ಬೆಂಗಳೂರು : ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಅತ್ಯಂತ ಶ್ರೇಷ್ಠ ಗ್ರಾಮವಾದ ನೆಲಗದರನಹಳ್ಳಿ ಗ್ರಾಮದೇವತೆ ಮಾರಮ್ಮ ದೇವಿಯ ಅದ್ದೂರಿ ಜಾತ್ರಾ ಮಹೋತ್ಸವ ನಡೆದಿದ್ದು ಗ್ರಾಮದ ಹಿರಿಯರು ಸಾಮಾಜಿಕ ಧಾರ್ಮಿಕ ಸಂಪ್ರದಾಯಿಕವಾಗಿ ಕುಡಿಯುವ ನೀರು ಮೂಲ ಭೂತ ಸೌಕರ್ಯವನ್ನು ಗ್ರಾಮಸ್ಥರು ಸೇರಿ ಮಾಡಿದ್ದಾರೆ ಅದರಂತೆ ಮಾರಮ್ಮ ದೇವಿಯ ಅದ್ದೂರಿ ಜಾತ್ರೆ ಹಲವಾರು ಅತ್ಯುನ್ನತ ಕಾರ್ಯಗಳನ್ನು ಮಾಡಿಕೊಂಡು ಸುಮಾರು ವರ್ಷಗಳಿಂದ ನಡೆಯುತ್ತಿದೆ ಕಾರ್ಮಿಕ ರಕ್ಷಣೆ ಸೌರಕ್ಷಣೆ ಮತ್ತು ಆಶ್ರಯ ಕೊಟ್ಟು ಜನತೆಗೆ ಸಹಾಯ ಮಾಡಿದ್ದಾರೆ ಅದಲ್ಲದೆ ಕೈಗಾರಿಕಾ ಉದ್ಯೋಜನಕ್ಕೆ ತಮ್ಮ ತಮ್ಮ ಭೂಮಿಯನ್ನು ಬಿಟ್ಟುಕೊಟ್ಟು ಸರ್ಕಾರಕ್ಕೆ ದೇಶಕ್ಕೆ ಉಪಹಾರ ಮಾಡಿದಂತಹ ಪ್ರತಿಷ್ಟಿತ ಗ್ರಾಮ ಎಂದರೆ ನೆಲಗದರನಹಳ್ಳಿ ಎಂದು ರಾಜಗೋಪಾಲನಗರ ವಾರ್ಡಿನ ಸಮಾಜ ಜನ ಪ್ರಿಯ ಸೇವಕ ವಾಗ್ಮಿಗಳು ಬುದ್ದಿಜೀವಿಗಳು ಚಿಂತಕರು ಮತ್ತು ರಾಷ್ಟ್ರೀಯ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಡಾ.ಸಂಗನ ಬಸಪ್ಪ ಅವರು ಮಾರಮ್ಮ ದೇವಿ ದರ್ಶನ ಪಡೆದು ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದರು.

ಮಾರಮ್ಮ ದೇವಿ ದೇವಸ್ಥಾನದ ಅಧ್ಯಕ್ಷ ಮುನ್ನ ನಾರಾಯಣಪ್ಪ ಮಾತನಾಡಿ ಮಾರಮ್ಮ ದೇವಿಯ ಶಕ್ತಿ ಅಪಾರವಾದದ್ದು ಬೇಡಿದ ಭಕ್ತರಿಗೆ ವರವನ್ನು ಕೊಟ್ಟು ಕಾಪಾಡುವ ತಾಯಿ ಎಂದರು.
ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಕಮಿಟಿ ಉಪಾಧ್ಯಕ್ಷ ಹಾಗೂ ನೆಲಗದರನಹಳ್ಳಿ ಗ್ರಾಮದ ಹಿರಿಯ ಮುಖಂಡ ಭಾಸ್ಕರ್ ಆಚಾರಿ ಮಾತಾನಾಡಿ ಮಾರಮ್ಮ ದೇವಿ ನಮ್ಮ ಗ್ರಾಮಕ್ಕೆ ಮತ್ತು ಗ್ರಾಮಸ್ಥರಿಗೆ ಹಗಲಿರುಳು ನಮ್ಮನ್ನು ಯಾವುದೇ ತೊಂದರೆಯಾಗದಂತೆ ನೋಡಿಕೊಂಡು ಹೋಗುವ ತಾಯಿ ಮಾರಮ್ಮ ದೇವಿ ಭಾಸ್ಕರ್ ಆಚಾರಿ ಎಂದರು.
ಈ ಸಂದರ್ಭದಲ್ಲಿ ರಂಗಸ್ವಾಮಿ, ಜಗದೀಶ್ ಯಾದವ್, ಶಿವು ಗೋಪಾಲಕೃಷ್ಣ,ಭಾರತ್, ದೇವರಾಜು (ದೇವು), ನಾಗರಾಜ್, ದೇವಸ್ಥಾನ ಪ್ರದಾನ ಅರ್ಚಕರಾದ ನವಿನ್, ರವೀಶ್ ಸೇರಿದಂತೆ ಗ್ರಾಮಸ್ಥರು ದೇವಸ್ಥಾನ ಕಮಿಟಿ ಪದಾಧಿಕಾರಿಗಳು ಸದಸ್ಯರು ಮುಂತಾದವರು ಇದ್ದರು.
ವರದಿ: ಅಯ್ಯಣ್ಣ ಮಾಸ್ಟರ್

