ರಾಯಚೂರು : ಭಾರತದಲ್ಲಿ ಗಲಭೆ ಎಬ್ಬಿಸಲು ವಿದೇಶಿಗನ ಜೊತೆ ಸಂಪರ್ಕ ಹಿನ್ನೆಲೆ ರಾಯಚೂರಿನ ವ್ಯಕ್ತಿಯೋರ್ವನನ್ನು ಸದರಬಜಾರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೊಹಮ್ಮದ್ ಶಾಹಿಲ್(24) ಬಂಧಿತ ಆರೋಪಿಯಾಗಿದ್ದು, ಈತ ಟೀ ಸ್ಟಾಲ್ ಇಟ್ಟಿಕೊಂಡಿದ್ದ. ಭಾರತದಲ್ಲಿ ಗಲಭೆ ಎಬ್ಬಿಸಲು ಸ್ಕೆಚ್ ಹಾಕಿದ್ದ ಅರಬ್ ಮೂಲದ ವ್ಯಕ್ತಿ ಈ ಸಂಬಂಧ ಶಾಹಿಲ್ಗೆ ಮೈಂಡ್ವಾಷ್ ಮಾಡಿದ್ದ ಎಂಬುದು ಗೊತ್ತಾಗಿದೆ.
ಇನ್ಸ್ಟಾಗ್ರಾಂನಲ್ಲಿ ರಾಣಾ ಭಾಯ್ ಹೆಸರಲ್ಲಿ ವಿದೇಶಿ ವ್ಯಕ್ತಿಯ ಜೊತೆಗೆ ಮೊಹಮ್ಮದ್ ಶಾಹಿಲ್ ಚಾಟಿಂಗ್ ಮಾಡುತ್ತಿದ್ದ. ಅಲ್ಲದೆ ರಾಣಾ ಭಾಯ್ ಅಕೌಂಟ್ನ ಪೋಸ್ಟ್ಗಳಿಗೆ ಲೈಕ್ ಮಾಡ್ತಿದ್ದ. ಕಮೆಂಟ್, ಶೇರ್ ಮಾಡುತ್ತ ಆತನ ಜೊತೆ ಸಂಪರ್ಕ ಸಾಧಿಸಿದ್ದ. ಅನಾಮಧೇಯ ವ್ಯಕ್ತಿಯ ಪೋಸ್ಟ್ ನೋಡಿ ಪ್ರಭಾವಿತನಾಗಿದ್ದ ಶಾಹಿಲ್, ರಾಣಾ ಭಾಯ್ಗೆ ಮೆಸೇಜ್ ಮೂಲಕ ಪಿಸ್ತೂಲ್ ಕೂಡ ಕೇಳಿದ್ದ. ಭಾಯ್ ಮುಝೇ ಏಕ್ ಪಿಸ್ತೂಲ್ ಚಾಹಿಯೇ ಥೀ, ಮಿಲೇಗಿ ಕ್ಯಾ ಎಂದು ಪ್ರಶ್ನಿಸಿದ್ದ ಎನ್ನಲಾಗಿದೆ.


