LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ಯರಗಟ್ಟಿಯಲ್ಲಿ ಆಸ್ತಿ ವಿಚಾರಕ್ಕೆ ಅತ್ತೆ - ಅಳಿಯನ ಬರ್ಬರ ಹತ್ಯೆ

Advertisement

ಬೆಳಗಾವಿ: ಬೆಳಗಾವಿ (Belagavi) ಜಿಲ್ಲೆಯ ಯರಗಟ್ಟಿ ತಾಲೂಕಿನ ಜೀವಾಪುರ ಗ್ರಾಮದಲ್ಲಿ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಅತ್ತೆ ಹಾಗೂ ಅಳಿಯನನ್ನು ಬರ್ಬರವಾಗಿ ಹತ್ಯೆ (Murder) ಮಾಡಿರುವ ಆಘಾತಕಾರಿ (Shocking) ಘಟನೆ ನಡೆದಿದೆ.

ಗ್ರಾಮದ ನಿವಾಸಿಗಳಾದ ರಮೇಶ್ ಹಣಮಂತ ನಾಯ್ಕರ (29) ಹಾಗೂ ಅತ್ತೆ ಬಸವ್ವ ಭೀಮಪ್ಪ ನಾಯ್ಕರ (60) ಕೊಲೆಯಾದ ದುರ್ದೈವಿಗಳು.

ಆಸ್ತಿ ಹಂಚಿಕೆ ವಿಚಾರವಾಗಿ ಉಂಟಾಗಿದ್ದ ಕಲಹ ವಿಕೋಪಕ್ಕೆ ತಿರುಗಿದ್ದು, ಇದೇ ದ್ವೇಷದಿಂದ ಈ ಭೀಕರ ಕೃತ್ಯ ಎಸಗಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಡಿವೈಎಸ್ಪಿ ಮಡಿವಾಳರ ಅವರು ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಒಂದೇ ಗ್ರಾಮದಲ್ಲಿ ಇಬ್ಬರು ಕೊಲೆಯಾಗಿರುವುದು ಜೀವಾಪುರ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ.

ಈ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Advertisement

Author
bharathvaibhavx
📰 BV News 5 | Kannada | English
Voice of the People
📲 Breaking News,
📡 Latest Updates,
🎥 Exclusive Stories,
🌍 Stay informed, stay ahead.
✅ Follow us here 👇🏻
@bv_news_5
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
20 ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ : ತಿಂಗಳಿಗೆ 1.40 ಲಕ್ಷ ರೂ. ವರೆಗೆ ವೇತನಕಣ್ಣಿಗೆ ಬಟ್ಟೆ ಕಟ್ಟಿಕೊಂಡು 5 ಭಾಷೇಲಿ ಹಾಡುತ್ತ ಕ್ರೋಷೆ ಟೊಪ್ಪಿ ತಯಾರಿಸಿ ಬಾಲಕಿ ವಿಶ್ವ ದಾಖಲೆ ನ್ಯೂಜಿಲೆಂಡ್ ತಂಡವನ್ನು 356 ರನ್ ಗಳಿಗೆ ಕಟ್ಟಿ ಹಾಕಿದ ಭಾರತ ತಂಡ ಮಹಿಳಾ ಮೀಸಲಾತಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅಸ್ತು: ಲೋಕಸಭೆಯಲ್ಲಿ ಶೇ.50ರಷ್ಟು ಹೆಚ್ಚಳಕ್ಕೆ ಪ್ರಸ್ತಾವನೆ ನೀಚ ರವಿ ಹಂಜ್​​​​​ನ ಮತ್ತೊಂದು ವಿವಾದಾತ್ಮಕ ಹೇಳಿಕೆ: ವೀರಭದ್ರ, ಪಾರ್ವತಿ ದೇವಿ ಅವಹೇಳನಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಗೆ 7 ವಿಕೆಟ್ ಗಳ ಸುಲಭ ಗೆಲುವು ಮಹಿಳಾ ಐಎಎಸ್ ಅಧಿಕಾರಿಗೆ ಲೈಂಗಿಕ ಕಿರುಕುಳ ಆರೋಪ: ಶಾಸಕ ಅರುಳ್ ವಿಘ್ನೇಶ್ ಅರೆಸ್ಟ್ ನಾಯಕತ್ವ ಬದಲಾವಣೆ ಚರ್ಚೆ ಅಪ್ರಸ್ತುತ: ಸತೀಶ್ ಜಾರಕಿಹೊಳಿಕುರುಕಲು ತಿಂಡಿ ಪ್ಯಾಕೆಟ್​​​​​​​​​ನಲ್ಲಿನ ಆಟಿಕೆ ನುಂಗಿ 4 ವರ್ಷದ ಮಗು ಸಾವು!ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದರೆ ಎರಡು ಹಸು ವಿತರಣೆ : ಕುಮಾರಸ್ವಾಮಿ ಘೋಷಣೆ