LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಮಾಜಿ ಸಚಿವ ಶಿವಾನಂದ ಕೌಜಲಗಿ ನಿಧನ : ಶಾಸಕ ಮಹಾಂತೇಶ ಕೌಜಲಗಿ ಭಾವುಕ ಪೋಸ್ಟ್

Advertisement

ಬೈಲಹೊಂಗಲ : ಮಾಜಿ ಸಚಿವ ಹಾಗೂ ಹಿರಿಯ ರಾಜಕಾರಣಿ ಶಿವಾನಂದ ಕೌಜಲಗಿ (87) ಅವರು ಶುಕ್ರವಾರ ನಿಧನರಾಗಿದ್ದಾರೆ.

 ಬೆಳಗಾವಿ ಜಿಲ್ಲೆಯ ಬೈಲಹೊಂಗಲ ನಿವಾಸದಲ್ಲಿ ಲಿಂಗೈಕ್ಯರಾಗಿದ್ದು, ತಂದೆಯ ಸಾವಿನ ಬಗ್ಗೆ ಪುತ್ರ, ಶಾಸಕ ಮಹಾಂತೇಶ ಕೌಜಲಗಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.

ಬೈಲಹೊಂಗಲ ಕ್ಷೇತ್ರದಿಂದ ಮೂರು ಬಾರಿ ಶಿವಾನಂದ ಕೌಜಲಗಿ ಅವರು ಶಾಸಕರಾಗಿ ಆಯ್ಕೆ ಆಗಿದ್ದರು. 1996ರಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದರಾಗಿ ಸೇವೆ ಸಲ್ಲಿಸಿದ್ರು. 

ಲೋಕೋಪಯೋಗಿ ಖಾತೆ ಸಚಿವರಾಗಿ ಕೆಲಸ ಮಾಡಿದ್ದ ಕೌಜಲಗಿ ಅವ್ರು, ಕೆಎಲ್‌ಇ ಸಂಸ್ಥೆ ಅಧ್ಯಕ್ಷರಾಗಿದ್ದರು. ಕೌಜಲಗಿ ‌ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಶಾಸಕ ಮಹಾಂತೇಶ ಕೌಜಲಗಿ ಭಾವುಕ ಪೋಸ್ಟ್

ಅತ್ಯಂತ ವಿಷಾದದಿಂದ ಈ ವಿಷಯವನ್ನು ತಿಳಿಸುತ್ತಿದ್ದೇನೆ. ನನ್ನ ಪೂಜ್ಯ ತಂದೆಯವರು, ಕರ್ನಾಟಕ ಸರ್ಕಾರದ ಮಾಜಿ ಲೋಕೋಪಯೋಗಿ ಸಚಿವರು, ಪ್ರತಿಷ್ಠಿತ ಕೆಎಲ್‌ಇ ಸಂಸ್ಥೆಯ ಮಾಜಿ ಅಧ್ಯಕ್ಷರು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ನನ್ನ ಮಾರ್ಗದರ್ಶಕರು, ಗುರುಗಳಾದ ಸನ್ಮಾನ್ಯ ಶ್ರೀ ಶಿವಾನಂದ ಕೌಜಲಗಿ ಅವರು ಇಂದು ಬೆಳಿಗ್ಗೆ ಶಿವಾಧೀನರಾದರು.

ತಂದೆಯವರಅಗಲಿಕೆ ನನಗೆ ಮತ್ತು ನಮ್ಮ ಕುಟುಂಬಕ್ಕೆ ತುಂಬಲಾರದ ನಷ್ಟ. ಅವರು ತಮ್ಮ ಜೀವನದುದ್ದಕ್ಕೂ ಶಿಕ್ಷಣ, ಸಹಕಾರ ಮತ್ತು ಸಮಾಜ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡು, ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕಾದ ಮಹಾನ ಚೇತನ. ಅವರ ಆದರ್ಶ, ಅವರ ತ್ಯಾಗ ಮತ್ತು ಜನಸೇವೆಯೇ ನನಗೆ ಸದಾ ಸ್ಪೂರ್ತಿ.

ತಂದೆಯವರ ಅಂತ್ಯಕ್ರಿಯೆಯನ್ನು ನಾಳೆ ಶನಿವಾರ 31/10/2026 ರಂದು ಬೆಳಿಗ್ಗೆ 11 ಗಂಟೆಗೆ ಬೈಲಹೊಂಗಲ ಪಟ್ಟಣದ ಆನಿಗೊಳ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಪುತ್ರ ಹಾಗೂ ಶಾಸಕ ಮಹಾಂತೇಶ ಕೌಜಲಗಿ ಬರೆದಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
 3 ವರ್ಷ ಹೊಸ ಖಾಸಗಿ ಪಿಯು ಕಾಲೇಜುಗಳಿಗೆ ಅನುಮತಿ ಇಲ್ಲ: ರಾಜ್ಯ ಸರ್ಕಾರ ಅಧಿಸೂಚನೆಅಹಿಂದ ನಾಯಕತ್ವದ ಉತ್ತರಾಧಿಕಾರಿ ಪಟ್ಟಾಭಿಷೇಕಕ್ಕೆ ಕಾಲ ಇನ್ನೂ ಪಕ್ವವಾಗಿಲ್ಲ : ಸತೀಶ್ ಜಾರಕಿಹೊಳಿದೇಶದಲ್ಲಿ ಬಡತನ ಪ್ರಮಾಣ ಶೇ. 27.1ರಿಂದ 2.6ಕ್ಕೆ ಕುಸಿತ: ವಿಶ್ವಬ್ಯಾಂಕ್ ವರದಿನಮಗೆ ಕುಡಿಯಲು ನೀರಿಲ್ಲ, ದನಕರುಗಳಿಗೂ ನೀರಿಲ್ಲ : ಡಿಸಿ ಎದುರು ಗ್ರಾಮಸ್ಥರ ಅಳಲು.:ತಕ್ಷಣ ಸರಿಪಡಿಸಲು ಆದೇಶ.ವಿದ್ಯುತ್ ಶಾಕ್‌ನಿಂದ ಗಾಯಗೊಂಡ ಕೋತಿಗೆ ಚಿಕಿತ್ಸೆ  ಮಾಡಿ ಮಾನವೀಯತೆ ಮೆರೆದ ಅರಣ್ಯ ಅಧಿಕಾರಿಗಳುನವೆಂಬರ್ 2 ರಿಂದ ಕರ್ನಾಟಕ- ಆಸ್ಸಾಮ್ ರಣಜಿ ಟ್ರೋಫಿ ಪಂದ್ಯ ಎಸ್‌ಐಆರ್‌ ಕುರಿತು ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ: ಸತೀಶ್ ಜಾರಕಿಹೊಳಿ ಸ್ಪಷ್ಟನೆಮಾಜಿ ಸಚಿವ ಶಿವಾನಂದ ಕೌಜಲಗಿ ನಿಧನ : ಶಾಸಕ ಮಹಾಂತೇಶ ಕೌಜಲಗಿ ಭಾವುಕ ಪೋಸ್ಟ್ಕೇಪ್ ಟೌನ್ ಟೆಸ್ಟ್ : ಆಸ್ಟ್ರೇಲಿಯಾ ಉತ್ತಮ ಸ್ಥಿತಿಯಲ್ಲಿ ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ ಗೆ 55 ರನ್ ಗಳ ಗೆಲುವು