LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

ಸೈಬರ್‌ ವಂಚನೆ ತಡೆಗೆ 3,700ಕ್ಕೂ ಹೆಚ್ಚು ಮೊಬೈಲ್‌ ಅಪ್ಲಿಕೇಶನ್‌ಗಳ ನಿಷೇಧ

Advertisement

ನವದೆಹಲಿ : ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೈಬರ್‌ ಅಪರಾಧಗಳು ಹಾಗೂ ಆನ್‌ಲೈನ್‌ ವಂಚನೆಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಇದರ ಭಾಗವಾಗಿ ವಿವಿಧ ರೀತಿಯ ವಂಚನೆಗಳಲ್ಲಿ ಬಳಸಲಾಗುತ್ತಿದ್ದ 3,700ಕ್ಕೂ ಹೆಚ್ಚು ಮೊಬೈಲ್‌ ಅಪ್ಲಿಕೇಶನ್‌ಗಳನ್ನು ನಿಷೇಧಿಸಲಾಗಿದೆ.

ಈ ಕುರಿತು ಲೋಕಸಭೆಗೆ ಸಲ್ಲಿಸಿದ ಲಿಖಿತ ಉತ್ತರದಲ್ಲಿ ಕೇಂದ್ರ ಗೃಹ ಸಚಿವಾಲಯ ಮಹತ್ವದ ಮಾಹಿತಿಯನ್ನು ಬಹಿರಂಗಪಡಿಸಿದೆ. ನಿಷೇಧಿಸಲಾದ ಆಯಪ್‌ಗಳಲ್ಲಿ ಜನರನ್ನು ವಂಚಿಸುತ್ತಿದ್ದ ಮೋಸದ ಸಾಲ (ಲೋನ್) ಆಯಪ್‌ಗಳು ಕೂಡ ಸೇರಿವೆ ಎಂದು ತಿಳಿಸಿದೆ.

2026ರ ಜೂನ್‌ 30ರ ವೇಳೆಗೆ ದೇಶಾದ್ಯಂತ ಒಟ್ಟು 3,718 ಮೊಬೈಲ್‌ ಆಯಪ್‌ಗಳನ್ನು ಬ್ಲಾಕ್‌ ಮಾಡಲಾಗಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ತಿಳಿಸಿದ್ದಾರೆ. ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವುದಾಗಿ ಪೊಲೀಸರು ಗುರುತಿಸಿದ 15.75 ಲಕ್ಷಕ್ಕೂ ಹೆಚ್ಚು ಸಿಮ್‌ ಕಾರ್ಡ್‌ಗಳು ಹಾಗೂ 5.77 ಲಕ್ಷ ಐಎಂಇಐ (IMEI) ಸಂಖ್ಯೆಗಳನ್ನೂ ನಿಷ್ಕ್ರಿಯಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಸೈಬರ್‌ ಅಪರಾಧಗಳನ್ನು ತಡೆಯಲು ರೂಪಿಸಲಾಗಿರುವ 'ಸಿಟಿಜನ್ ಫೈನಾನ್ಶಿಯಲ್ ಸೈಬರ್ ಫ್ರಾಡ್ ರಿಪೋರ್ಟಿಂಗ್ ಅಂಡ್ ಮ್ಯಾನೇಜ್‌ಮೆಂಟ್ ಸಿಸ್ಟಮ್‌' (CFCFRMS) ಮೂಲಕ ಬಂದ 32.80 ಲಕ್ಷಕ್ಕೂ ಹೆಚ್ಚು ದೂರುಗಳನ್ನು ತ್ವರಿತವಾಗಿ ಪರಿಹರಿಸಲಾಗಿದೆ. ಇದರ ಪರಿಣಾಮವಾಗಿ ಸುಮಾರು ₹11,158 ಕೋಟಿ ಹಣ ಸೈಬರ್‌ ವಂಚಕರ ಕೈಗೆ ಸಿಗದಂತೆ ತಡೆಯಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೀದರ್ ಎಟಿಎಂ ದರೋಡೆ ಕೇಸ್ : ಬರೋಬ್ಬರಿ 19 ತಿಂಗಳ ಬಳಿಕ ಖದೀಮರು ಅರೆಸ್ಟ್ ಸೈಬರ್‌ ವಂಚನೆ ತಡೆಗೆ 3,700ಕ್ಕೂ ಹೆಚ್ಚು ಮೊಬೈಲ್‌ ಅಪ್ಲಿಕೇಶನ್‌ಗಳ ನಿಷೇಧಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ಆರ್ ವಿ ದೇಶಪಾಂಡೆ ನೇಮಕಕರ್ನಾಟಕದ ನೂತನ ಸಚಿವರಿಗೆ ಖಾತೆ ಹಂಚಿಕೆ : ಇಲ್ಲಿದೆ ಅಧಿಕೃತ ಲಿಸ್ಟ್ ಮುಧೋಳನಲ್ಲಿ ರೈತಪರ ಹಾಗೂ ಜನಪರ ಬೇಡಿಕೆಗಳಿಗೆ ಆಗ್ರಹಿಸಿ ಬಿಜೆಪಿ ವತಿಯಿಂದ ರಸ್ತೆ ತಡೆದು ಪ್ರತಿಭಟನೆಕರ್ನಾಟಕದಲ್ಲಿ ತಂಬಾಕು, ಪಾನ್ ಮಸಾಲಾ ಒಂದು ವರ್ಷದ ಅವಧಿಗೆ ನಿಷೇಧ : ರಾಜ್ಯ ಸರ್ಕಾರ ಆದೇಶನಾಳೆಯಿಂದ ಮುಂಗಾರು ಅಧಿವೇಶನ : ಡಿ.ಕೆ.ಶಿವಕುಮಾರ್ ಗೆ ಅಗ್ನಿಪರೀಕ್ಷೆ ಗಿಲ್ಲೆಸುಗೂರು ಕ್ಯಾಂಪ್‌ನಲ್ಲಿ ದೇವಸ್ಥಾನ ಹಾಗೂ ಚರ್ಚ್ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆ  ಕಾಳಗಿ ಪಟ್ಟಣದಲ್ಲಿ ರೈತರ ರಸ್ತೆ ತಡೆದು ಬೃಹತ್ ಪ್ರತಿಭಟನೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್, ಪೆನ್ ಡ್ರೈವ್ ಪತ್ತೆ : ಪ್ರಜ್ವಲ್ ರೇವಣ್ಣ ಎಫ್‌ಐಆರ್ ದಾಖಲು