ವಿಜಯಪುರ: ತಾಳಿಕೋಟೆ ತಾಲೂಕಿನ ಸಾಸನೂರು ಗ್ರಾಮದಲ್ಲಿ ಮಾದಿಗ ಸಮುದಾಯಕ್ಕೆ ಸೇರಿದ ಅಂಗವಿಕಲ ಯುವಕ ರವಿಕುಮಾರ್ (ತಾಯಿ: ಸೋಮವ್ವ ಮಾದರ್) ಅವರ ಮೇಲೆ ಅದೇ ಗ್ರಾಮದ ಸಂತೋಷ ದ್ಯಾಮನಗೊಂಡ ಎಂಬ ವ್ಯಕ್ತಿ ಅತ್ಯಂತ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ಅತ್ಯಂತ ಖಂಡನೀಯವಾಗಿದೆ .
ರವಿಕುಮಾರ ಅವರು ನಿರುದ್ಯೋಗಿ ಬಡತನದಿಂದ ಬಳಲುತ್ತಿದ್ದು ಉದ್ಯೋಗ ಸಿಗದ ಕಾರಣ ಗ್ರಾಮದಲ್ಲಿ ಚಿಕ್ಕ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದ . ಈ ಹಿಂದೆ ಅನಕ್ಷರಸ್ಥ ಸಾರ್ವಜನಿಕರಿಗೆ ಜಾತಿ ಪ್ರಮಾಣಪತ್ರ, ರೇಷನ್ ಕಾರ್ಡ್, ದಿಕ್ಕಿಲ್ಲದ ವಿಧವೆಯರಿಗೆ ವೇತನ ಸೇರಿದಂತೆ ವಿವಿಧ ಸರ್ಕಾರಿ ದಾಖಲೆಗಳ ಕೆಲಸ ಮಾಡಿಕೊಡುತ್ತಿದ್ದರು. ಕಳೆದ ಒಂದೆರಡು ವರ್ಷಗಳಿಂದ ಗ್ರಾಮ ಪಂಚಾಯಿತಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಸಿಕ್ಕ ಕಾರಣ ಆ ಕೆಲಸವನ್ನು ನಿಲ್ಲಿಸಿದ್ದರು.
ಘಟನೆಯ ದಿನ ಆರೋಪಿಯು ಮದ್ಯದ ಅಮಲಿನಲ್ಲಿ ಬಂದು, ತಾನು ಹೇಳಿದ ಕೆಲಸ ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾನೆ. ರವಿಕುಮಾರ ಅವರು ತಾವು ಆ ಕೆಲಸವನ್ನು ಈಗ ಮಾಡುವುದಿಲ್ಲ ಎಂದು ತಿಳಿಸಿದಾಗ, ಜಾತಿ ನಿಂದನೆ ಮಾಡುತ್ತಾ ಅವಾಚ್ಯ ಶಬ್ದಗಳಿಂದ ನಿಂದಿಸಿ, ಎದೆಗೆ ಒದ್ದು, ಅವರ ಊರುಗೋಲನ್ನು ಕಸಿದುಕೊಂಡು ಅದರಿಂದ ಹಲ್ಲೆ ನಡೆಸಿದ್ದಾನೆ. ಅಲ್ಲದೆ ಪಕ್ಕದಲ್ಲಿ ಇದ್ದ ಸೈಜ್ ಕಲ್ಲು ಎತ್ತಿ ತೆಲೆ ಮೇಲೆ ಹಾಕಲು ಸಹ ಪ್ರಯತ್ನಿಸಿದ್ದು, ರವಿಕುಮಾರ್ ಅವರು ಅಲ್ಲಿಂದ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗಾಯಗೊಂಡ ರವಿಕುಮಾರ್ ಅವರನ್ನು ಮೊದಲು ಬಸವನ ಬಾಗೇವಾಡಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಮಾಹಿತಿ ತಿಳಿದ ತಕ್ಷಣ ಕರ್ನಾಟಕ ಮಾದಿಗ ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀಶೈಲ ರತ್ನಾಕರವರು ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುವಿಗೆ ಧೈರ್ಯ ತುಂಬಿ, ವೈದ್ಯಕೀಯ ನೆರವು ನೀಡಿ ಕಾನೂನು (MLC) ಪ್ರಕ್ರಿಯೆ ನಡೆಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಘಟನೆಯ ಕುರಿತು ಮಾಹಿತಿ ನೀಡಿದರು .
ಈ ಘಟನೆಯ ಕುರಿತು ಪೊಲೀಸರು ಸಮಗ್ರ ತನಿಖೆ ನಡೆಸಿ, ಜಾತಿ ನಿಂದನೆ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದ ಕಾನೂನು ಪ್ರಕಾರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ಪಡಿಸಿದರು. ಈಗಾಗಲೆ ಆರೋಪಿಗಳಾದ(A1)ಸಂತೋಷ ಶಾಂತಪ್ಪ ದ್ಯಾಮಗೊಂಡ ಬಂಧಿಸಲಾಗಿದೆ. ಆದರೆ ಇತರ ಆರೋಪಿಗಳಾದ ಕೃತ್ಯದಲ್ಲಿ ಭಾಗಿಯಾಗಿದ್ದ (A2) ಶಾಂತಪ್ಪ ದ್ಯಾಮಗೊಂಡ (A3) ಬಸಪ್ಪ ದ್ಯಾಮಗೊಂಡ (A4) ಆನಂದ ಶಾಂತಪ್ಪ ದ್ಯಾಮಗೊಂಡ ಆರೋಪಿಗಳು ತಲೆ ಮರಸಿಕೊಂಡಿದ್ದು ಅವರನ್ನು ಕೂಡ ಶೀಘ್ರವಾಗಿ ಬಂಧಿಸಬೇಕು ಮತ್ತು ನೊಂದವರಿಗೆ ನ್ಯಾಯ ಕೊಡಿಸಬೇಕು ಎಂದರು.
ದಕ್ಷ ಅಧಿಕಾರಿಗಳಾದ ಬಸವಣ್ಣ ಬಾಗೇವಾಡಿಯ ಸಿಪಿಐ ಮಾನ್ಯ ಶ್ರೀ ಗುರುಶಾಂತ್ ದಶ್ಯಾಲ ಹಾಗು DSP ಮಾನ್ಯ ಶ್ರೀ ನಂದರೆಡ್ಡಿ ಸಂಘದ ಮುಖಾಂತರ ಧನ್ಯವಾದಗಳು ತಿಳಿಸಿದರು. ಮಾದಿಗ ಸಂಘಟನೆಯ ಸದಾನಂದ ಗುನ್ನಾಪುರ ನಾಗರಾಜ ಮಾದರ,ಬಾಲಚಂದ್ರ ಹುಲ್ಲೂರ್, ರಮೇಶ್ ಮಾದರ ಸಂಗಮೇಶ ಡವಳಗಿ ,ರಮೇಶ ದೊಡ್ಡಮನಿ ಮಲ್ಲು ಶೇಷಗಿರಿ, ಶಿವು ರೂಗಿ. ಪ್ರಶಾಂತ್ ದೊಡ್ಡಮನಿ ಇತರರು ಉಪಸ್ಥಿತಿ ಇದ್ದರು.
ವರದಿ.:ಸಾಯಬಣ್ಣ ಮಾದರ


