LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ಬೀದರ್ ಎಟಿಎಂ ದರೋಡೆ ಕೇಸ್ : ಬರೋಬ್ಬರಿ 19 ತಿಂಗಳ ಬಳಿಕ ಖದೀಮರು ಅರೆಸ್ಟ್ 

Advertisement

ಬೀದರ್: ಇಡೀ ರಾಜ್ಯದಲ್ಲೇ ತಲ್ಲಣ ಸೃಷ್ಟಿಸಿದ್ದ ಬೀದರ್‌ನ ಎಟಿಎಂ (Bidar ATM Case) ದರೋಡೆ ಪ್ರಕರಣದ ಆರೋಪಿಗಳನ್ನು ಮಟ್ಟಹಾಕುವಲ್ಲಿ ಜಿಲ್ಲಾ ಪೊಲೀಸ್ (Crime) ತಂಡ ಕೊನೆಗೂ (Robbery) ಯಶಸ್ವಿಯಾಗಿದೆ. 

ತಲೆಮರೆಸಿಕೊಂಡಿದ್ದ ಇಬ್ಬರು ಪ್ರಮುಖ ದರೋಡೆಕೋರರನ್ನು ಬಿಹಾರದಲ್ಲಿ ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಒಂದು ವರ್ಷ ಏಳು ತಿಂಗಳ ಬಳಿಕ ಸೆರೆ

ಬಂಧಿತರನ್ನು ಅಮನ್‌ಕುಮಾರ್ ಸಿಂಗ್ ಮತ್ತು ಅಲೋಕ್‌ಕುಮಾರ್ ಎಂದು ಗುರುತಿಸಲಾಗಿದ್ದು, ಇವರನ್ನು ಬಿಹಾರದ ವೈಶಾಲಿ ಜಿಲ್ಲೆಯ ಧಾಮೋದರ್ ಗ್ರಾಮದಲ್ಲಿ ಸೆರೆಹಿಡಿಯಲಾಗಿದೆ.

ಕೃತ್ಯ ನಡೆದ ಬರೋಬ್ಬರಿ ಒಂದು ವರ್ಷ ಏಳು ತಿಂಗಳ ಸುದೀರ್ಘ ಹುಡುಕಾಟದ ಬಳಿಕ ಈ ಅಂತರ್ ರಾಜ್ಯ ದರೋಡೆಕೋರರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಸುಮಾರು ಇಪ್ಪತ್ತು ದಿನಗಳ ಹಿಂದೆಯೇ ಆರೋಪಿಗಳ ಚಲನವಲನದ ಬಗ್ಗೆ ನಿಖರ ಸುಳಿವು ಪಡೆದಿದ್ದ ಬೀದರ್ ಪೊಲೀಸರು, ಅಲ್ಲಿಯೇ ಬೀಡು ಬಿಟ್ಟು ಅವರ ಮೇಲೆ ನಿರಂತರ ನಿಗಾ ಇರಿಸಿದ್ದರು.

ಬೀದರ್ ಎಸ್‌ಪಿ ಪ್ರದೀಪ್ ಗುಂಟಿ ಅವರ ನೇತೃತ್ವದಲ್ಲಿ ರೂಪಿಸಲಾಗಿದ್ದ ವಿಶೇಷ ಕಾರ್ಯಾಚರಣೆಯ ಅನ್ವಯ, ಇಂದು ಮಧ್ಯಾಹ್ನ ಬಿಹಾರದಲ್ಲಿ ಆರೋಪಿಗಳ ಕಾರನ್ನು ಬೆನ್ನಟ್ಟಿ ಇಬ್ಬರನ್ನೂ ವಶಕ್ಕೆ ಪಡೆಯಲಾಗಿದೆ. ಸದ್ಯ ಬಂಧಿತರನ್ನು ಬೀದರ್‌ಗೆ ಕರೆತರಲಾಗುತ್ತಿದೆ.

ಈ ಕಾರ್ಯಾಚರಣೆಯ ವಿಶೇಷತೆಯೆಂದರೆ, ಸ್ಥಳೀಯ ಅಥವಾ ಬೇರೆ ಯಾವುದೇ ರಾಜ್ಯದ ಪೊಲೀಸರ ಸಹಾಯ ಪಡೆಯದೇ ಕೇವಲ ಬೀದರ್ ಪೊಲೀಸ್ ತಂಡವೇ ಈ ಜಾಲವನ್ನು ಭೇದಿಸಿದೆ.

ಈ ಭರ್ಜರಿ ಕಾರ್ಯಾಚರಣೆಯಲ್ಲಿ ಒಬ್ಬರು ಎಸ್‌ಪಿ, ಇಬ್ಬರು ಡಿಎಸ್‌ಪಿ, ಇಬ್ಬರು ಸಿಪಿಐ, ನಾಲ್ವರು ಪಿಎಸ್‌ಐ ಹಾಗೂ ಕ್ರೈಂ ವಿಭಾಗದ 12 ಸಿಬ್ಬಂದಿ ಸೇರಿದಂತೆ ಒಟ್ಟು 20ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೀದರ್ ಎಟಿಎಂ ದರೋಡೆ ಕೇಸ್ : ಬರೋಬ್ಬರಿ 19 ತಿಂಗಳ ಬಳಿಕ ಖದೀಮರು ಅರೆಸ್ಟ್ ಸೈಬರ್‌ ವಂಚನೆ ತಡೆಗೆ 3,700ಕ್ಕೂ ಹೆಚ್ಚು ಮೊಬೈಲ್‌ ಅಪ್ಲಿಕೇಶನ್‌ಗಳ ನಿಷೇಧಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ಆರ್ ವಿ ದೇಶಪಾಂಡೆ ನೇಮಕಕರ್ನಾಟಕದ ನೂತನ ಸಚಿವರಿಗೆ ಖಾತೆ ಹಂಚಿಕೆ : ಇಲ್ಲಿದೆ ಅಧಿಕೃತ ಲಿಸ್ಟ್ ಮುಧೋಳನಲ್ಲಿ ರೈತಪರ ಹಾಗೂ ಜನಪರ ಬೇಡಿಕೆಗಳಿಗೆ ಆಗ್ರಹಿಸಿ ಬಿಜೆಪಿ ವತಿಯಿಂದ ರಸ್ತೆ ತಡೆದು ಪ್ರತಿಭಟನೆಕರ್ನಾಟಕದಲ್ಲಿ ತಂಬಾಕು, ಪಾನ್ ಮಸಾಲಾ ಒಂದು ವರ್ಷದ ಅವಧಿಗೆ ನಿಷೇಧ : ರಾಜ್ಯ ಸರ್ಕಾರ ಆದೇಶನಾಳೆಯಿಂದ ಮುಂಗಾರು ಅಧಿವೇಶನ : ಡಿ.ಕೆ.ಶಿವಕುಮಾರ್ ಗೆ ಅಗ್ನಿಪರೀಕ್ಷೆ ಗಿಲ್ಲೆಸುಗೂರು ಕ್ಯಾಂಪ್‌ನಲ್ಲಿ ದೇವಸ್ಥಾನ ಹಾಗೂ ಚರ್ಚ್ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆ  ಕಾಳಗಿ ಪಟ್ಟಣದಲ್ಲಿ ರೈತರ ರಸ್ತೆ ತಡೆದು ಬೃಹತ್ ಪ್ರತಿಭಟನೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್, ಪೆನ್ ಡ್ರೈವ್ ಪತ್ತೆ : ಪ್ರಜ್ವಲ್ ರೇವಣ್ಣ ಎಫ್‌ಐಆರ್ ದಾಖಲು