Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರಿಯತಮನೊಂದಿಗೆ ಓಡಿಹೋಗಲು ಪತಿ ಮನೆಯಲ್ಲಿಯೇ ಕಳ್ಳತನ : ಇಬ್ಬರು ಅರೆಸ್ಟ್

Advertisement

ಬೆಳಗಾವಿ: ನವವಿವಾಹಿತೆಯೊಬ್ಬಳು ತನ್ನ ಪ್ರಿಯತಮನೊಂದಿಗೆ ಓಡಿಹೋಗಲು ಪತಿ ಮನೆಯಲ್ಲಿಯೇ ಕಳ್ಳತನ ಮಾಡಿರುವ ವಿಚಿತ್ರ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

ಹಸೀನಾ ಎಂಬಾಕೆ ಎರಡು ತಿಂಗಳ ಹಿಂದಷ್ಟೆ ಶರೀಫ್ ಎಂಬಾತನ ಜೊತೆ ವಿವಾಹವಾಗಿ ಗಂಡನ ಮನೆಗೆ ಬಂದಿದ್ದಾಳೆ.

ವಿವಾಹಕ್ಕೂ ಮುನ್ನವೇ ಹಸೀನಾ ಬೇರೊಬ್ಬನ ಪ್ರೀತಿಯಲ್ಲಿ ಬಿದ್ದಿದ್ದಳು.ಪ್ರಿಯಕರನ ಜೊತೆ ಎಸ್ಕೇಪ್ ಆಗಲು ಪತಿಯ ಮನೆಗೆ ಕನ್ನ ಹಾಕಿದ್ದಾಳೆ.

ಹಸೀನಾ ತನ್ನ ಪ್ರಿಯಕರ ಹಣಮಂತ ಮಾರಾಪೂರ ಜೊತೆ ಸೇರಿ ಪತಿ ಶರೀಫ್ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ. ಈ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹೊಸಕೋಟಿ ಗ್ರಾಮದಲ್ಲಿ ನಡೆದಿದೆ.‌

ಹಸೀನಾ ಪತಿಯ ಮನೆಯಲ್ಲಿದ್ದ 21 ಲಕ್ಷ ಮೌಲ್ಯದ ‌154.6 ಗ್ರಾಂ ಚಿನ್ನಾಭರಣ. 11 ಸಾವಿರ ಮೌಲ್ಯದ 45ಗ್ರಾಂ ಬೆಳ್ಳಿಯ ಆಭರಣ ಕಳ್ಳತನ ಮಾಡಿದ್ದಾಳೆ. ಕೂಡಲೆ ಕಳ್ಳತನದ ಬಗ್ಗೆ ದಿಲಶಾದ್ ನದಾಫ್ ಎಂಬುವವರಿಂದ ಕಟಕೋಳ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಮದುರ್ಗ ಸಿಪಿಐ ವಿನಾಯಕ ಬಡಿಗೇರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಕೇವಲ 48 ಗಂಟೆಯಲ್ಲಿ ಕಳ್ಳರನ್ನು ಬಂಧಿಸಿದ್ದಾರೆ.

ಮೂಲತಃ ಮೂಡಲಗಿ ತಾಲೂಕಿನ ನಿವಾಸಿಯಾಗಿರುವ ಹಸೀನಾ ನದಾಫ್ ಕಳೆದ ಎರಡು ತಿಂಗಳ ಹಿಂದೆ ಹೊಸಕೋಟಿ ಗ್ರಾಮದ ಶರೀಫ್ ಜೊತೆ ವಿವಾಹವಾಗಿದ್ದಳು.

ಆದರೆ ಮದುವೆಯಾದ ಬಳಿಕವೂ ತನ್ನ ಪ್ರೀಯಕರ ಹಣಮಂತನ ಸಂಪರ್ಕದಲ್ಲಿದ್ದಳು. ಇಬ್ಬರೂ ಸೇರಿ ಶರೀಫ್ ಮನೆಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದರು.

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೈಗಾರಿಕೆ ಸ್ಥಾಪಿಸಲು ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ : ಕುಮಾರಣ್ಣ ಬೇಸರ98ರ ವೃದ್ಧನ ಕಾಲಿಗೆ ಬಿದ್ದ ನರೇಂದ್ರ ಮೋದಿ : ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಪಶ್ಚಿಮ ಬಂಗಾಳ ಪ್ರಿಯತಮನೊಂದಿಗೆ ಓಡಿಹೋಗಲು ಪತಿ ಮನೆಯಲ್ಲಿಯೇ ಕಳ್ಳತನ : ಇಬ್ಬರು ಅರೆಸ್ಟ್ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಸಿಎಂ ಆಗಿ ಸುವೇಂದು ಅಧಿಕಾರಿ ಪ್ರಮಾಣವಚನ ಸ್ವೀಕಾರ ಬಾಗಲಕೋಟೆ: ಜಿಲ್ಲಾ ಆಸ್ಪತ್ರೆಯಲ್ಲಿ ಹಿಂದೂ ಯುವತಿ ಮೇಲೆ ದೌರ್ಜನ್ಯ - ಆಕ್ರೋಶಯಾದಗಿರಿ ಲೋಕಾಯುಕ್ತದ 'ಮಿಂಚಿನ ದಾಳಿ': ಲಕ್ಷದ ಲಂಚದೊಂದಿಗೆ ಗುರುಮಠಕಲ್ ಪಿಐ ಅರೆಸ್ಟ್!ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಲು ಸುರೇಶ್ ನಾಯಕ ಒತ್ತಾಯ! ಇಂದು ಸ್ಪಂದನ ಆಸ್ಪತ್ರೆಯಲ್ಲಿ ಡಾ ಸಮಿತ್ ದೇಶಪಾಂಡೆ ಲಭ್ಯಮಹೀಂದ್ರಾ ಥಾರ್ ಹರಿದು ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು : ಮೂವರು ವಿದ್ಯಾರ್ಥಿನಿ ಗಂಭೀರನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಇಬ್ಬರು ವಿದ್ಯಾರ್ಥಿನಿಯರು ದಾರುಣ ಸಾವು