Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪಾವಗಡದಲ್ಲಿ ಜೆಡಿಎಸ್ ಬೃಹತ್ ಪ್ರತಿಭಟನೆ

ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ವೈಫಲ್ಯದ ವಿರುದ್ಧ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಆಕ್ರೋಶ!

Advertisement

ಪಾವಗಡ ತಾಲ್ಲೂಕು ಆಡಳಿತ ಮಾಜಿ ಸಚಿವರ ಕೈಯಲ್ಲಿ'..?

ಶಾಸಕ ಹೆಚ್ ವಿ ವೆಂಕಟೇಶ್ ರವರು ಬೆಂಗಳೂರು ಮತ್ತು ತುಮಕೂರಿನಲ್ಲಿ ವಾಸವಾಗಿದ್ದು.

ಪಾವಗಡ ತಾಲೂಕಿನವನ್ನು ಶಾಸಕ ಅವರ ತಂದೆ ಮಾಜಿ ಶಾಸಕ ವೆಂಕಟರಮಣಪ್ಪನವರಿಗೆ ತಾಲೂಕಿನಲ್ಲಿ ಆಡಳಿತ ನಡೆಸುವುದಕ್ಕೆ ಬಿಟ್ಟಿದ್ದಾರೆ. ಶಾಸಕರು.

 ಪಾವಗಡ ತಾಲೂಕಿನಲ್ಲಿ ಇಬ್ಬರು ಶಾಸಕರು ಆಡಳಿತ ನಡೆಸುವುದಕ್ಕೆ ಇದ್ದಾರೆ ತಂದೆ ಮತ್ತು ಮಗ. ಎಂದ ಜೆಡಿಎಸ್ ಪಕ್ಷದ ಮುಖಂಡರಗಳು.?


​ಪಾವಗಡ : ತಾಲ್ಲೂಕಿನಾದ್ಯಂತ ತೀವ್ರಗೊಳ್ಳುತ್ತಿರುವ ಕುಡಿಯುವ ನೀರಿನ ಭೀಕರ ಅಭಾವ, ಹದಗೆಟ್ಟ ಕಾನೂನು ಸುವ್ಯವಸ್ಥೆ ಹಾಗೂ ಕಾಂಗ್ರೆಸ್ ಸರ್ಕಾರದ ಮತ್ತು ಸ್ಥಳೀಯ ಶಾಸಕರ ಎಚ್ ವಿ ವೆಂಕಟೇಶ್  ಅಭಿವೃದ್ಧಿ ವೈಫಲ್ಯಗಳನ್ನು ಖಂಡಿಸಿ ಜಾತ್ಯತೀತ ಜನತಾದಳ (ಜೆಡಿಎಸ್) ಪಕ್ಷದ ವತಿಯಿಂದ ಸೋಮವಾರ ಪಾವಗಡ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

​ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಸಾಗಿದ ಪ್ರತಿಭಟನಾ ರ‍್ಯಾಲಿಯಲ್ಲಿ ನೂರಾರು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡು ಸರ್ಕಾರದ ಜನವಿರೋಧಿ ಧೋರಣೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

 ಬಳಿಕ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ವೈ. ರವಿ ಅವರಿಗೆ 15 ಪ್ರಮುಖ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಸಲ್ಲಿಸಲಾಯಿತು.


ಈ ​ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಜನಪ್ರಿಯ ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪನವರು, "ಮಳೆಯಿಲ್ಲದೆ ಅಂತರ್ಜಲ ಮಟ್ಟ ಕುಸಿದು ತಾಲೂಕಿನಲ್ಲಿ ಭೀಕರ ಬರದ ಛಾಯೆ ಆವರಿಸಿದೆ. ತುಂಗಾಭದ್ರಾ ಜಲಾಶಯದಿಂದ ತಾಲೂಕಿಗೆ ಸರಬರಾಜಾಗುತ್ತಿದ್ದ ನೀರು ಕೂಡ ಸ್ಥಗಿತಗೊಂಡಿದ್ದು, ಜನ-ಜಾನುವಾರುಗಳು ಹನಿ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ತಕ್ಷಣವೇ ಪಾವಗಡವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು ಹಾಗೂ ನಾಲ್ಕು ಹೋಬಳಿಗಳಲ್ಲಿ ಗೋಶಾಲೆಗಳನ್ನು ತೆರೆಯಬೇಕು" ಎಂದು ಒತ್ತಾಯಿಸಿದರು.

 ನಂತರ ಮಾತನಾಡಿ ಶಾಸಕ ಹೆಚ್ ವೆಂಕಟೇಶ್ ಮತ್ತು ನಿಮ್ಮ ತಂದೆ ಮಾಜಿ ಶಾಸಕ  ವೆಂಕಟರಮಪ್ಪ ರವರೆ  ನೀವು ಮಾಡ್ತಾ ಇರೋದು ಸರಿಯಲ್ಲ   ಪಾವಗಡ ಪೊಲೀಸ್ ಠಾಣೆಗಳನ್ನು ನಿಮ್ಮ ಹಿಡಿತದಲ್ಲಿ ಇಟ್ಟುಕೊಂಡು ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಸಿ ನೀವೇ ಸುಳ್ಳು ಕೇಸು  ದಾಖಲೆಗಳನ್ನು ಮಾಡಿಸಿ ಮತ್ತು ಬೆದರಿಕೆ ಮಾಡುತ್ತಿದ್ದೀರಾ. 

 ನೀವು ನನ್ನ ಕಾರ್ಯಕರ್ತರ ಮೇಲೆ ಇದೇ ತರ ಸುಳ್ಳು ಕೇಸುಗಳು ಮತ್ತು ದಬ್ಬಾಳಿಕೆ ಮಾಡಿದರೆ ಮುಂದಿನ ದಿನಗಳಲ್ಲಿ ಪಾವಗಡ ತಾಲೂಕಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಸೇರಿ ನಿಮ್ಮ ವಿರುದ್ಧ ಉಗ್ರ ಹೋರಾಟ ಮಾಡುತ್ತೇವೆ ತಂದೆ ವೆಂಕಟರಮಣಪ್ಪ ಮತ್ತು ಮಗ ವೆಂಕಟೇಶ್ ಅವರಿಗೆ ಈ ಸಂದರ್ಭದಲ್ಲಿ ಎಚ್ಚರಿಕೆ.

 ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡಿದರೆ ನಾನು ಸುಮ್ನೆ ಇರುವುದಿಲ್ಲ ಎಂದು ಮಾಜಿ ಶಾಸಕರು ಎಚ್ಚರಿಸಿದರು. 

news_1779775037_0_724.webp

 

ನಂತರ ಪಾವಗಡ ತಾಲ್ಲೂಕಿನ ಶಾಸಕರು ಪಾವಗಡ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿ ಅಂದ್ರೆ ಬರೀ ಬೆಂಗಳೂರು ತುಮಕೂರು ಅಂತ ಓಡಾಡಿಕೊಂಡು ಇರ್ತೀರಾ. ಶಾಸಕ ಸ್ಥಾನವನ್ನು ನಿಮ್ಮ ತಂದೆಗೆ ಬಿಟ್ಟುಕೊಟ್ಟು ಅಧಿಕಾರ ನಮ್ಮ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡುವುದಲ್ಲ ಬಿಟ್ ಬಿಟ್ಟು ತಾಲೂಕಿನಲ್ಲಿ ಅಭಿವೃದ್ಧಿ ಮಾಡುವುದಕ್ಕೆ ಒತ್ತು ನೀಡಬೇಕೆಂದು ತಿಳಿಸುತ್ತೇನೆ. ಎಂದು ತಿಳಿಸಿದರು.

​"ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಶಾಸಕರ ಇಶಾರೆಯಂತೆ ಪೊಲೀಸ್ ಠಾಣೆಗಳು ನಡೆಯುತ್ತಿದ್ದು, ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಲಾಗುತ್ತಿದೆ. ತಾಲ್ಲೂಕಿನ ಬಹುತೇಕ ಕಚೇರಿಗಳು ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದ್ದು, ಇದನ್ನು ತಕ್ಷಣವೇ ಸರಿಪಡಿಸಿಕೊಳ್ಳಬೇಕು" ಎಂದು ಎಚ್ಚರಿಸಿದರು.

​ ಇದೇ ಸಂದರ್ಭದಲ್ಲಿ ​ಮನವಿ ಪತ್ರ ಸ್ವೀಕರಿಸಿದ ತಹಶೀಲ್ದಾರ್ ವೈ. ರವಿ ಅವರು, ಪ್ರತಿಭಟನಾಕಾರರ ಬೇಡಿಕೆಗಳನ್ನು ಆಲಿಸಿ, ಇವುಗಳ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

 ಇದೇ  ಪ್ರತಿಭಟನೆಯಲ್ಲಿ. ಜೆಡಿಎಸ್ ಪಕ್ಷದ ಹಿರಿಯ ಮುಖಂಡರು. ತಿಮ್ಮಾರೆಡ್ಡಿ. ಆರ್ ಸಿ ಅಂಜಿನಪ್ಪ. ಜೆಡಿಎಸ್ ಪಕ್ಷದ ಅಧ್ಯಕ್ಷರು ಎನ್ಎ  ಈರಣ್ಣ. ಬಲರಾಮ್ ರೆಡ್ಡಿ. ಹಾಲು ಉತ್ಪಾದಕರ ನಿರ್ದೇಶಕ ಮತ್ತು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಚನ್ನಮಲ್ಲಯ್ಯ. ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರುಗಳರಾದ. ನರಸಿಂಹಪ್ಪ. ಮತ್ತು ಎಂ ಕೆ ನಾರಾಯಣಪ್ಪ. ಪಕ್ಷದ ಮುಖಂಡರುಗಳರಾದ. ಸೊಗಡು  ವೆಂಕಟೇಶ್. ಸಣ್ಣ ರೆಡ್ಡಿ. ಮಾಜಿ ಎಂ ಡಿ ಸೋಲಾರ್ ಬಲರಾಮ್. ಅಕ್ಕಲಪ್ಪ ನಾಯ್ಡು. ಮಹಿಳೆ ಘಟಕ ಅಂಬಿಕಾ. ಹಾಗೂ ಜೆಡಿಎಸ್ ಪಕ್ಷದ ಯುವ ನಾಯಕರು. ಗುಟ್ಟಹಳ್ಳಿ ಮಣಿ. ಬಿ ಕೆ ಹಳ್ಳಿ ರವೀಂದ್ರ ರೆಡ್ಡಿ. ಜೆಡಿಎಸ್ ಪಕ್ಷದ ಯುವ ಘಟಕದ ಭರತ್ ಕುಮಾರ್. ರೈತ ಘಟಕದ ಗಂಗಾಧರ ನಾಯ್ಡು. ದೇವರಾಜ್ ಮೆಡಿಕಲ್. ತಿರುಮಣಿ ಸುರೇಂದ್ರ. ಮನು ಮಹೇಶ್. ಕಾಲ್ಗೆರೆ ರಾಮಾಂಜಿ. ಆ ಬಂಡೆ ಗೋಪಾಲ. ರಕ್ಷಣಾ ವೇದಿಕೆ ಲಕ್ಷ್ಮಿನಾರಾಯಣ. ತಿರುಮಣಿ ಬಾಲು. ಬೋರ್ ವೆಲ್ ಮಂಜುನಾಥ್ ರೆಡ್ಡಿ. ಡಿಎಸ್ಎಸ್ ಪೆದ್ದಣ್ಣ. ಬಿಕೆಹಳ್ಳಿ ಗೋವಿಂದರೆಡ್ಡಿ. ರಾಮಕೃಷ್ಣ ರೆಡ್ಡಿ. ರಾಜರೆಡ್ಡಿ. ಮೂಲಗಿರಿಯಪ್ಪ. ಗಗನ   ತಾಲೂಕಿನ ಜೆಡಿಎಸ್ ಪಕ್ಷದ ಕಾರ್ಯಕರ್ತರು ಹಾಗೂ  ನೂರಾರು ಸಂಖ್ಯೆಯಲ್ಲಿ  ಭಾಗವಹಿಸಿದ್ದರು.

ವರದಿ: ಶಿವಾನಂದ 

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆಅಕ್ರಮ ಮರಂ ದಂಧೆಗೆ ಕಡಿವಾಣ ಯಾವಾಗ ? ಸರಕಾರಿ ಡಿಗ್ರಿ ಕಾಲೇಜಿನಲ್ಲಿ 8 ಕೋಟಿ ಅಭಿವೃದ್ಧಿ ಕಾಮಗಾರಿ ಅಡಿಗಲ್ಲು ನೆರವೇರಿಸಿದ : ಸಚಿವ ಡಾ.ಶರಣಪ್ರಕಾಶ ಪಾಟೀಲಕಾಚೂರಿನಲ್ಲಿ 27 ಕೋಟಿ 110/33/11 ಕೆ.ವಿ ವಿದ್ಯುತ್ ಉಪ ಕೇಂದ್ರಕ್ಕೆ : ಸಚಿವ ಡಾ.ಶರಣಪ್ರಕಾಶ ಪಾಟೀಲ ಅಡಿಗಲ್ಲು.ಪಶು ವೈದ್ಯಕೀಯ ವಿಶ್ವವಿದ್ಯಾಲಯ 45 ಕೋಟಿ ರೂ. ಹಗರಣ : ಉಪಕುಲಪತಿ ಸೇರಿ ಆರು ಜನ ಅರೆಸ್ಟ್ ಗೂಡ್ಸ್ ಆಟೋ ಬೈಕ್‌ ಗೆ ಡಿಕ್ಕಿ : 6 ತಿಂಗಳ ಮಗು ಸೇರಿ ದಂಪತಿ ದುರ್ಮರಣಪಾವಗಡದಲ್ಲಿ ಜೆಡಿಎಸ್ ಬೃಹತ್ ಪ್ರತಿಭಟನೆಪೆಟ್ರೋಲ್ ಬಂಕ್ ಗಳಲ್ಲಿ ಪೆಟ್ರೋಲ್ ಸಿಗದೇ ಜನರ ಪರದಾಟರೆಡ್ ಫ್ಲ್ಯಾಗ್ ಪಕ್ಷದ  ಬಾಗೇಪಲ್ಲಿ ತಾಲ್ಲೂಕು ಕಾರ್ಯದರ್ಶಿಯಾಗಿ ಮುನೀರ್ ಖಾನ್ ಆಯ್ಕೆದಾಸರಹಳ್ಳಿಯಲ್ಲಿ ಸಮೃದ್ಧಿ ಸೂರಿ ಸೇವಾ ಟ್ರಸ್ಟ್ ಉದ್ಘಾಟಿಸಿದ : ಶಾಸಕ ಎಸ್ ಮುನಿರಾಜು