ಹಿನ್ನೆಲೆ : ಎಸ್ಪಿ ಅಶೋಕ್ ಸ್ಪಷ್ಟನೆಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಭಾರತೀಯ ಜನತಾ ಪಕ್ಷದ ವತಿಯಿಂದ ಸೆ.17ರಿಂದ ಅ.17ರವರೆಗೆ ಒಂದು ತಿಂಗಳ ಕಾಲ ‘ಸೇವಾ ಸಂಕಲ್ಪ ಯಾತ್ರೆ’ ಹಮ್ಮಿಕೊಳ್ಳಲಾಗಿದೆ ಅಕ್ರಮ ಪಂಪ್‌ಸೆಟ್ ತೆರವುಗೊಳಿಸಿ, ಶಿರಾಡೋಣ–ಹಾಲಹಳ್ಳಿ ರೈತರಿಗೆ ನೀರು ಒದಗಿಸಲು ಆಗ್ರಹ