Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮತದಾನ ಹಕ್ಕು ಇದ್ದವರಿಗೆ ಮಾತ್ರ ಗ್ಯಾರಂಟಿ ಯೋಜನೆಗಳು : ಡಿ.ಕೆ.ಶಿವಕುಮಾರ್

Advertisement

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ಸೌಲಭ್ಯವನ್ನು ಪಡೆಯಲು ಮತದಾನದ ಹಕ್ಕು ಕಡ್ಡಾಯವಾಗಿರಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಗಳೂರಿನ ವಿಧಾನಸೌಧದಲ್ಲಿ ಇಂದು ಮಹತ್ವದ ಹೇಳಿಕೆ ನೀಡಿದ್ದಾರೆ.

ಮತದಾನದ ಹಕ್ಕು ಹೊಂದಿರುವ ನಾಗರಿಕರಿಗೆ ಮಾತ್ರ ಸರ್ಕಾರದ ಈ ಸೌಲಭ್ಯಗಳು ತಲುಪಬೇಕು ಎಂಬ ಹೊಸ ನಿಲುವನ್ನು ಅವರು ವ್ಯಕ್ತಪಡಿಸಿದ್ದಾರೆ.

ವೋಟ್ ಇಲ್ಲದಿದ್ದರೆ ಗ್ಯಾರಂಟಿ ಯಾಕೆ? ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಚುನಾವಣೆಯಲ್ಲಿ ವೋಟಿಂಗ್ (ಮತದಾನ) ಇಲ್ಲ ಎಂದಾದರೆ ನಾವು ಯಾಕೆ ಗ್ಯಾರಂಟಿ ಯೋಜನೆಗಳನ್ನು ಕೊಡಬೇಕು?" ಎಂದು ನೇರವಾಗಿಯೇ ಪ್ರಶ್ನಿಸಿದರು. 

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ತಮ್ಮ ಮತದಾನದ ಹಕ್ಕನ್ನು ಚಲಾಯಿಸುವುದು ಮುಖ್ಯವಾಗಿದ್ದು, ಸರ್ಕಾರದ ಸೌಲತ್ತುಗಳನ್ನು ಪಡೆಯುವವರು ಈ ಜವಾಬ್ದಾರಿಯನ್ನು ಹೊಂದಿರುವುದು ಅತ್ಯಗತ್ಯ ಎಂದು ಅವರು ಪ್ರತಿಪಾದಿಸಿದರು.

ಶಕ್ತಿ ಯೋಜನೆಗೆ ಗುರುತಿನ ಚೀಟಿ ಕಡ್ಡಾಯ: ಇದೇ ಸಂದರ್ಭದಲ್ಲಿ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಮಹಿಳೆಯರ ಉಚಿತ ಪ್ರಯಾಣದ 'ಶಕ್ತಿ ಯೋಜನೆ'ಯ ಬಗ್ಗೆ ಮಾತನಾಡಿದ ಅವರು, ಈ ಯೋಜನೆಯ ಅಡಿಯಲ್ಲಿ ಪ್ರಯಾಣಿಸಲು ಸೂಕ್ತವಾದ ಗುರುತಿನ ಚೀಟಿಯನ್ನು ನೀಡುವುದು ಕಡ್ಡಾಯವಾಗಿದೆ ಎಂದರು. 

ಅಷ್ಟೇ ಅಲ್ಲದೆ, ತಳಮಟ್ಟದ ಬಡ ಜನರಿಗೆ ಸರ್ಕಾರ ಯಾವ ರೀತಿಯ ಕಾರ್ಯಕ್ರಮಗಳನ್ನು ನೀಡಿದೆ ಮತ್ತು ಅವು ಹೇಗೆ ತಲುಪುತ್ತಿವೆ ಎಂಬುದನ್ನು ಪ್ರತಿಯೊಬ್ಬರೂ ಗಮನಿಸಬೇಕಾಗಿದೆ ಎಂದು ತಿಳಿಸಿದರು.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಶ್ವಕಪ್ ಫುಟ್‌ಬಾಲ್: ಕೊಲಂಬಿಯಾಗೆ ೩-೧ ರ ಜಯದೆಹಲಿಯಲ್ಲೂ ದೋಸೆಯ ಘಮ, ಘಮ15 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಎಫ್ ಡಿಎ ಗ್ಲೇನ್ ಫಿಲಿಪ್ಸ್ ಶತಕ: ಕಿವೀಸ್ ಉತ್ತಮ ಮೊತ್ತಮುಖ್ಯಮಂತ್ರಿಯಾದ ಬಳಿಕ ಮೊದಲ ಟಾಸ್ಕ್ ನಲ್ಲೇ ಗೆದ್ದು ಬೀಗಿದ ಡಿ.ಕೆ.ಶಿವಕುಮಾರ್ ಮತದಾನ ಹಕ್ಕು ಇದ್ದವರಿಗೆ ಮಾತ್ರ ಗ್ಯಾರಂಟಿ ಯೋಜನೆಗಳು : ಡಿ.ಕೆ.ಶಿವಕುಮಾರ್60ನೇ ವಯಸ್ಸಿನಲ್ಲಿ ಪೇಸ್ ಬುಕ್ ಲವ್ : 80 ವರ್ಷದ ವರನ ವರಿಸಿದ ಹಿರಿಯ ನಟಿ ಸ್ಯಾಂಡ್ ಮಾಫಿಯಾ : ಬಿಜೆಪಿ ಮುಖಂಡ ಸೇರಿ ಮೂವರನ್ನು ಕಾರಿನಲ್ಲೇ ಸುಟ್ಟ ಕಿರಾತಕರುವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಐದೂ ಅಭ್ಯರ್ಥಿಗಳು ಗೆಲುವು ಪಕ್ಕಾ : ಲಕ್ಷ್ಮೀ ಹೆಬ್ಬಾಳ್ಕರ್ಸದ್ಯಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಕಡಿಮೆಯಾಗುವುದಿಲ್ಲ : ಕೇಂದ್ರ ಸರ್ಕಾರ ಸ್ಪಷ್ಟನೆ