Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಲ್ಲಮ್ಮನ ಬೆಳವಡಿಯಲ್ಲಿ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ 

Advertisement

                                                                   
ಮಲ್ಲಮ್ಮನ ಬೆಳವಡಿ :ಗಣಿತ ಕಲಿಕಾ ಆಂದೋಲನ, ಅಕ್ಷರ ಪೌಂಡೇಶನ್ ಶೈಕ್ಷಣಿಕ ಸ್ವಯಂಸೇವಕರು ಹಾಗೂ ಸಮುದಾಯದ ಸಹಭಾಗಿತ್ವದಲ್ಲಿ ಗ್ರಾಮಮಟ್ಟದ ಉಚಿತ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ವನ್ನು  ಹಮ್ಮಿಕೊಳ್ಳಲಾಯಿತು ಈ ಕಾರ್ಯಕ್ರಮದಲ್ಲಿ ಒಟ್ಟು 32 ವಿದ್ಯಾರ್ಥಿಗಳು ಭಾಗಿಯಾಗಿದ್ದು ನಿರ್ಮಲ ಹಾಗೂ ಸುಕನ್ಯಾ ವಿದ್ಯಾರ್ಥಿನಿಯರು ಕಾರ್ಯಕ್ರಮದ ನಿರೂಪಣೆ ಮಾಡಿದರು ದೀಪ ಹಾಗೂ ಸಂಗಡಿಗರು ಪ್ರಾರ್ಥನಾ ಗೀತೆಯನ್ನು ಹಾಡಿದರು.
news_1779099843_0_122.webp

 

ಕಾರ್ಯಕ್ರಮದಲ್ಲಿ ಸ್ವಾಗತವನ್ನು ಪ್ರೀತಿ ಆನಿಗೊಳ್  ವಿದ್ಯಾರ್ಥಿಯು ಸ್ವಾಗತ ಭಾಷಣ ಮಾಡಿದರು ಅತಿಥಿಗಳಾಗಿ ಆಗಮಿಸಿದ ಪ್ರಕಾಶ್ ಹುಂಬಿ,  ಎಸ್ ಡಿ ಎಂ ಸಿ ಅಧ್ಯಕ್ಷರಾದ ಬಸಪ್ಪ ಪೂಜಾರಿ ಹಾಗೂ ಈರಯ್ಯ ರೇವಯ್ಯನವರ, ವೀರಣ್ಣ ಹತ್ತರಕ್ಕೆ, ಮುಖ್ಯೋಪಾಧ್ಯಾಯರಾದ ಎಸ್ ಎಸ್ ಅಗಸಿಬಾಗಿಲ ಶೈಕ್ಷಣಿಕ ಸ್ವಯಂಸೇವಕರು ಹಾಗೂ ಊರಿನ ಗಣ್ಯರು ಸಸಿಗೆ ನೀರು ನೀಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಕಾರ್ಯಕ್ರಮ ಉದ್ದೇಶ ಹಾಗೂ ಪ್ರಾಸ್ತಾವಿಕ ನುಡಿಯನ್ನು ಅಕ್ಷರ ಫೌಂಡೇಶನ್ದ ಕ್ಲಸ್ಟರ್ ಆದ ಗಿರಿಗೌಡ ಪಾಟಿಲ್    ಅವರು ನಾಲ್ಕು ವಾರದ ಅಭ್ಯಾಸ ಚಟುವಟಿಕೆಗಳನ್ನು ನೀಡಿದ್ದರ ಬಗ್ಗೆ ತಿಳಿಸಿ ಸ್ವ ಕಲಿಕೆ  ಬಗ್ಗೆ ಹೆಚ್ಚು ಒತ್ತು ನೀಡುತ್ತಿರುವ ಅಕ್ಷರ ಫೌಂಡೇಶನ್ ದ  ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು ನಾಲ್ಕು ವಾರದ ನಾಲ್ಕು ಅಭ್ಯಾಸ ಚಟುವಟಿಕೆಗಳಾದ ಗ್ರಾಮದ ನಕ್ಷೆ ಹಾಗು ಗ್ರಾಮದ ಸಮೀಕ್ಷೆ, ಗಿಡ ಮರಗಳ ಹೆಸರು ಮತ್ತು ಬೆಳೆಗಳ ಹೆಸರು, ಎರಡು ಮೂರು ಹಾಗೂ ನಾಲ್ಕು ಅಕ್ಷರ ಪದಗಳ ಬರೆದುಕೊಂಡು ಬರುವುದು ಹಾಗೂ ನಾಲ್ಕನೇದಾಗಿ 5 ಚಿತ್ರ ಗಳನ್ನು ಬಿಡಿಸುವುದರ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿ ಅವುಗಳನ್ನು ಅಚ್ಚುಕಟ್ಟಾಗಿ ವಿದ್ಯಾರ್ಥಿಗಳು ಮಾಡುವದನ್ನು ವಿದ್ಯಾರ್ಥಿಗಳೇ ತಾವೇ ತಮ್ಮ ಅಭ್ಯಾಸ ಚಟುವಟಿಕೆಗಳನ್ನು ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲು ತಿಳಿಸಿದರು.

ನಂತರ ಕಾರ್ಯಕ್ರಮ ಹಾಗೂ ಮಕ್ಕಳನ್ನು ಉದ್ದೇಶಿ ಅತಿಥಿಗಾಗಿ ಆಗಮಿಸಿದ ಗ್ರಾಮದ ಸ್ವಯಂಸೇವಕರಾದ ಗ್ರಾಮದ ಸೇವೆಯಲ್ಲಿ ನಿರತ ಇರುವ ಪ್ರಕಾಶ್ ಹುಂಬಿ ಅವರು ವಿದ್ಯಾರ್ಥಿಗಳ ಶಿಕ್ಷಣ, ವಿದ್ಯಾರ್ಥಿಗಳು ಯಾವ ರೀತಿ ಶಿಕ್ಷಣದಲ್ಲಿ ಪಾಲ್ಗೊಳ್ಳಬೇಕು, ಎಲ್ಲರೂ ಸಾಧನೆಯನ್ನು ಯಾವ ರೀತಿಯಾಗಿ ಮಾಡಬೇಕೆಂಬುದನ್ನು ವಿದ್ಯಾರ್ಥಿಗಳಿಗೆ ಮನಮುಟ್ಟು ಹಾಗೆ ತಿಳಿಸಿದರು. ನಂತರ ಎಸ್​ಡಿಎಂಸಿ ಅಧ್ಯಕ್ಷರಾದ ಈರಯ್ಯ ರೇವಯ್ಯನವರ ಅಕ್ಷರ ಫೌಂಡೇಶನ್ ಹಾಕಿಕೊಳ್ಳುವ ಕಾರ್ಯಕ್ರಮದ ಮಕ್ಕಳಿಗೆ ಯಾವ ರೀತಿ ಪ್ರಯೋಜನವಾಗುತ್ತದೆ ಎಂಬುದರ ಬಗ್ಗೆ ಮಾತನಾಡಿದರು. ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯ ಮುಖ್ಯೋಪಾಧ್ಯರಾದ ಎಸ್ ಎಸ್ ಅಗಸಿಬಾಗಿಲು ಸರ್ ಆಡಿ ನೋಡಿ ಮಾಡಿ ಕಲಿ ಎಂಬುದರ ಆಧಾರದ ಮೇಲೆ ಅಕ್ಷರ ಫೌಂಡೇಶನ್ ಕಾರ್ಯಕ್ರಮಗಳನ್ನು ನೀಡುತ್ತಿರುವುದು ಒಳ್ಳೆಯ ವಿಚಾರ ಎಂಬುವುದರ ಕುರಿತು ಮಾತನಾಡಿದರು. ಸಮಾರಂಭಕ್ಕೆ ಆಗಮಿಸಿದ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಸೇವೆ ಸಲ್ಲಿಸುತ್ತಿರುವ ಬೆಳವಡಿಯ ಗ್ರಾಮಸ್ಥರಾದ ವೀರಣ್ಣ ಹತ್ತರಕ್ಕಿ ಅವರು ವಿದ್ಯಾರ್ಥಿಗಳಿಗೆ ಶಿಸ್ತು ಪರಿಶ್ರಮ ದಯೆ ಬಗ್ಗೆ ತಿಳಿಸಿದರು.

ವಿದ್ಯಾರ್ಥಿಗಳು ಗಣಿತ ಹಾಗೂ ಇಂಗ್ಲಿಷ್ ವಿಷಯವನ್ನು ಯಾವ ರೀತಿ ಕಲಿಯಬೇಕೆಂಬುದನ್ನು ಜಪಾನ ವಿಧಾನ ಬಗ್ಗೆ ತಿಳಿಸಿದರು.ನಂತರ ಎಲ್ಲಾ ಗಣ್ಯರು ಅಕ್ಷರ ಫೌಂಡೇಶನ್ ನೀಡಿರುವ ಉಚಿತ ಕಥೆ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ನೀಡಿದರು ನಂತರ ಸ್ವಯಿಚ್ಛೆಯಿಂದ ವಿದ್ಯಾರ್ಥಿಗಳಿಗೆ ಲಘು ಉಪಹಾರದ ವ್ಯವಸ್ಥೆಯನ್ನು ಎಸ್ ಡಿ ಎಮ್ ಸಿ ಅಧ್ಯಕ್ಷರು, ಶೈಕ್ಷಣಿಕ ಸ್ವಯಂಸೇವಕರು ನಿರ್ವಹಿಸಿದರು ಕಾರ್ಯಕ್ರಮದಲ್ಲಿ ಚಂಬಯ್ಯ ರೇವಯ್ಯನವರ, ಸುರೇಶ್ ಮೇದಾರ್ ಹಾಗೂ ಸೋಮನಿಂಗ್ ಬಾಗೇವಾಡಿ. ಸ್ವಯಂಸೇವಕರಾದ ಸಂಗಯ್ಯ ಚಚಡಿ ಹಾಗೂ ಮಂಜುನಾಥ್ ಹುಕ್ಕೇರಿ ಹಾಗೂ ಊರಿನ ಪಾಲಕರು ಭಾಗವಹಿಸಿದ್ದರು.

ವರದಿ ದುಂಡಪ್ಪ ಹೂಲಿ      

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ತುಮಕೂರಿನಲ್ಲಿ ಕಾಂಗ್ರೆಸ್ ಸಾಧನಾ ಸಮಾವೇಶ : 1.53 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಉಚಿತ ಆಧಾರ್ ನವೀಕರಣದ ಗಡುವು ಒಂದು ವರ್ಷದವರೆಗೆ ವಿಸ್ತರಣೆಸಾರಿಗೆ ನೌಕರರೊಂದಿಗೆ ರಾಜ್ಯ ಸರ್ಕಾರದ ಮಾತುಕತೆ ವಿಫಲ : ನಾಳೆಯಿಂದ ಪ್ರತಿಭಟನೆ ಗ್ರಾಹಕರಿಗೆ ಮತ್ತೆ ಮರ್ಮಘಾತ : ಪೆಟ್ರೋಲ್ - ಡೀಸೆಲ್ ಬೆಲೆ 90 ಪೈಸೆ ಹೆಚ್ಚಳಪಾಕಿಸ್ತಾನ್‌ಗೆ ಗೆಲ್ಲಲು ೪೩೭ ರನ್‌ಗಳ ಗುರಿಮೇ 20ರಂದು ದೇಶವ್ಯಾಪಿ ಮೆಡಿಕಲ್ ಶಾಪ್ ಗಳು ಬಂದ್ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆಯ ಕಟ್ಟಿ ಹಾಕಿ ಚಿತ್ರಹಿಂಸೆ : ಸಾರ್ವಜನಿಕ ತೀವ್ರ ಆಕ್ರೋಶ ಡ್ರೈವರ್ ಕಾಲೋನಿಯಲ್ಲಿನ ಕುಟುಂಬಗಳಿಗೆ ಹಕ್ಕುಪತ್ರ ನೀಡುವಂತೆ ಮನವಿ32 ಲಕ್ಷದ ವಿಟೆಂಜ್ ಸೂಟ್ ನಲ್ಲಿ ಮಿಂಚಿದ ಇಶಾ ಅಂಬಾನಿ ದೇಶದ ಮೊದಲ ಬುಲೆಟ್ ರೈಲಿನ ಫೋಟೋ ಹಂಚಿಕೊಂಡ ಭಾರತೀಯ ರೈಲ್ವೆ ಇಲಾಖೆ