Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜಾಹೀರಾತುನಲ್ಲಿ ಡಿಸಿಎಂ ಫೋಟೋ ಮಾಯಾ : ಜೆಡಿಎಸ್ ಆಕ್ರೋಶ 

Advertisement

ಬೆಂಗಳೂರು: ರಾಜ್ಯ ಸರ್ಕಾರದ ಅಧಿಕೃತ ಜಾಹೀರಾತುಗಳಲ್ಲಿ ದಲಿತ ನಾಯಕರ ಭಾವಚಿತ್ರಗಳನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗುತ್ತಿದೆ ಎಂದು ಆರೋಪಿಸಿರುವ ಜೆಡಿಎಸ್, ಕಾಂಗ್ರೆಸ್ ಪಕ್ಷವು ದಲಿತರನ್ನು ಕೇವಲ 'ವೋಟ್ ಬ್ಯಾಂಕ್' ಆಗಿ ಬಳಸಿಕೊಳ್ಳುತ್ತಿದೆ ಎಂದು ತೀವ್ರ ವಾಗ್ದಾಳಿ ನಡೆಸಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಹೊರಡಿಸಿದ್ದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಕಾರ್ಯಕ್ರಮದ ಪತ್ರಿಕಾ ಜಾಹೀರಾತಿನಲ್ಲಿ, ಹಾಲಿ ಉಪಮುಖ್ಯಮಂತ್ರಿ ಹಾಗೂ ದಲಿತ ಸಮುದಾಯದ ಹಿರಿಯ ನಾಯಕ ಡಾ. ಜಿ. ಪರಮೇಶ್ವರ್ ಅವರ ಭಾವಚಿತ್ರವನ್ನು ಕೈಬಿಟ್ಟಿರುವುದನ್ನು ಜೆಡಿಎಸ್ ಬಲವಾಗಿ ಖಂಡಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಸರಣಿ ಪೋಸ್ಟ್‌ಗಳನ್ನು ಹಂಚಿಕೊಂಡಿರುವ ಜೆಡಿಎಸ್, ಜಾಹೀರಾತಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಭಾವಚಿತ್ರವನ್ನು ಮಾತ್ರ ಪ್ರಮುಖವಾಗಿ ಪ್ರದರ್ಶಿಸುವ ಮೂಲಕ 'ಏಕಸ್ವಾಮ್ಯ' ಮೆರೆದಿದ್ದಾರೆ ಎಂದು ಟೀಕಿಸಿದೆ.

ಸಾಮಾಜಿಕ ನ್ಯಾಯದ ಬಗ್ಗೆ ಭಾಷಣ ಬಿಗಿಯುವ ಕಾಂಗ್ರೆಸ್‌ನ ಅಸಲಿ ನ್ಯಾಯ ಪತ್ರಿಕೆಗಳಲ್ಲಿ ಸಾಬೀತಾಗಿದೆ. ತಾವಿದ್ದಾಗ ಫೋಟೋ ಕಡ್ಡಾಯ ಮಾಡಿಕೊಳ್ಳುವ ಮುಖ್ಯಮಂತ್ರಿಗಳು, ದಲಿತ ನಾಯಕರೊಬ್ಬರು ಡಿಸಿಎಂ ಆದಾಗ ಅವರ ಫೋಟೋಗೆ ಜಾಗ ನೀಡುವುದಿಲ್ಲವೇ?" ಎಂದು ಜೆಡಿಎಸ್ ನೇರವಾಗಿ ಪ್ರಶ್ನಿಸಿದೆ. 

ಹಿಂದುಳಿದ ಹಾಗೂ ದಲಿತ ವರ್ಗಗಳ ಪರವಾಗಿ ಬದುಕಿದ ದೇವರಾಜ ಅರಸು ಅವರ ಕಾರ್ಯಕ್ರಮದ ಜಾಹೀರಾತಿನಲ್ಲೇ ದಲಿತ ನಾಯಕರಿಗೆ ಈ ಮಟ್ಟದ ನಿರ್ಲಕ್ಷ್ಯ ತೋರಿರುವುದು ಕಾಂಗ್ರೆಸ್‌ನ ಅಹಂಕಾರಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಜೆಡಿಎಸ್ ಕಿಡಿಕಾರಿದೆ.

2025ರಲ್ಲಿ ತಮಗೊಂದು ನ್ಯಾಯ, 2026ರಲ್ಲಿ ದಲಿತರಿಗೊಂದು ನ್ಯಾಯವೇ? ಎಂದು ಪ್ರಶ್ನಿಸಿರುವ ಪಕ್ಷವು, ದಲಿತ ನಾಯಕರ ವಿರುದ್ಧದ ಇಂತಹ ಮಲತಾಯಿ ಧೋರಣೆಯನ್ನು ರಾಜ್ಯದ ಜನತೆ ಗಮನಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದೆ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಂಡೀಸ್-ಕಿವೀಸ್ ೫ ನೇ ಏಕದಿನ ನಾಳೆರಾಜ್ಯವನ್ನ ಬೆಚ್ಚಿ ಬೀಳಿಸುವ ಭೀಕರ ಘಟನೆ : ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ಗಂಡ ಆತ್ಮಹತ್ಯೆಫುಟ್ಪಾತ್ ತೆರವು ಕಾರ್ಯಾಚರಣೆ ವೇಳೆ ಮೂವರು ಇಂಜಿನಿಯರ್ ಮೇಲೆ ಮಾರಣಾಂತಿಕ ಹಲ್ಲೆ ಮೂರು ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡ ಕೇರಳ ನಾವಿಕ : ರಷ್ಯಾ ದಾಳಿಗೆ ಬಲಿಟ್ರ್ಯಾಕ್ಟರ್ ಹಾಗೂ ಲಾರಿ ನಡುವೆ ಭೀಕರ ಅಪಘಾತ : ತಂದೆ ಹಾಗೂ ಮಗಳು ಸ್ಥಳದಲ್ಲೇ ಸಾವುಸಚಿವ ಸಂಪುಟ ವಿಸ್ತರಣೆ ಫಿಕ್ಸ್ : ಇಂದು ದೆಹಲಿಗೆ ಡಿ. ಕೆ ಶಿವಕುಮಾರ್ರಾಜ್ಯದಲ್ಲಿ ಬರಗಾಲ : ಪ್ರತಿ ರೈತರಿಗೆ 50,000 ರೂ. ಪರಿಹಾರ ನೀಡಬೇಕು : ಯಡಿಯೂರಪ್ಪ ಆಗ್ರಹಅಡ್ರೆಸ್ ಕೇಳುವ ನೆಪದಲ್ಲಿ ಯುವತಿ ಅಪಹರಿಸಿ ಅತ್ಯಾಚಾರ: ಮೂವರು ದುಷ್ಟರು ಅರೆಸ್ಟ್ ಎರಡು ತಲೆ, ಎರಡು ಬಾಲವಿರುವ ಹೆಣ್ಣು ಕರುವಿಗೆ ಜನ್ಮ ನೀಡಿದ ಗಿರ್ ತಳಿಯ ಹಸುಮಣ್ಣಲ್ಲಿ ಮಣ್ಣಾದ ಚೆನ್ನಮ್ಮ : ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ