LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

 ಪೌರಕಾರ್ಮಿಕರನ್ನು ಸನ್ಮಾನಿಸಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ 

Advertisement

ವಿಜಯಪುರ : ಪ್ರತಿನಿತ್ಯ ಮಳೆ. ಚಳಿ ಎನ್ನದೇ ಸ್ವಚ್ಛತೆಯ ಮೂಲಕ ನಗರವನ್ನು ಸ್ವಚ್ಚಗೊಳಿಸಿ ಪ್ರತಿಯೊಬ್ಬರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸುವ ಪೌರಕಾರ್ಮಿಕರಿಗೆ ಭಾರತೀಯ ಜನತಾ ಪಕ್ಷದ ನಗರ ಘಟಕದ ನೇತೃತ್ವದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಗೌರವಪೂರ್ವಕ ಸನ್ಮಾನ ನೇರವೇರಿಸಿ ಉಡುಗೊರೆ ನೀಡಿ ಅವರ ಕೊಡುಗೆಗೆ ಧನ್ಯತಾ ನುಡಿಗಳನ್ನು ಅರ್ಪಿಸಿದರು.

news_1791553995_5_136.webp

news_1791553994_0_667.webp

 


ವಿಜಯಪುರದ ಸಾಯಿ ಗಾರ್ಡ್ನ್ ಸಭಾಂಗಣದಲ್ಲಿ ೭೫೦ ಕ್ಕೂ ಹೆಚ್ಚು ಪೌರಕಾರ್ಮಿಕರಿಗೆ ವಿಶೇಷ ಉಡುಗೊರೆ ನೀಡಿ ಅವರನ್ನು ಸನ್ಮಾನಿಸಿ ಅವರ ಮೇಲೆ ಪುಷ್ಪವೃಷ್ಟಿಗೈದು ಹೃದಯಪೂರ್ವಕವಾಗಿ ಅವರ ಕಾರ್ಯಕ್ಕೆ ಧನ್ಯವಾದ ಅರ್ಪಿಸಲಾಯಿತು. ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಇಂದು ನಮ್ಮ ನಾಡು ಸ್ವಚ್ಛವಾಗಿರಲು ಪೌರಕಾರ್ಮಿಕ ಬಂಧುಗಳ ಶ್ರಮವೇ ಕಾರಣ, ಪೌರಕಾರ್ಮಿಕರು ಸ್ವಚ್ಛತೆಯ ರಾಯಭಾರಿಗಳು, ಪೌರಕಾರ್ಮಿಕರ ಬಗ್ಗೆ ಬಿಜೆಪಿ ಯಾವತ್ತೂ ಆಳವಾದ ಗೌರವ ಹಾಗೂ ಶ್ರದ್ಧೆ ಹಾಗೂ ಕಾಳಜಿ ಹೊಂದಿದೆ, ಬಿ.ಎಸ್. ಯಡಿಯೂರಪ್ಪ ಅವರು ಕೋವಿಡ್ ಸಂದರ್ಭದಲ್ಲಿ ಪೌರಕಾರ್ಮಿಕ ಬಂಧುಗಳಿಗಾಗಿಯೇ ಅಭಯ ನೀಡುವ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದರು, ನಂತರ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಅನೇಕ ವರ್ಷಗಳಿಂದ ಆಗದೇ ಇದ್ದ ೫ ಸಾವಿರಕ್ಕೂ ಅಧಿಕ ಪೌರಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಲಾಯಿತು, ಇದು ಪೌರಕಾರ್ಮಿಕರಿಗೆ ಸಂಬAಧಿಸಿದAತೆ ನಮ್ಮ ಪಕ್ಷಕ್ಕೆ ಇರುವ ಕಾಳಜಿ ಹಾಗೂ ಬದ್ಧತೆ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರಂತೂ ಪೌರಕಾರ್ಮಿಕರನ್ನು ಶ್ರದ್ಧೆಯಿಂದ ಕಾಣುವ ರೀತಿ ಪ್ರತಿಯೊಬ್ಬರಿಗೂ ಮಾದರಿ, ಪೌರಕಾರ್ಮಿಕ ಬಂಧುಗಳ ಪಾದಪೂಜೆ ನೇರವೇರಿಸುವ ಮೂಲಕ ಪೌರಕಾರ್ಮಿಕರ ಕರ್ತವ್ಯಕ್ಕೆ ಗೌರವವನ್ನು ನೀಡುವ ಕಾರ್ಯವನ್ನು ಪ್ರಧಾನಿ ಮೋದಿಜಿ ಮಾಡಿದ್ದಾರೆ, ಅವರ ಆದರ್ಶದ ಬೆಳಕಿನಲ್ಲಿ ಸಾಗಿ ನಾವು ಪೌರಕಾರ್ಮಿಕರನ್ನು ಅತ್ಯಂತ ಗೌರವದಿಂದ ಕಾಣಬೇಕು, ಪೌರಕಾರ್ಮಿಕರು ತಮ್ಮ ಮಕ್ಕಳನ್ನು ಶಿಕ್ಷಣವಂತರಾಗಿಸಬೇಕು, ಅವರು ಉನ್ನತ ಹುದ್ದೆ ಅಲಂಕರಿಸುವ ನಿಟ್ಟಿನಲ್ಲಿ ಶಿಕ್ಷಣವೇ ಆಧಾರ, ಹೀಗಾಗಿ ಈ ವಿಷಯಕ್ಕೆ ಹೆಚ್ಚಿನ ಗಮನ ಹರಿಸಿ ಎಂದರು.

news_1791553994_1_274.webp

 


ಪೌರಕಾರ್ಮಿಕರ ಸನ್ಮಾನ ಎಂದರೆ ಹತ್ತು-ಹದಿನೈದು ಜನರಿಗೆ ಇರಬಹುದು ಎಂದೇ ಭಾವಿಸಿದ್ದೇ, ಆದರೆ ೭೫೦ ಕ್ಕೂ ಹೆಚ್ಚು ಪೌರಕಾರ್ಮಿಕರಿಗೆ ಏಕಕಾಲಕ್ಕೆ ಸನ್ಮಾನ ಮಾಡುತ್ತಿರುವುದು ಒಂದು ಅದ್ಭುತ ಕಾರ್ಯವೇ ಸರಿ, ಈ ಕಾರ್ಯಕ್ರಮದ ರೂವಾರಿಯಾಗಿರುವ ಉಮೇಶ ಕಾರಜೋಳರಿಗೆ ವಿಶೇಷ ಧನ್ಯವಾದ ಅರ್ಪಿಸುವೆ ಎಂದರು. 
ಈ ವಿಶೇಷ ಕಾರ್ಯಕ್ರಮವನ್ನು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ಉಮೇಶ ಕಾರಜೋಳ ಅವರ ಸಾರಥ್ಯದಲ್ಲಿ ಸಂಘಟಿಸಲಾಗಿತ್ತು. 

news_1791553994_2_556.webp

news_1791553994_3_976.webp

 

ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮೇಯರ್ ಎಂ.ಎಸ್. ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಉಪಮೇಯರ್ ಸುಮಿತ್ರಾ ಜಾಧವ, ಬಿಜೆಪಿ ನಗರ ಘಟಕದ ಅಧ್ಯಕ್ಷ ಸಂದೀಪ ಪಾಟೀಲ, ಮಾಜಿ ಸದಸ್ಯ ಅರುಣ ಶಹಾಪೂರ, ಬೆಳಗಾವಿ ವಿಭಾಗ  ಸಹ ಪ್ರಭಾರಿಗಳಾದ ಬಸವರಾಜ ಯಂಕAಚಿ, ವಿಜುಗೌಡ ಪಾಟೀಲ,

ಮಹೇಶ ಒಡೆಯರ, ಜವಾಹರ್ ಗೋಸಾವಿ, ಮಹೇಶ ಒಡೆಯರ್, ಉಮೇಶ ವಂದಾಲ, ಆನಂದ ಮುಚ್ಚಂಡಿ, ಚಿದಾನಂದ ಛಲವಾದಿ, ಕೃಷ್ಣ ಗುನ್ನಾಳಕರ, ವಿಜಯ ಜೋಶಿ, ಈರಣ್ಣ ರಾವೂರ, ಸಾಬು ಮಾಶ್ಯಾಳ, ವಿಠ್ಠಲ ಹೊಸಪೇಟ, ರಜನಿ ಸಂಬಣ್ಣಿ, ಶಿಲ್ಪಾ ಕುದರಗುಂಡ, ಪರಶುರಾಮ ರಜಪೂತ, ಉಮೇಶ ವಂದಾಲ, ರಮೇಶ ಬಿದನೂರ, ಮಹೇಶ ಒಡೆಯರ, ರಾಜೇಶ ತಾವಸೆ, ಶ್ರೀಕಾಂತ ಪಾಲ್ಗೊಂಡಿದ್ದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತರಗತಿಯಲ್ಲಿಯೇ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು; ಸಿಸಿಟಿವಿಯಲ್ಲಿ ದೃಶ್ಯ ಸೆರೆತರಗತಿಯಲ್ಲಿಯೇ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು; ಸಿಸಿಟಿವಿಯಲ್ಲಿ ದೃಶ್ಯ ಸೆರೆಬಿಷ್ಣೋಯ್ ಗ್ಯಾಂಗ್ ಹೆಸರಲ್ಲಿ ಬಾಲಿವುಡ್ ನಟರಿಗೆ ಬೆದರಿಕೆ : ಬೆಂಗಳೂರಿನ ಟೆಕ್ಕಿ ಅರೆಸ್ಟ್ ಡೀಸೆಲ್ ಬೆಲೆ ಹೆಚ್ಚಾದಾಗ ಯಾರೂ ಮಾತನಾಡಲಿಲ್ಲ : ಡಿ. ಕೆ ಶಿವಕುಮಾರ್ ಅಗ್ನಿವೀರರ ಸೇವಾ ಅವಧಿ ಮತ್ತೆ 2 ವರ್ಷ ವಿಸ್ತರಣೆ : ಕೇಂದ್ರ ಅನುಮೋದನೆ ಕಬ್ಬಿನ ಬೆಳೆಗಾರರ ಸಂಧಾನ ಸಭೆಗಳು ವಿಫಲ : ಡಿಸಿ ಕಚೇರಿಗೆ ಬೀಗ ಹಾಕಲು‌ ಯತ್ನಿಸಿದ ರೈತರು ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 5 ವಿಕೆಟ್ ಗಳ ಸುಲಭ ಜಯಅಸ್ಸಾಮ್ ವಿರುದ್ಧ ಕರ್ನಾಟಕಕ್ಕೆ ಇನ್ನಿಂಗ್ಸ್ 314 ರನ್ ಗಳ ದೊಡ್ಡ ಗೆಲುವು ಗೃಹಲಕ್ಷ್ಮಿಯರ 5 ಸಾವಿರ ಕೋಟಿ ರೂ. ಹಣ ಎಲ್ಲಿ ಹೋಯಿತು? : ನಿಖಿಲ್ ಕುಮಾರಸ್ವಾಮಿಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ನಿಯಮ ಅಪ್ರಸ್ತುತ