ಗುರುಮಠಕಲ್: ಪಟ್ಟಣದ ಮಲ್ಲ ಫಾರೆಸ್ಟ್‌ನಲ್ಲಿ ಸಾಲುಮರದ ತಿಮ್ಮಕ್ಕ ವೃಕ್ಷಧಾಮದ ಅರಣ್ಯ ಪ್ರದೇಶದಲ್ಲಿ ವಿದ್ಯುತ್ ಶಾಕ್‌ನಿಂದ ಗಾಯಗೊಂಡು ಕೆಳಗೆ ಬಿದ್ದಿದ್ದ ಕೋತಿಯನ್ನು ರಕ್ಷಿಸಿ ಚಿಕಿತ್ಸೆ ಕೊಡಿಸುವ ಮೂಲಕ ಅರಣ್ಯ ಇಲಾಖೆ ಅಧಿಕಾರಿಗಳು ಮಾನವೀಯತೆ ಮೆರೆದಿದ್ದಾರೆ.
ವಿದ್ಯುತ್ ಶಾಕ್‌ನಿಂದ ಗಾಯಗೊಂಡು ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿದ್ದ ಕೋತಿಯನ್ನು ಗಮನಿಸಿದ ಅರಣ್ಯ ವಲಯದ ಅಧಿಕಾರಿಗಳು ತಕ್ಷಣವೇ ಅದನ್ನು ರಕ್ಷಿಸಿ ಗುರುಮಠಕಲ್ ಪಟ್ಟಣದಲ್ಲಿರುವ ಪಶು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆಕಳೆದ ನಾಲ್ಕು ದಿನಗಳಿಂದ ಕೋತಿಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ ಅದರ ಆರೈಕೆ ಮಾಡುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಮನುಷ್ಯರಷ್ಟೇ ಅಲ್ಲದೆ ಮೂಕ ಪ್ರಾಣಿಗಳ ಜೀವದ ಬಗ್ಗೆಯೂ ಕಾಳಜಿ ವಹಿಸಿ ಅವುಗಳ ರಕ್ಷಣೆಗೆ ಮುಂದಾಗಿರುವ ಅರಣ್ಯಾಧಿಕಾರಿಗಳ ಕಾರ್ಯವು ಮಾನವೀಯತೆಗೆ ಉತ್ತಮ ಉದಾಹರಣೆಯಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದ ಗುರುಮಠಕಲ್ ಸಾರ್ವಜನಿಕರು.
ಈ ಸಂದರ್ಭದಲ್ಲಿ ರಾಹುಲ್ ಸಾದುರೇ ಅರಣ್ಯ ವಲಯ ಅಧಿಕಾರಿಗಳು ಗುರುಮಠಕಲ್ ಡಿ ವೈ ಆರ್ ಎಫ್ ಓ ಅಶ್ವಥ್ ಕುಮಾರ್. ಸಂತೋಷ. ನರೇಶ. ಮೊಗಲಪ್ಪ ನಜರಾಪುರ ಉಪಸ್ಥಿತರಿದ್ದರು.
ವರದಿ : ರವಿ ಬುರನೋಳ್


