Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಈ ಭಾಗದ ವಿದ್ಯಾರ್ಥಿಗಳಿಗೆ ಶೋ ಬದಲಿ ಚಪ್ಪಲಿ ವಿತರಣೆ 

Advertisement

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ವಿತರಿಸುವ ಯೋಜನೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯು ಮಹತ್ವದ ಬದಲಾವಣೆ ತಂದಿದೆ.

 ಭಾರಿ ಮಳೆಯಾಗುವ ಕರಾವಳಿ ಮತ್ತು ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಮಳೆಗಾಲದ ಅವಧಿಯಲ್ಲಿ ಮಕ್ಕಳಿಗೆ ಶೂ ಧರಿಸಲು ಎದುರಾಗುವ ಸಮಸ್ಯೆಯನ್ನು ಮನಗಂಡು, ಈ ಬಾರಿ ಬೇಡಿಕೆ ಇರುವ ಶಾಲೆಗಳ ಮಕ್ಕಳಿಗೆ ಶೂ ಬದಲಾಗಿ ಉತ್ತಮ ಗುಣಮಟ್ಟದ ಚಪ್ಪಲಿಗಳನ್ನು ವಿತರಿಸಲು ಇಲಾಖೆ ನಿರ್ಧರಿಸಿದೆ.

ರಾಜ್ಯದ ಒಟ್ಟು 36.56 ಲಕ್ಷ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ಹಾಗೂ ಚಪ್ಪಲಿ ಒದಗಿಸಲು ಸುಮಾರು 104 ಕೋಟಿ ರೂ. ವೆಚ್ಚದಲ್ಲಿ ಇಲಾಖೆ ಸಜ್ಜಾಗಿತ್ತು.

ಈ ಹಿಂದೆ 1 ರಿಂದ 5ನೇ ತರಗತಿ ಮಕ್ಕಳಿಗೆ ತಲಾ 265 ರೂ., 6 ರಿಂದ 8ನೇ ತರಗತಿಗೆ ತಲಾ 295 ರೂ. ಹಾಗೂ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 325 ರೂ. ನಿಗದಿಪಡಿಸಲಾಗಿತ್ತು. 

ಆದರೆ, ಪ್ರಸಕ್ತ ಜಾಗತಿಕ ಟೆಂಡರ್ ಮೂಲಕ ಒಬ್ಬರೇ ಪೂರೈಕೆದಾರರನ್ನು ಆಯ್ಕೆ ಮಾಡಲಾಗಿದ್ದು, ಪ್ರತಿ ಜೋಡಿಗೆ ಕೇವಲ 195 ರೂ. ದರ ನಿಗದಿಯಾಗಿದೆ. ಇದು ದೊಡ್ಡ ಮಟ್ಟದ ಹಣ ಉಳಿತಾಯಕ್ಕೆ ಕಾರಣವಾಗಿದೆ.

ಶೈಕ್ಷಣಿಕ ವರ್ಷ ಆರಂಭವಾಗಿ ಒಂದು ತಿಂಗಳು ಕಳೆದಿದ್ದರೂ ಮಕ್ಕಳಿಗೆ ಇನ್ನೂ ಶೂ ತಲುಪದ ಹಿನ್ನೆಲೆಯಲ್ಲಿ ವಿತರಣಾ ಪ್ರಕ್ರಿಯೆಗೆ ತೀವ್ರ ವೇಗ ನೀಡಲಾಗಿದೆ. 

ಈ ಕುರಿತು ಮಾಹಿತಿ ನೀಡಿರುವ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್ ಅವರು, ಮುಂಬರುವ ಜುಲೈ 31ರೊಳಗೆ ರಾಜ್ಯದ ಎಲ್ಲಾ ಶಾಲೆಗಳಿಗೂ ಶೂ, ಸಾಕ್ಸ್ ಹಾಗೂ ಬೇಡಿಕೆ ಸಲ್ಲಿಸಿರುವ ಶಾಲೆಗಳಿಗೆ ಚಪ್ಪಲಿಗಳು ತಲುಪಲಿವೆ ಎಂದು ತಿಳಿಸಿದ್ದಾರೆ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಲಗಿದ್ದಾಗ ಗಂಡನ ಖಾಸಗಿ ಭಾಗ ಕತ್ತರಿಸಿದ ಹೆಂಡತಿ : ವಿಡಿಯೋ ವೈರಲ್ಈ ಭಾಗದ ವಿದ್ಯಾರ್ಥಿಗಳಿಗೆ ಶೋ ಬದಲಿ ಚಪ್ಪಲಿ ವಿತರಣೆ 1,800 ಕಿ.ಮೀ ಸೈಕಲ್ ಸವಾರಿ ಮಾಡಿ ಬೆಂಗಳೂರಿಗೆ ಬಂದ ಹಾರ್ದಿಕ್ ಪಾಂಡ್ಯ ಅಭಿಮಾನಿ ಈ ಬಾರಿ ಆಗಸ್ಟ್ ನಲ್ಲಿ ವಿಧಾನ ಮಂಡಲದ ಮುಂಗಾರು ಅಧಿವೇಶನಇರಾಕ್‌ನ ಸಂಸದೆ ಮನೆ ಮೇಲೆ ದಾಳಿ : 27ಕೆಜಿ ಚಿನ್ನ, ಬಂಗಾರದ ಒಳ ಉಡುಪು, 927 ಕೋಟಿ ರೂ. ವಶಕ್ಕೆ ತಿಂಗಳಿಗೆ 2 ದಿನ ಮಂತ್ರಿಗಳು ಜನರ ಬಳಿ ಹೋಗುವುದು ಕಡ್ಡಾಯ : ಡಿ. ಕೆ ಶಿವಕುಮಾರ್ ರಾಜ್ಯದ ವಿವಿಧೆಡೆ ಬಾಂಬ್ ಸ್ಫೋಟದ ಸರಣಿ ಬೆದರಿಕೆ : ಕೋರ್ಟ್, ಇಸ್ರೋ ಹಲವೆಡೆ ಬೆದರಿಕೆ ಬರಪೀಡಿತ ಪ್ರದೇಶಗಳನ್ನು ಘೋಷಿಸಿ, ತುರ್ತು ಪರಿಸ್ಥಿತಿ ಯೋಜನೆ ಜಾರಿಗೊಳಿಸಿ : ಆರ್. ಅಶೋಕ್ ಪಿಎಂ, ಸಿಎಂ ಹಾಗೂ ಸಚಿವರು 30 ದಿನ ನ್ಯಾಯಾಂಗ ಬಂಧನದಲ್ಲಿದ್ದರೆ ಅಧಿಕಾರದಿಂದ ವಜಾ 52 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಮುಂದಾಗಿದ್ದ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ತಡೆಯಾಜ್ಞೆ