Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

 ವಿಶ್ವ ಕಾರ್ಮಿಕ ದಿನಾಚರಣೆಯ  ಪ್ರಯುಕ್ತ  ರೋಗಿಗಳಿಗೆ ಹಣ್ಣು ಹಂಪಲು ವಿತರಣೆ 

Advertisement

ಬಾಗಲಕೋಟೆ : ವಿಶ್ವ ‌ಕಾರ್ಮಿಕ ದಿನಾಚರಣೆಯ ಹಿನ್ನೆಲೆಯಲ್ಲಿ ಕರ್ನಾಟಕ ಸ್ವಾಭಿಮಾನಿ ಪಡೆ‌ ಸಂಘಟನೆಯ ‌ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ನವೀನ್ ಕಪಾಲಿ ಹಾಗೂ ಕಾರ್ಮಿಕ ಘಟಕದ ರಾಜ್ಯ ಯುವ ಮುಖಂಡರಾದ ರಾಜಕುಮಾರ್ ಲಮಾಣಿ ಅವರ ನೇತೃತ್ವದಲ್ಲಿ ಬಾಗಲಕೋಟೆಯ ಕಾರ್ಮಿಕ ಘಟಕದ ವತಿಯಿಂದ ನಗರದ ಬಾಗಲಕೋಟೆ ಖಾಸಗಿ ಆಸ್ಪತ್ರೆಯಾದ ಯೋಗಪ್ಪನವರ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು. ವಿಶ್ವ ಕಾರ್ಮಿಕ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು.

 ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ನವೀನ್ ಕಪಾಲಿ ಅವರು ಆಸ್ಪತ್ರೆಯಲ್ಲಿ ದಾಖಲಾಗಿರುವ ಪ್ರತಿಯೊಬ್ಬ ರೋಗಿಗಳನ್ನು ಸಂಪರ್ಕಿಸಿ ಆರೋಗ್ಯ ವಿಚಾರಿಸಿದರು  ಈ ಸಂದರ್ಭದಲ್ಲಿ ಯೋಗಪ್ಪನವರ ಆಸ್ಪತ್ರೆಯ ವೈದ್ಯರಾದ ಶ್ರೀ ಡಾ ಸಾಮ್ರಾಟ್ ಎಚ್ ಯೋಗಪ್ಪನವರ್. ಮಾತನಾಡಿ, ಕರ್ನಾಟಕ ಸ್ವಾಭಿಮಾನಿ ಪಡೆ ಸಂಘಟನೆ ರಾಜ್ಯಾದ್ಯಂತನಾಡು, ನುಡಿಯ ಕಾಳಜಿಯೊಂದಿಗೆ ಇಂತಹ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಕನ್ನಡಿಗರ ಮನೆ ಮಾತಾಗಿದ್ದಾರೆ. ಇವರ ಕಾರ್ಯ ನಿಜವಾಗಿಯೂ ಶ್ಲಾಘನೀಯವಾದದ್ದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ಸ್ವಾಭಿಮಾನಿ ಪಡೆ ಸಂಘಟನೆಯ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷರಾದ ನವೀನ್ ಕಪಾಲಿ  ರಾಜ್ಯ ಯುವ ಮುಖಂಡರಾದ ರಾಜಕುಮಾರ್ ಲಮಾಣಿ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರಾದ ಆಸಿಫ್ ಬಾಗವಾನ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ರಾರೋಡ ಜಿಲ್ಲಾಧ್ಯಕ್ಷ ‌ ಜಗದೀಶ್ ಕರ್ಪೂರಮಠ ಅವರು ಮಾತನಾಡಿ ಕಾರ್ಮಿಕರಿಗೆ ಶುಭ ಕೋರಿದರು ‌ ಕಾರ್ಮಿಕ ಘಟಕದ ಕಾರ್ಯಾಧ್ಯಕ್ಷ  ಸಂಜಯ್ ಕೋಲ್ಕರ ಸಂಘಟನೆಯ ಹಿರಿಯರಾದ ‌ ಸಂಗಮೇಶ್ ದುಬ್ಬಲಗುಂಡಿ ಆದಿತ್ಯ ಆಗೋಜಿ ‌ಗಣೇಶ ಬಡಿಗೇರ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.


ವರದಿ  : ಎಸ್.ಎಸ್.ಕವಲಾಪುರೆ

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಸ್ ಹಾಗೂ ಟಿಪ್ಪರ್ ನಡುವೆ ಡಿಕ್ಕಿ: ಮೂವರು ಸ್ಥಳದಲ್ಲೇ ಸಾವು, ಹತ್ತಕ್ಕೂ ಹೆಚ್ಚು ಮಂದಿಗೆ ಗಾಯಇಬ್ಬರು ಅಪ್ರಾಪ್ತ ಅಕ್ಕ-ತಂಗಿಯ ಮೇಲೆ ಕಿರಾತಕನಿಂದ ಲೈಂಗಿಕ ದೌರ್ಜನ್ಯಡಾಕ್ಟರ್ ಚೀಟಿ ಇಲ್ಲದೇ ಯಾವುದೇ ಕೆಮ್ಮಿನ ಔಷಧ ಮಾರಾಟ ಮಾಡುವಂತಿಲ್ಲ : ಕೇಂದ್ರ ಸರ್ಕಾರಬೆಳಗಾವಿ ಸೇರಿದಂತೆ ರಾಜ್ಯಾದ್ಯಂತ ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ ಸೋಮವತಿ ಅಮಾವಾಸ್ಯೆ ಅಂಗವಾಗಿ ಖಾನಾಪುರದಲ್ಲಿ ಶ್ರೀ ಮೈಲಾರ ಮಲ್ಲಣ್ಣನ ಪಲ್ಲಕ್ಕಿ ಉತ್ಸವ ವೈಭವ ವಿಶ್ವಕಪ್ ಫುಟ್‌ಬಾಲ್: ನ್ಯೂಜಿಲೆಂಡ್- ಇರಾನ್ ಪಂದ್ಯ ಡ್ರಾ‘ಐಸಿಸಿ’ಯಿಂದ ದಂಡಕ್ಕೊಳಗಾಗುವರೇ ವೈಭವ ಸೂರ್ಯವಂಶಿ?ಭಾರತ- ಅಪಘಾನಿಸ್ತಾನ್ ಎರಡನೇ ಏಕದಿನ ನಾಳೆರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 6,565 ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಹಿಂಡಲಗಾ ಜೈಲಿನಿಂದ ಬಿಡುಗಡೆಯಾದ ಶಿವಾನಂದ ನೀಲಣ್ಣವರ