ಬೆಳಗಾವಿ : ಬೆಳಗಾವಿಯಲ್ಲಿ ಪತಿ ಕೊಂದು ಅಪಘಾತದ ಡ್ರಾಮಾ ಮಾಡಿದ ಪತ್ನಿ ಹಾಗು ಪ್ರಿಯಕರನನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿಯ ಖಿಳೆಗಾಂವ್ ಗ್ರಾಮದಲ್ಲಿ ಈ ಒಂದು ಕೊಲೆ ನಡೆದಿದ್ದು ಚಂದ್ರಕಾಂತ ಶಿವಪೂಜೆ (41) ಕೊಲೆಯಾದ ದುರ್ದೇವಿ ಎಂದು ತಿಳಿದುಬಂದಿದೆ.
ಪತ್ನಿ ರೇಣುಕಾ ಹಾಗೂ ಆಕೆಯ ಪ್ರಿಯಕರ ಮಹಂತೇಶ ಧನಾಳೆ ಇಬ್ಬರು ಸೇರಿ ಕೊಲೆ ಮಾಡಿದ್ದು ಸದ್ಯ ಇಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಆಗಸ್ಟ್ 8ರಂದು ಬೈಕ್ನಲ್ಲಿ ಹೋಗುತ್ತಿದ್ದ ಅತಿ ಚಂದ್ರಕಾಂತನನ್ನು ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಲು ಇಬ್ಬರು ಯತ್ನಿಸಿದ್ದಾರೆ ಪ್ರಕರಣದ ತನಿಖೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ.
ಎರಡು ವರ್ಷದಿಂದ ರೇಣುಕ ಮತ್ತು ಮಹಾಂತೇಶ್ ನಡುವೆ ಅನೈತಿಕ ಸಂಬಂಧ ಇತ್ತು ಈ ವಿಚಾರ ಕೆಲ ದಿನಗಳ ಹಿಂದೆ ಚಂದ್ರಕಾಂತಗೆ ಗೊತ್ತಾಗಿತ್ತು.
ಬಳಿಕ ಹಿರಿಯರ ಸಮ್ಮುಖದಲ್ಲಿ ರಾಜಿ ಸಂಧಾನ ಕೂಡ ಮಾಡಲಾಗಿತ್ತು. ಈ ವಿಚಾರಕ್ಕೆ ಪತ್ನಿಗೆ ಚಂದ್ರಕಾಂತ್ ನಿತ್ಯ ಕಾಟ ಕೊಡುತ್ತಿದ್ದ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನ ಕೊಲೆಗೆ ಸ್ಕೆಚ್ ಹಾಕಿದ್ದಾರೆ. ಗಂಡನಿಗೆ ಮಾರುಕಟ್ಟೆಗೆ ಹೋಗಿ ಬಾ ಎಂದು ರೇಣುಕಾ ಹೇಳಿದ್ದಾಳೆ.
ಬಳಿಕ ಮಾದೇಶ್ ಗೆ ಕರೆ ಮಾಡಿ ರೇಣುಕಾ ವಿಚಾರ ತಿಳಿಸಿದ್ದಾಳೆ. ಅಲ್ಲಿಗೆ ಚಂದ್ರಕಾಂತನ್ನು ಕೊಲೆ ಮಾಡಿ ಅಪಘಾತವೇಂದು ಬಿಂಬಿಸಲು ಯತ್ನಿಸಿದ್ದಾರೆ. ಇದೀಗ ಇಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿ ಜೈಲಿಗೆ ಅಟ್ಟಿದ್ದಾರೆ.


