LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಡಾ.ಬಿ.ಆರ್.ಅಂಬೇಡ್ಕರ್‌ರವರು ಬುದ್ದ ಹಾಗೂ ಬಸವಣ್ಣನವರ ಪ್ರಭಾವಕ್ಕೆ ಒಳಗಾಗಿದ್ದರು: ಶ್ರೀಕೋರೆಣೇಶ್ವರ ಸ್ವಾಮೀಜಿ

Advertisement

ಮಾನ್ವಿ: ಡಾ.ಬಿ.ಆರ್.ಅಂಬೇಡ್ಕರ್‌ರವರು ಬಸವಣ್ಣನವರ ಪ್ರಭಾವವನ್ನು ಹೊಂದಿದ್ದರು ಬೌದ್ಧರು ನನ್ನ ಪೂರ್ವಜರು ಎನ್ನುವುದು ಅವರ ಭಾವನೆಯಾಗಿತ್ತು ಎಂದು ತಿಳಿಸಿದರು.
ತಾಲೂಕಿನ ಪೋತ್ನಾಳ ಗ್ರಾಮದಲ್ಲಿನ  ವಿಮುಕ್ತಿ ಚಾರ್ ಟೇಬಲ್ ಟ್ರಸ್ಟ್ ಆವರಣದಲ್ಲಿ ಬಹುಜನ ಸಂಘರ್ಷ ಸಮಿತಿ . ಕರ್ನಾಟಕ ಜನತಾ ಸಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಬಲ್ಲಟಗಿ . ವತಿಯಿಂದ ನಡೆದ ಡಾ.ಬಿ.ಆರ್.ಅಂಬೇಡ್ಕರ್ ದೃಷ್ಟಿಯಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಿಂತನೆಗಳ ಕುರಿತು ರಾಯಚೂರು ಜಿಲ್ಲಾಮಟ್ಟದ ಮೂರು ದಿನಗಳ ಅಧ್ಯಯನ ಶಿಬಿರವನ್ನು ಅಳಂದ ತೋಂಟದಾರ್ಯ ಅನುಭವ ಮಂಟಪದ ಶ್ರೀಕೋರೆಣೇಶ್ವರ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿ ಮನುಷ್ಯನ ಹುಟ್ಟು,ಸಾವು,ಬದುಕು ಕೂಡ ಪವಿತ್ರ ಎನ್ನುವುದು ಬುದ್ದನ ಸಂದೇಶವಾಗಿತು.ದಕ್ಷಿಣ ಭಾರತದಲ್ಲಿ ವೇಗವಾಗಿ ಹರಡುತ್ತಿದ್ದ ಬೌದ್ಧ ಧರ್ಮವನ್ನು ಬೌದ್ಧ  ವಿಹಾರಗಳನ್ನು ನಾಶ ಪಡಿಸಿದ ನಂತರ ಚತುವರ್ಣಗಳ ಶೋಷಣೆಗೆ ಒಳಗಾಗಿ 12 ನೇ ಶತಮಾನದಲ್ಲಿ ಬೌದ್ಧ ಭಿಕ್ಕುಗಳು ಬಸವಣ್ಣನ ಆಶ್ರಯಕ್ಕೆ ಬಂದರು ನಂತರ ಬಸವಣ್ಣ ನವರು ಲಿಂಗಾಯತ ಧರ್ಮವನ್ನು ಪ್ರಾರಂಭಿಸಿ ಕಾಯಕ,ದಾಸೋಹ,ಜಂಗಮ ಸೇವೆಯನ್ನು ಆಚರಣೆಗೆ  ತಂದರು. ಸಮಾಜದಲ್ಲಿನ ಎಲ್ಲಾ ಕಾಯಕ ಜೀವಿಗಳನ್ನು ಸಮಾನವಾದ ಸ್ಥಾನವನ್ನು ನೀಡಿ ಶರಣರನ್ನಾಗಿ ಮಾಡಿದ್ದರು. ಹಿರಿಯ ಮುಖಂಡರಾದ ಬಾಲಸ್ವಾಮಿ ಕೊಡ್ಲಿ ಮಾತನಾಡಿ ಬಹುಜನ ಸಂಘರ್ಷ ಸಮಿತಿ ಜಿಲ್ಲೆಯಲ್ಲಿ ಅನೇಕ ಕಾರ್ಯಕ್ರಮಗಳ ಮೂಲಕ ಡಾ.ಬಿ.ಆರ್.ಅಂಬೇಡ್ಕರ್‌ರವರ ಚಿಂತನೆಗಳನ್ನು ವಿಚಾರಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿದ್ದಾರೆ . ಡಾ.ಬಿ.ಆರ್.ಅಂಬೇಡ್ಕರ್‌ರವರ ಆಶಯದಂತೆ ಪ್ರತಿಯೊಬ್ಬರು ಶಿಕ್ಷಣವನ್ನು ಪಡೆದಾಗ ಮಾತ್ರ ಸಮಾಜದಲ್ಲಿ ಸಮಾನತೆಯನ್ನು ಮೂಡಿಸುವುದಕ್ಕೆ ಸಮಾಜವನ್ನು ಬದಲಾಯಿಸುವುದಕ್ಕೆ ಸಮಾಜಿಕ ಪರಿವರ್ತನೆಯನ್ನು ಮೂಡಿಸುವುದಕ್ಕೆ ಸಾಧ್ಯವಾಗುತ್ತದೆ ಈ ನಿಟ್ಟಿನಲ್ಲಿ ಇಂತಹ ಅಧ್ಯಯನ ಶಿಬಿರಗಳು ಹೆಚ್ಚು ಹೆಚ್ಚು ಅಯೋಜನೆಗೊಳ್ಳಬೇಕು ಎಂದು ತಿಳಿಸಿದರು.
ಉಚ್ಚಮಠ ಪೋತ್ನಾಳ್ ಶ್ರೀಬಸವರಾಜ ತಾತನವರು ದಿವ್ಯಸಾನಿಧ್ಯವನ್ನು ವಹಿಸಿದರು.
ಕಾರ್ಯಕ್ರಮದಲ್ಲಿ ಬೌದ್ಧ ಉಪಾಸಕರು ಹಾಗೂ ಹಿರಿಯ ಹೋರಾಟಗಾರರಾದ ಎಂ.ಆರ್. ಬೇರಿ. ಸಂಪತ್ ರಾಜ್ ಜಾಗಿರಪ್ಪನೂರ್. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾ.ಅಧ್ಯಕ್ಷರಾದ ಅಶೋಕ್ ತಡಕಲ್, .ಡಾ. ಹುಸೇನಪ್ಪ ಅಮರಾಪುರ್, ಮೈಕಲ್ ಉದ್ಬಾಳ  ಸೇರಿದಂತೆ ಇನ್ನಿತರರು ಇದ್ದರು.
ವರದಿ :ಆಂಜನೇಯ ನಸಲಾಪುರ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವೆಸ್ಟ್ ಇಂಡೀಸ್ ಗೆ 224 ರನ್ ಟಾರ್ಗೆಟ್ ನೀಡಿದ ಭಾರತ ತಂಡ ನೈಟ್ ಡ್ಯೂಟಿ ಮಾಡುತ್ತಿದ್ದ ಗಂಡನಿಗೆ ಊಟ ತಂದ ಪತ್ನಿ : ವೈರಲ್‌ ಆಯ್ತು ದೃಶ್ಯ ಬೋಟ್ ಮಗುಚಿ ಘೋರ ದುರಂತ :ಬರೋಬ್ಬರಿ 109 ವಲಸಿಗರು ದುರ್ಮರಣ ಕರ್ನಾಟಕ ತಂಡದ ಮಾನ ಉಳಿಸಿದ ನಾಯಕ ಸಮರನ್ ರವಿಚಂದ್ರನ್ ಕಬ್ಬು ಬೆಳೆಗಾರರ ಹೋರಾಟ : ಸ್ವಂತ ಹಣದಲ್ಲೇ 34 ರೈತರಿಗೆ ವಿಮಾನ ಟಿಕೆಟ್ ಬುಕ್ ಮಾಡಿದ ಶಾಸಕ ಸಿಇಸಿ ರಾಜೀನಾಮೆಗೆ ಆಗ್ರಹಿಸಿ ನಾಳೆ ಪ್ರತಿಭಟನೆ : ದೆಹಲಿಗೆ ಹಾರಲಿದ್ದಾರೆ ಡಿ.ಕೆ ಶಿವಕುಮಾರ್ ಬಾಂಗ್ಲಾದೇಶ ತಂಡಕ್ಕೆ 230 ರನ್ ಗಳ ಲೀಡ್ ಇಂದು ಆಟದ ಗೇರ್ ಬದಲಿಸಬೇಕಿದೆ ಭಾರತ ತಂಡ ದುರ್ಗಾ ಮಾತೆ ಕೊಂಡೊಯ್ಯುತ್ತಿದ್ದ ವೇಳೆಯೇ ಟ್ರ್ಯಾಕ್ಟರ್​ಗೆ ಲಾರಿ ಡಿಕ್ಕಿ : ಮೂವರು ಸಾವು, 7 ಜನ ಗಂಭೀರ ಇನ್ನೊಬ್ಬರನ್ನು ತುಳಿದು ಬದುಕುವುದು ಧರ್ಮವಲ್ಲ : ಗವಿ ಸಿದ್ದೇಶ್ವರ ಶ್ರೀ ಹೇಳಿಕೆ