Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆ

Advertisement

ಸಿಂಧನೂರು : ಸಿಂಧನೂರು ತಾಲೂಕಿನ ತುರುವಿಹಾಳ ಪಟ್ಟಣದ ಶ್ರೀ ವಿಶ್ವೇಶ್ವರಯ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಅಸಂಘಟಿತ ಕಾರ್ಮಿಕರ ಸಂಘದಿಂದ ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಸೋಮವಾರ ಮೇ೨೫ರಂದು ಪಟ್ಟಣದಲ್ಲಿ ಕಾರ್ಮಿಕರ ಮೆರವಣಿಗೆ ನಡೆಸಿ ಕಾರ್ಯಕ್ರಮ  ಆಯೋಜಿಸಲಾಯಿತು ಎಂದು ತಾಲೂಕ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಅನ್ವರ್ ಪಾಷಾ ತಿಳಿಸಿದರು.

ಪಟ್ಟಣದ ಕಾರ್ಮಿಕರ ಕಾರ್ಯಾಲಯ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಮಿಕ ಅಂತರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರತಿ ವರ್ಷ ಮೇ೧ರಂದು ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ ಕಟ್ಟಡ ಕಾರ್ಮಿಕರು ಸೇರಿದಂತೆ ಅಸಂಘಟಿತ ಕಾರ್ಮಿಕರ ಶ್ರಮವನ್ನು ಗೌರವಿಸಲು ಮತ್ತು ಅವರ ಹಕ್ಕುಗಳಾಗಿ ಧ್ವನಿಗೂಡಿಸಲು ಈ ದಿನ ಮೀಸಲಿಡಲಾಗಿದೆ ಕಟ್ಟಡ ಮತ್ತು ಇತರೆ ನಿರ್ಮಾಣ  ಕಾರ್ಮಿಕರಿಗೆ ನೆರವಾಗಲು ಸರ್ಕಾರವು ಹಲವು ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದೆ ಅರ್ಹ ಕಾರ್ಮಿಕರು ಕಾರ್ಮಿಕ ಕಾರ್ಡ್ ಪಡೆಯುವ ಮೂಲಕ ಪಿಂಚಣಿ. ವೈದ್ಯಕೀಯ ಸಹಾಯ.ಮತ್ತು ಮಕ್ಕಳ ಶಿಕ್ಷಣಕ್ಕೆ ಧನ ಸಹಾಯದಂತಹ ಸೌಲಭ್ಯಗಳನ್ನು ಪಡೆಯಬೇಕಾಗಿದೆ ಮಾಹಿತಿ ಕೊರತೆಯಿಂದ ಸೌಕರ್ಯಗಳು ಮರಿಚಿಕೆಯಾಗಿವೆ.

ತಾಲೂಕಿನಾದ್ಯಂತ ಸಾವಿರಾರು ನೊಂದಾಯಿತ ಕಾರ್ಮಿಕರಿದ್ದು ಅವರಿಗೆ ಕನಿಷ್ಠ ಮೂಲ ಸೌಕರ್ಯ ದೊರೆಯದೆ ಸಮಸ್ಯೆ ಎದುರಿಸುತ್ತಿದ್ದಾರೆ  ನಿರಂತರವಾಗಿ ದುಡಿಯುವ ಕಾರ್ಮಿಕರಿಗೆ ಸರ್ಕಾರದಿಂದ ಹಲವು ಸೌಲಭ್ಯಗಳಿವೆ . ಅವುಗಳನ್ನು ಸದುಪಯೋಗ ಮಾಡಿಕೊಳ್ಳಬೇಕಾಗಿದೆ ಈ ನಿಟ್ಟಿನಲ್ಲಿ ಸರ್ಕಾರ ನಾಡಿನಾದ್ಯಂತ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯನ್ನಾಗಿ ಆಚರಿಸಲಿ ಎಂದರು.

 ನಂತರ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ದುರುಗೇಶ್ ವಕೀಲರು ಮತ್ತು ಚಂದ್ರಶೇಖರ್ ಜಿ. ವಕೀಲರು ಮಾತನಾಡಿದರು   ಈ ಸಂದರ್ಭದಲ್ಲಿ:  ನಾಗರಾಜ್ ಕಾಟ್ವ ಮುಖ್ಯ ವೈದ್ಯಾಧಿಕಾರಿಗಳು, ಡಾ. ವಿರುಪಾಕ್ಷಪ್ಪ ಟಿ. ಆಯುಷ್ ವೈದಾಧಿಕಾರಿಗಳು ತುರುವಿಹಾಳ. ಎಂ. ಮುನಿಸ್ವಾಮಿ ಮಾರ್ಗದರ್ಶಕರು. ಹೊನ್ನಪ್ಪ ಗೌರವಾಧ್ಯಕ್ಷರು. ನಾಗಲಿಂಗಪ್ಪ ಉಪಾಧ್ಯಕ್ಷರು. ವೆಂಕಟೇಶ್ ಮಾಕಾಪುರ ಕಾರ್ಯದರ್ಶಿ. ಚಂದ್ರಶೇಖರ್ ಖಜಾಂಚಿ. ಅತಿಥಿಗಳಾದ ಹನುಮಂತಪ್ಪ ಅಧ್ಯಕ್ಷರು ಮಾರುತೇಶ್ವರ ಹಮಾಲರ ಸಂಘ. ವೀರೇಶ್ ಕಾರ್ಯದರ್ಶಿ. ಮುದುಕಪ್ಪ ಬೋವಿ. ಎಂಡಿ.ಅಜ್ಮೀರ್. ರಾಮಣ್ಣ ಕಾನಿಯಾಳ ಸೇರಿದಂತೆ ಇನ್ನೂ ಅನೇಕರಿದ್ದರು.

ವರದಿ  : ಬಸವರಾಜ ಬುಕ್ಕನಹಟ್ಟಿ, 

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಧ್ಯಕ್ಷರ ಬದಲಾವಣೆ ಏಕ ಪಕ್ಷಿಯ ನಿರ್ಣಯವಾಗಿದೆ : ವೀರೇಶ್ ಕೆ. ಹಂಚಿನಾಳಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆಅಕ್ರಮ ಮರಂ ದಂಧೆಗೆ ಕಡಿವಾಣ ಯಾವಾಗ ? ಸರಕಾರಿ ಡಿಗ್ರಿ ಕಾಲೇಜಿನಲ್ಲಿ 8 ಕೋಟಿ ಅಭಿವೃದ್ಧಿ ಕಾಮಗಾರಿ ಅಡಿಗಲ್ಲು ನೆರವೇರಿಸಿದ : ಸಚಿವ ಡಾ.ಶರಣಪ್ರಕಾಶ ಪಾಟೀಲಕಾಚೂರಿನಲ್ಲಿ 27 ಕೋಟಿ 110/33/11 ಕೆ.ವಿ ವಿದ್ಯುತ್ ಉಪ ಕೇಂದ್ರಕ್ಕೆ : ಸಚಿವ ಡಾ.ಶರಣಪ್ರಕಾಶ ಪಾಟೀಲ ಅಡಿಗಲ್ಲು.ಪಶು ವೈದ್ಯಕೀಯ ವಿಶ್ವವಿದ್ಯಾಲಯ 45 ಕೋಟಿ ರೂ. ಹಗರಣ : ಉಪಕುಲಪತಿ ಸೇರಿ ಆರು ಜನ ಅರೆಸ್ಟ್ ಗೂಡ್ಸ್ ಆಟೋ ಬೈಕ್‌ ಗೆ ಡಿಕ್ಕಿ : 6 ತಿಂಗಳ ಮಗು ಸೇರಿ ದಂಪತಿ ದುರ್ಮರಣಪಾವಗಡದಲ್ಲಿ ಜೆಡಿಎಸ್ ಬೃಹತ್ ಪ್ರತಿಭಟನೆಪೆಟ್ರೋಲ್ ಬಂಕ್ ಗಳಲ್ಲಿ ಪೆಟ್ರೋಲ್ ಸಿಗದೇ ಜನರ ಪರದಾಟರೆಡ್ ಫ್ಲ್ಯಾಗ್ ಪಕ್ಷದ  ಬಾಗೇಪಲ್ಲಿ ತಾಲ್ಲೂಕು ಕಾರ್ಯದರ್ಶಿಯಾಗಿ ಮುನೀರ್ ಖಾನ್ ಆಯ್ಕೆ