ಇಂದೋರ್: ಭಾರತ ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡಗಳ ನಡುವಿನ 3 ನೇ ಟಿ -20 ಪಂದ್ಯ ಇಂದು ಇಲ್ಲಿನ ಹೊಲ್ಕರ್ ಮೈದಾನದಲ್ಲಿ ನಡೆಯಲಿದೆ.
ಪಂದ್ಯ ಸಾಯಂಕಾಲ 7:00 ಕ್ಕೆ ಶುರುವಾಗಲಿದೆ. 5 ಪಂದ್ಯಗಳ ಸರಣಿಯಲ್ಲಿ ತಲಾ 1 ಪಂದ್ಯದಲ್ಲಿ ಗೆದ್ದಿರುವ ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು 1-1 ರಿಂದ ಸಮ ಸ್ಥಿತಿಯಲ್ಲಿವೆ.
ಗೇರ್ ಬದಲಿಸಬೇಕಿದೆ ಭಾರತ: ದ್ವಿತೀಯ ಟಿ - 20 ಪಂದ್ಯದಲ್ಲಿ ಭಾರತದ 250 ರನ್ ಗಳ ಸವಾಲನ್ನು ಮೆಟ್ಟಿ ನಿಂತಿರುವ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಲು ಭಾರತ ತಂಡ ಇಂದು ತನ್ನ ಆಟದ ಗೇರ್ ಅನ್ನು ಬದಲಿಸಬೇಕಿದೆ. ಅದಕ್ಕಾಗಿ ಬ್ಯಾಟಿಂಗ್ ಬಲ, ಬೌಲಿಂಗ್ ಬಲ ಏರಡನ್ನೂ ಹೆಚ್ಚಿಸುವುದರತ್ತ ಸ್ರೇಯಸ್ ಬಳಗ ಗಮನ ಹರಿಸಬೇಕಿದೆ.


