Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಲಿಫ್ಟ್‌ನಲ್ಲಿ ಸಿಲುಕಿ ಧಾರವಾಡ ಮೂಲದ ಯುವಕ ಸಾವು 

Advertisement

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂದು ಬೆಳಿಗ್ಗೆ ಅತ್ಯಂತ ದೃತಿಗೆಡಿಸುವ ಘೋರ ದುರಂತವೊಂದು ಸಂಭವಿಸಿದೆ.

ಹೋಟೆಲ್ ಒಂದರ ಲಿಫ್ಟ್‌ನಲ್ಲಿ ಸಿಲುಕಿ ಯುವಕನೊಬ್ಬ ಸ್ಥಳದಲ್ಲೇ ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಯುವಕನನ್ನು ಧಾರವಾಡ ಮೂಲದ ರಾಜೇಶ್ ಎಂದು ಗುರುತಿಸಲಾಗಿದೆ.

ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ರಾಜೇಶ್, ಎಂದಿನಂತೆ ಇಂದು ಬೆಳಿಗ್ಗೆ ಸುಮಾರು 9 ಗಂಟೆಯ ವೇಳೆಗೆ ಲಿಫ್ಟ್ ಬಳಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಮಾಹಿತಿಗಳ ಪ್ರಕಾರ, ಹೋಟೆಲ್‌ನಲ್ಲಿ ಸರಕು ಸಾಗಣೆ ಮಾಡಲು ಬಳಸಲಾಗುತ್ತಿದ್ದ (ಗೂಡ್ಸ್) ಲಿಫ್ಟ್‌ನಲ್ಲಿ ರಾಜೇಶ್ ಎರಡನೇ ಮಹಡಿಗೆ ತೆರಳುತ್ತಿದ್ದನು. ಈ ವೇಳೆ ಆಕಸ್ಮಿಕವಾಗಿ ಲಿಫ್ಟ್‌ನಿಂದ ಕುತ್ತಿಗೆಯನ್ನು ಹೊರಗೆ ಹಾಕಿದ್ದಾನೆ ಎನ್ನಲಾಗಿದೆ. 

ದುರದೃಷ್ಟವಶಾತ್ ಲಿಫ್ಟ್ ಚಲಿಸುತ್ತಿದ್ದ ಕಾರಣ, ಲಿಫ್ಟ್‌ನ ಡೋರ್ ಹಾಗೂ ಸಜ್ಜು ಗೋಡೆಯ ನಡುವೆ ಆತನ ತಲೆ ಸಿಲುಕಿಕೊಂಡಿದೆ. 

ಗೋಡೆಗೆ ತಲೆ ಬಲವಾಗಿ ಜಜ್ಜಿದ ಪರಿಣಾಮ ತೀವ್ರ ರಕ್ತಸ್ರಾವವಾಗಿ ರಾಜೇಶ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ. ಸರಕು ಸಾಗಿಸುವ ಲಿಫ್ಟ್‌ನಲ್ಲಿ ಸುರಕ್ಷತಾ ನಿಯಮಗಳ ಕೊರತೆ ಇತ್ತೇ ಎಂಬ ಸಂಶಯ ಮೂಡಿಸಿದೆ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೌದ್ಧ ಬಿಕ್ಕುಗಳಿಗೆ ಮಾಸಿಕ ಆರು ಸಾವಿರ ರೂ. ಗೌರವಧನ : ರಾಜ್ಯ ಸರ್ಕಾರ ಆದೇಶಲಿಫ್ಟ್‌ನಲ್ಲಿ ಸಿಲುಕಿ ಧಾರವಾಡ ಮೂಲದ ಯುವಕ ಸಾವು ಕಾಂಪೋಸ್ಟ್ ಅಭಿವೃದ್ಧಿ ನಿಗಮ ಅಧ್ಯಕ್ಷ ನಟರಾಜ್ ಗೌಡರಿಂದ  ಶಾಲಾ ಮಕ್ಕಳಿಗೆ ನೋಟ್ ಬುಕ್, ಪೆನ್ ವಿತರಣೆ!ಸಮಾಜದಲ್ಲಿ ಪತ್ರಕರ್ತರ ಪಾತ್ರ ಮಹತ್ವದಾಗಿದೆ ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜುಸೋತರೂ ಅಭಿಮಾನಿಗಳ ಮನ ಗೆದ್ದ ಇಂಗ್ಲೆAಡ್ಫೀಪಾ ವಿಶ್ವಕಪ್ ಫುಟ್‌ಬಾಲ್: ಅರ್ಜಿಂಟಿನಾ ಫೈನಲ್‌ಗೆಪ್ರಥಮ ಬಾರಿಗೆ ಧಾರವಾಡ ಐಐಟಿಯಿಂದ ಗೌರವ ಡಾಕ್ಟರೇಟ್ ಘೋಷಣೆ : ಸುಧಾಮೂರ್ತಿಗೆ ಒಲಿದ ಗೌರವ ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಆರೋಗ್ಯದಲ್ಲಿ ಏರುಪೇರು : ಆಸ್ಪತ್ರೆಗೆ ದಾಖಲು ಸಂಪುಟ ವಿಸ್ತರಣೆ ಕಸರತ್ತು : ಇಂದೇ ದೆಹಲಿಯಲ್ಲಿ ಹೈಕಮಾಂಡ್ ಮಹಾಸಭೆ ಇಂದಿನಿಂದ ಶಾಶ್ವತ ನಿವಾಸ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಕೆ ಆರಂಭ : ಕರ್ನಾಟಕದಲ್ಲಿಯೇ ಮೊದಲು