ಬೆಂಗಳೂರು : ರಾಜ್ಯದಲ್ಲಿ ಪಡಿತರ ಚೀಟಿ (ರೇಷನ್ ಕಾರ್ಡ್) ಫಲಾನುಭವಿಗಳು ಇ-ಕೆವೈಸಿ (e-KYC) ಪರಿಶೀಲನೆ ಪೂರ್ಣಗೊಳಿಸಲು ನೀಡಲಾಗಿದ್ದ ಕಾಲಾವಕಾಶವನ್ನು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ನವೆಂಬರ್ 10ರವರೆಗೆ ವಿಸ್ತರಿಸಿ ಆದೇಶಿಸಿದೆ.ಈ ಮೊದಲು ಅಕ್ಟೋಬರ್ 20 ಕೊನೆಯ ದಿನಾಂಕವಾಗಿತ್ತು.
ಅರ್ಹ ಫಲಾನುಭವಿಗಳಿಗೆ ತೊಂದರೆಯಾಗದಂತೆ ಹಾಗೂ ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಉದ್ದೇಶದಿಂದ ಈ ಗಡುವನ್ನು ಮುಂದೂಡಲಾಗಿದೆ.
e-KYC ಪರೀಕ್ಷೆ ಕಡ್ಡಾಯತೆ
ಯಾರಿಗೆಲ್ಲ e-KYC ಕಡ್ಡಾಯ?
1 ವರ್ಷದ ಹಿಂದೆ ಪೂರ್ಣಗೊಳಿಸಿದವರು: ಕಳೆದ ಒಂದು ವರ್ಷದ ಹಿಂದೆ ಇ-ಕೆವೈಸಿ ಪೂರ್ಣಗೊಳಿಸಿರುವ ಸುಮಾರು 1.1 ಕೋಟಿ ಫಲಾನುಭವಿಗಳು ಈ ಪ್ರಕ್ರಿಯೆಯನ್ನು ಮತ್ತೊಮ್ಮೆ ಪುನರಾವರ್ತಿಸಬೇಕಾಗಿದೆ.
5 ವರ್ಷಗಳಿಗೂ ಹಳೆಯ ಮಾಹಿತಿ: ಐದು ವರ್ಷಗಳಿಗಿಂತ ಹೆಚ್ಚು ಕಾಲದ ಹಿಂದೆ ಇ-ಕೆವೈಸಿ ಪೂರ್ಣಗೊಳಿಸಿರುವ 54.3 ಲಕ್ಷ ಫಲಾನುಭವಿಗಳು ಮರು ಪರಿಶೀಲನೆಗೆ ಒಳಪಡಲಿದ್ದಾರೆ.
ಇದುವರೆಗೆ ಮಾಡಿಸದವರು: ಇದುವರೆಗೆ ಒಮ್ಮೆಯೂ ಇ-ಕೆವೈಸಿ ಪೂರ್ಣಗೊಳಿಸದ 3.8 ಲಕ್ಷ ಪಡಿತರ ಚೀಟಿದಾರರು ಸಹ ತಕ್ಷಣವೇ ಪರಿಶೀಲನೆ ಮಾಡಿಸುವುದು ಕಡ್ಡಾಯವಾಗಿದೆ.


