ಬೆಂಗಳೂರು: ಅನರ್ಹರು ಪಟ್ಟಿಯಿಂದ ಹೊರ ಹೋಗಬೇಕು, ರಾಜ್ಯದ ಅರ್ಹರಿಗಷ್ಟೇ ಗ್ಯಾರಂಟಿ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಗ್ಯಾರಂಟಿಗಳ ಉದ್ದೇಶ ಒಂದೇ - ಅರ್ಹರಿಗೆ ಸೌಲಭ್ಯ ಮುಂದುವರಿಯಬೇಕು, ವಿವಿಧ ಕಾರಣಗಳಿಂದ ಸೌಲಭ್ಯದಿಂದ ವಂಚಿತರಾಗಿರುವ ಅರ್ಹರಿಗೂ ಲಾಭ ಸಿಗಬೇಕು ಮತ್ತು ಅನರ್ಹರು ಪಟ್ಟಿಯಿಂದ ಹೊರ ಹೋಗಬೇಕು ಎಂದು ತಿಳಿಸಿದ್ದಾರೆ.
ಅನರ್ಹರನ್ನು ತೆಗೆದುಹಾಕುವುದಕ್ಕೆ ಪ್ರತಿಪಕ್ಷಗಳು ಆಕ್ಷೇಪಿಸುವುದೇಕೆ? ಗ್ಯಾರಂಟಿಗಳನ್ನು ಟೀಕಿಸುತ್ತಿದ್ದವರೇ ಇಂದು ಅವುಗಳ ಪರಿಣಾಮಕಾರಿತ್ವವನ್ನು ಒಪ್ಪಿಕೊಳ್ಳುವ ಪರಿಸ್ಥಿತಿ ಬಂದಿದೆ.
ನಮ್ಮ ಯೋಜನೆಗಳನ್ನು ಟೀಕಿಸಿದ ಪ್ರಧಾನಿ ಮೋದಿ ಅವರೇ ನಂತರ ಅದೇ ಮಾದರಿಯ ಯೋಜನೆಗಳನ್ನು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಜಾರಿಗೆ ತಂದಿರುವುದು ನಮ್ಮ ಗ್ಯಾರಂಟಿಗಳ ಯಶಸ್ಸಿನ ದೊಡ್ಡ ಮಾನ್ಯತೆಯಾಗಿದೆ ಎಂದು ಹೇಳಿದ್ದಾರೆ.


