ಬೆಂಗಳೂರು: ನಾಯಕ ತೀಲಕ್ ವರ್ಮ ಅರ್ಧ ಶತಕದ ನೆರವಿನಿಂದ ದಕ್ಷಿಣ ವಲಯ ಕ್ರಿಕೆಟ್ ತಂಡವು ದುಲಿಪ್ ಟ್ರೋಫಿ ಪಂದ್ಯಾವಳಿಯ ಎರಡನೇ ಉಪಾಂತ್ಯ ಪಂದ್ಯದಲ್ಲಿ ಉತ್ತರ ವಲಯ ವಿರುದ್ಧ 7 ವಿಕೆಟ್ ಗಳ ಗೆಲುವು ಸಾಧಿಸಿತು.
ಇಲ್ಲಿನ ಬಿಸಿಸಿಐ ಸೆಂಟ್ರಲ್ ಅಪ್ ಎಕ್ಸಲೆನ್ಸ್ ಮೈದಾನ-2 ರಲ್ಲಿ ನಡೆದ ಪಂದ್ಯದಲ್ಲಿ ಗೆದ್ದ ದಕ್ಷಿಣ ವಲಯ ಪಂದ್ಯಾವಳಿಯ ಅಂತಿಮ ಪಂದ್ಯಕ್ಕೆ ಪ್ರವೇಶ ಪಡೆಯಿತು. ಪೈನಲ್ ನಲ್ಲಿ ಪೂರ್ವ್ ವಲಯ ತಂಡವನ್ನು ಎದುರಿಸಲಿದೆ.


