LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಕೇಂದ್ರದಿಂದ 1,178.20 ಕೋಟಿ ವಿದ್ಯಾರ್ಥಿ ವೇತನ ಬಿಡುಗಡೆ 

Advertisement

ನವದೆಹಲಿ: ಕಳೆದ ಮೂರು ಹಣಕಾಸು ವರ್ಷಗಳಲ್ಲಿ ಕರ್ನಾಟಕದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಕೇಂದ್ರ ಪುರಸ್ಕೃತ ಮೆಟ್ರಿಕ್‌ ನಂತರದ ವಿದ್ಯಾರ್ಥಿವೇತನ ಯೋಜನೆಯಡಿ ₹1,178.20 ಕೋಟಿವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. 

2023-24ರಲ್ಲಿ ₹421.08 ಕೋಟಿ, 2024-25ರಲ್ಲಿ ₹422.90 ಕೋಟಿ ಮತ್ತು 2025-26ರಲ್ಲಿ ₹334.22 ಕೋಟಿ ಕೇಂದ್ರದ ಪಾಲನ್ನು ರಾಜ್ಯಕ್ಕೆ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ಮಾಹಿತಿ ನೀಡಿದೆ.

ರಾಜ್ಯದಲ್ಲಿ ಪರಿಶಿಷ್ಟ ಜಾತಿ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ನೀಡಿದ ಅನುದಾನದ ಕುರಿತು ರಾಜ್ಯಸಭೆಯಲ್ಲಿ ಕೇಳಲಾದ ಚುಕ್ಕೆಗುರುತಿಲ್ಲದ ಪ್ರಶ್ನೆಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ರಾಮದಾಸ್ ಅಠಾವಳೆ ಅವರು ಈ ಉತ್ತರ ನೀಡಿದ್ದಾರೆ.

2017ರಲ್ಲೇ ಮಾರ್ಗಸೂಚಿ

ಪರಿಶಿಷ್ಟ ಜಾತಿಗಳ ಅಭಿವೃದ್ಧಿ ಕ್ರಿಯಾ ಯೋಜನೆ (ಡಿಎಪಿಎಸ್‌ಸಿ) ಕುರಿತೂ ಮಾಹಿತಿ ನೀಡಿರುವ ಅಠಾವಳೆ, ʻಡಿಎಪಿಎಸ್‌ಸಿʼ ಅಡಿ ಹಣವನ್ನು ಮೀಸಲಿಡಲು ನೀತಿ ಆಯೋಗವು 2017ರಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಿದೆ ಎಂದು ತಿಳಿಸಿದ್ದಾರೆ.

ಅದರ ಪ್ರಕಾರ ಜವಾಬ್ದಾರಿಯುತ ಪ್ರತಿ ಸಚಿವಾಲಯ/ಇಲಾಖೆಯು ತನ್ನ ಆಯಾ ಯೋಜನೆಗಳ ಮೂಲಕ ಪರಿಶಿಷ್ಟ ಜಾತಿಗಳ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗಾಗಿ ʻಡಿಎಪಿಎಸ್‌ಸಿʼ ಅಡಿ ಅನುದಾನ ಮಂಜೂರು ಮಾಡುತ್ತದೆ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ರಾಮದಾಸ್ ಅಠಾವಳೆ ತಿಳಿಸಿದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗರ‍್ನೋರ್ ಬ್ರಾರ್ ಪ್ರತಿಭಾವಂತ ವೇಗಿ: ಜಹೀರ್ ಖಾನ್ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಕೇಂದ್ರದಿಂದ 1,178.20 ಕೋಟಿ ವಿದ್ಯಾರ್ಥಿ ವೇತನ ಬಿಡುಗಡೆ ಹಂಪಿಯಲ್ಲಿ ನಾಗಿಣಿ ಹಾಗೂ ಗರುಡನನ್ನು ಹೋಲುವ ಶಿಲ್ಪಗಳು ಪತ್ತೆಇಂದು ಐರ್ಯಲೆಂಡ್- ಅಪಘಾನಿಸ್ತಾನ್ ೩ ನೇ ಏಕದಿನ ಪಂದ್ಯಇನ್ಮುಂದೆ ಹೋಟೆಲ್‌ಗಳ ಅಡುಗೆ ಮನೆಯಲ್ಲಿ ಕ್ಯಾಮೆರಾ ಅಳವಡಿಕೆ ಕಡ್ಡಾಯ : ಯು. ಟಿ ಖಾದರ್ ಮಗು ಆರೈಕೆ ಮಾಡಲು ಆಗದೇ 50 ದಿನದ ಹಸುಗೂಸನ್ನ ಹತ್ಯೆ : ನಾಲ್ವರು ಅರೆಸ್ಟ್ ಖಾತೆ ಹಂಚಿಕೆ ಅರ್ಜೆಂಟ್ ಇಲ್ಲ, ಅಧಿವೇಶನದಲ್ಲಿ ನಾನೇ ಉತ್ತರಿಸುತ್ತೇನೆ : ಡಿ. ಕೆ ಶಿವಕುಮಾರ್ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒಂದು ರೂಪಾಯಿ ಶುಲ್ಕದಲ್ಲಿ ಸ್ಪರ್ಧಾತ್ಮಕ ತರಬೇತಿವೈದ್ಯರಿಲ್ಲದೆ ಖಾಲಿ ಖಾಲಿ ಆರೋಗ್ಯ ಕೇಂದ್ರ: ಮಾಜಿ ಸಂಸದ ಡಾ. ಉಮೇಶ್ ಜಾಧವ್ ದಿಢೀರ್ ಭೇಟಿಗುರು ಪೂರ್ಣಿಮಾದಂದು  ಸರ್ವ ಲೋಕ ಸೇವಾ ಫೌಂಡೇಶನ್ ವತಿಯಿಂದ ಸಸಿಗಳ ನೀಡುವ ಕಾರ್ಯಕ್ರಮ