ಚಾಮರಾಜನಗರ: ತಾಲ್ಲೂಕಿನ ಗೂಳಿಪುರ ಗ್ರಾಮದ ವಿ. ಮಹಾಂತದೇವರ ಸರ್ಕಾರಿ ಪ್ರೌಢಶಾಲೆಯಲ್ಲಿ 2004ನೇ ಸಾಲಿನಿಂದ 2008ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಸಂಭ್ರಮ ಸಡಗರದಿಂದ ನಡೆಯಿತು.
ಕಾರ್ಯಕ್ರಮವನ್ನು ಎಲ್ಲಾ ಶಿಕ್ಷಕ ವೃಂದ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.ನಂತರ ಶಾರದಾ ಮಾತ ಹಾಗೂ ಜಿ. ಎಂ ಶಿವಮಲ್ಲಪ್ಪ ರವರ ಫೋಟೋಗೆ ಪುಷ್ಪಾರ್ಚನೆ ಮಾಡಿದರು. ಶಿಕ್ಷಕರು ಮತ್ತು ಹಳೆಯ ವಿದ್ಯಾರ್ಥಿಗಳ ಸಮಾಗಮ ಎಲ್ಲಾರ ಗಮನ ಸೆಳೆಯಿತು.ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಳೆಯ ನೆನಪುಗಳನ್ನು ಮೆಲುಕು ಹಾಕಿ ತಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಹಂಚಿಕೊಂಡರು.ಗುರುಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಈ ಭಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಶಾಲಿನಿ.ಕೆ ಪ್ರಥಮ ಬಹುಮಾನ ಸಹನ. ಎಸ್ ದ್ವಿತೀಯ ಬಹುಮಾನ ಹಾಗೂ ನಿತ್ಯಶ್ರೀಗೆ ತೃತೀಯ ಬಹುಮಾನವನ್ನು ಹಳೆಯ ವಿದ್ಯಾರ್ಥಿಗಳಿಂದ ವಿತರಣೆ ಮಾಡಲಾಯಿತು.ಗುರುಗಳ ವೃಂದ ಹಾಗೂ ವಿದ್ಯಾರ್ಥಿಗಳ ವೃಂದ ತಮ್ಮ ನೆನಪುಗಳನ್ನು ವಿನಿಯಮ ಮಾಡಿಕೊಂಡರು...ಎಲ್ಲಾರಿಗೂ ಊಟದ ವ್ಯವಸ್ಥೆ ತುಂಬಾ ಅಚ್ಚುಕಟ್ಟಾಗಿ ಮಾಡಲಾಯಿತು.
ಈ ಸಂದರ್ಭದಲ್ಲಿ ಗುರುಗಳಾದ ರೇವಣ್ಣಸ್ವಾಮಿ, ಅಂಕಯ್ಯ, ನಾಗೇಶ್,ಜಾಯ್ಸ್,ಮಲ್ಲಮ್ಮ, ಸುಂದ್ರೇಶ್, ಅಂಕಶೆಟ್ಟಿ, ರುದ್ರಂಬಿಕ ಹಾಗೂ 2004ನೇ ಸಾಲಿನಿಂದ 2008ನೇ ಸಾಲಿನ ವಿದ್ಯಾರ್ಥಿಗಳು ಹಾಜರಿದ್ದರು.
ವರದಿ :ಸ್ವಾಮಿ ಬಳೇಪೇಟೆ

