LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ದಬ್ಬೇಘಟ್ಟ ಜಿಪಂ ಕ್ಷೇತ್ರದ ಜೆಡಿಎಸ್ ಅಥವಾ ಎನ್.ಡಿ.ಎ. ಟಿಕೆಟ್ ಆಕಾಂಕ್ಷಿ: ವಿಜಯೇಂದ್ರ ಕುಮಾರ್

Advertisement

ತುರುವೇಕೆರೆ : ತಾಲ್ಲೂಕಿನ ದಬ್ಬೇಘಟ್ಟ ಜಿಲ್ಲಾ ಪಂಚಾಯ್ತಿ ಕ್ಷೇತ್ರದಿಂದ ಜಾತ್ಯಾತೀತ ಜನತಾದಳ ಅಥವಾ ಎನ್.ಡಿ.ಎ. ಮೈತ್ರಿ ಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಶಾಸಕ ಎಂ.ಟಿ.ಕೃಷ್ಣಪ್ಪನವರ ಕಿಚನ್ ಕ್ಯಾಬಿನೇಟ್ ಸದಸ್ಯರಲ್ಲಿ ಒಬ್ಬರೆಂದು ಗುರುತಿಸಿಕೊಂಡಿರುವ ಒಕ್ಕಲಿಗ ಸಮುದಾಯಕ್ಕೆ ಸೇರಿದ ಮಾವಿನಕೆರೆಯ ವಿಜಯೇಂದ್ರ ಕುಮಾರ್ (ಮಾವಿನಕೆರೆ ವಿಜಿ) ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಪ್ರಸ್ತುತ ಮುಂಬರುವ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸಿರುವ ಮಾವಿನಕೆರೆ ವಿಜಯೇಂದ್ರ ಕುಮಾರ್ ಅವರು ಮೂಲತಃ ಕೊಬ್ಬರಿ ವರ್ತಕರು. ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಗೆ ಸೇರಿದ ಮಾವಿನಕೆರೆ ತಮ್ಮ ಜನ್ಮಸ್ಥಳವಾದರೂ ತುರುವೇಕೆರೆಯಲ್ಲಿ ತಮ್ಮ ವ್ಯಾಪಾರ ವೃತ್ತಿಯನ್ನು ನಡೆಸುತ್ತಿದ್ದಾರೆ. ದಬ್ಬೇಘಟ್ಟ ಹೋಬಳಿಯ ಪ್ರತಿ ಗ್ರಾಮಕ್ಕೂ ಚಿರಪರಿಚಿತರಾಗಿರುವ ವಿಜಯೇಂದ್ರ ಕುಮಾರ್ (ಮಾವಿನಕೆರೆ ವಿಜಿ) ಅವರು ಶಾಸಕ ಎಂ.ಟಿ.ಕೃಷ್ಣಪ್ಪನವರ ಕಿಚನ್ ಕ್ಯಾಬಿನೆಟ್ ಸದಸ್ಯರಲ್ಲಿ ಒಬ್ಬರು ಎಂದೇ ಹೆಸರಾಗಿದ್ದಾರೆ. ಜೆಡಿಎಸ್ ಪಕ್ಷದ ತತ್ವ ಸಿದ್ದಾಂತ ಮೆಚ್ಚಿ ದಶಕಗಳಿಂದ ಜೆಡಿಎಸ್ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ, ಶಾಸಕ ಎಂ.ಟಿ.ಕೃಷ್ಣಪ್ಪನವರ ಕಟ್ಟಾ ಬೆಂಬಲಿಗರಾಗಿ ಗುರುತಿಸಿಕೊಂಡಿರುವ ವಿಜಯೇಂದ್ರ ಕುಮಾರ್ (ಮಾವಿನಕೆರೆ ವಿಜಿ) ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಆರಾಧ್ಯ ದೈವವೆಂದು ಭಾವಿಸಿದ್ದಾರೆ.

ಜಾತ್ಯಾತೀತ ಜನತಾದಳ ಪಕ್ಷದ ಸಂಘಟನೆ ಹಾಗೂ ಅಭಿವೃದ್ದಿಯಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿರುವ ವಿಜಯೇಂದ್ರ ಕುಮಾರ್ (ಮಾವಿನಕೆರೆ ವಿಜಿ) ಜೆಡಿಎಸ್ ಪಕ್ಷದ ಕಟ್ಟಾಳುವಾಗಿ ಕೆಲಸ ಮಾಡಿದ್ದಾರೆ. ವಿಧಾನಸಭಾ ಚುನಾವಣೆಗಳಲ್ಲಿ ಎಂ.ಟಿ.ಕೃಷ್ಣಪ್ಪನವರ ಪರವಾಗಿ ಮನೆಮನೆಗೆ ತೆರಳಿ ಪ್ರಚಾರ ನಡೆಸಿ ಕೃಷ್ಣಪ್ಪನವರ ಗೆಲುವಿಗೆ ಶ್ರಮಿಸಿದ್ದಾರೆ. ಯಾವುದೇ ಚುನಾವಣೆಗಳಿರಲಿ ಪಕ್ಷದ ಸೂಚನೆ ಮೇರೆಗೆ ಪಕ್ಷ ನೀಡಿದ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ತುರುವೇಕೆರೆ ಪಟ್ಟಣ ಪಂಚಾಯ್ತಿಯ ಅಧ್ಯಕ್ಷರಾಗಿ, ಒಕ್ಕಲಿಗರ ಸಂಘದ ನಿರ್ದೇಶಕರಾಗಿ, ತೆಂಗು ಬೆಳೆಗಾರರ ಸಂಘದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ವಿಜಯೇಂದ್ರ ಕುಮಾರ್ ತಾಲೂಕಿನಲ್ಲಿರುವ ಮೂರೂ ಪಕ್ಷಗಳಲ್ಲೂ ಅಗಾಧ ಸ್ನೇಹಿತರನ್ನು ಹೊಂದಿದ್ದು, ಎಲ್ಲಾ ಪಕ್ಷದವರ ಬೆಂಬಲದಲ್ಲಿ ಚುನಾವಣೆಯಲ್ಲಿ ಗೆಲ್ಲುವ ಆಶಯ ಹೊಂದಿದ್ದಾರೆ.  

ತುರುವೇಕೆರೆ ಕ್ಷೇತ್ರ ಜೆಡಿಎಸ್ ಪಕ್ಷದ ಭದ್ರಕೋಟೆಯಾಗಿದ್ದರೆ, ದಬ್ಬೇಘಟ್ಟ ಕ್ಷೇತ್ರ ಜೆಡಿಎಸ್ ಪಕ್ಷದ ರಾಜಧಾನಿಯಿದ್ದಂತೆ. ಇಂತಹ ಕ್ಷೇತ್ರದಲ್ಲಿ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ಧಿಸಲು ಈ ಹಿಂದೆಯೂ ವಿಜಯೇಂದ್ರ ಕುಮಾರ್ ಯತ್ನಿಸಿ ಪ್ರಚಾರದಲ್ಲೂ ನಿರತರಾಗಿದ್ದರು. ಆ ಸಂದರ್ಭದಲ್ಲಿ ಪಕ್ಷದ ವರಿಷ್ಠರ ಆಶಯದಂತೆ ಸ್ಪರ್ಧೆಯಿಂದ ಹಿಂದೆ ಸರಿದು ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿದ್ದರು. ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಪಕ್ಷದ ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷಕ್ಕೆ ಯುವ ಸಮೂಹವನ್ನು ಸೇರ್ಪಡೆಗೊಳಿಸುತ್ತಾ ಪಕ್ಷದ ಬಲವರ್ಧನೆಗೆ ದುಡಿಯುತ್ತಿದ್ದಾರೆ. ಮುಂಬರುವ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಒಕ್ಕಲಿಗರೇ ಹೆಚ್ಚಾಗಿರುವ ದಬ್ಬೇಘಟ್ಟ ಜಿಲ್ಲಾ ಪಂಚಾಯ್ತಿ ಕ್ಷೇತ್ರದಿಂದ ಜೆಡಿಎಸ್ ಪಕ್ಷದಿಂದಾಗಲೀ ಅಥವಾ ಎನ್.ಡಿ.ಎ. ಮೈತ್ರಿಕೂಟದಿಂದಾಗಲೀ ಶತಾಯಗತಾಯ ಸ್ಪರ್ಧಿಸಲು ನಿರ್ಧರಿಸಿ ಈಗಾಗಲೇ ಕ್ಷೇತ್ರದಾದ್ಯಂತ ಒಂದು ಸುತ್ತಿನ ಪ್ರಚಾರ ನಡೆಸುತ್ತಿದ್ದಾರೆ. 

ಈ ಕುರಿತಂತೆ ಮಾಧ್ಯಮದೊಂದಿಗೆ ವಿಜಯೇಂದ್ರ ಕುಮಾರ್ (ಮಾವಿನಕೆರೆ ವಿಜಿ) ಮಾತನಾಡಿ, ಪ್ರಾರಂಭದಿಂದಲೂ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಶಾಸಕ ಎಂ.ಟಿ.ಕೃಷ್ಣಪ್ಪನವರ ಮಾರ್ಗದರ್ಶನದಲ್ಲಿ ಪಕ್ಷದ ಸಂಘಟನೆಗೆ ದುಡಿದಿದ್ದೇನೆ. ಈ ಹಿಂದೆ ದಬ್ಬೇಘಟ್ಟ ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸಲು ಇಚ್ಛಿಸಿದಾಗ ಪಕ್ಷದ ವರಿಷ್ಠರ ಸೂಚನೆ ಮೇರೆಗೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದೆ. ಈಗ ಪಕ್ಷದ ನಾಯಕರು ನನ್ನ ಪಕ್ಷನಿಷ್ಠೆ ಗುರುತಿಸಿ, ನನ್ನ ಮೇಲೆ ಭರವಸೆ ಇಟ್ಟು ದಬ್ಬೇಘಟ್ಟ ಜಿಪಂ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಕೊಡುತ್ತಾರೆಂಬ ನಂಬಿಕೆ ನನಗಿದೆ. ಅಲ್ಲದೆ ದಬ್ಬೇಘಟ್ಟ ಹೋಬಳೀ ನನ್ನ ತವರು ಕ್ಷೇತ್ರವಾಗಿದ್ದು, ಎಲ್ಲಾ ಪಕ್ಷದವರ ಬೆಂಬಲ ನನಗೆ ದೊರೆಯುವ ವಿಶ್ವಾಸವಿದೆ ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸಿದರೆ ನೂರಕ್ಕೆ ನೂರರಷ್ಟು ಗೆಲುವು ಸಾಧಿಸುವ ನಂಬಿಕೆ ನನಗಿದೆ ಎಂದರು.

ವರದಿ : ಗಿರೀಶ್ ಕೆ ಭಟ್

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತರಗತಿಯಲ್ಲಿಯೇ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು; ಸಿಸಿಟಿವಿಯಲ್ಲಿ ದೃಶ್ಯ ಸೆರೆತರಗತಿಯಲ್ಲಿಯೇ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು; ಸಿಸಿಟಿವಿಯಲ್ಲಿ ದೃಶ್ಯ ಸೆರೆಬಿಷ್ಣೋಯ್ ಗ್ಯಾಂಗ್ ಹೆಸರಲ್ಲಿ ಬಾಲಿವುಡ್ ನಟರಿಗೆ ಬೆದರಿಕೆ : ಬೆಂಗಳೂರಿನ ಟೆಕ್ಕಿ ಅರೆಸ್ಟ್ ಡೀಸೆಲ್ ಬೆಲೆ ಹೆಚ್ಚಾದಾಗ ಯಾರೂ ಮಾತನಾಡಲಿಲ್ಲ : ಡಿ. ಕೆ ಶಿವಕುಮಾರ್ ಅಗ್ನಿವೀರರ ಸೇವಾ ಅವಧಿ ಮತ್ತೆ 2 ವರ್ಷ ವಿಸ್ತರಣೆ : ಕೇಂದ್ರ ಅನುಮೋದನೆ ಕಬ್ಬಿನ ಬೆಳೆಗಾರರ ಸಂಧಾನ ಸಭೆಗಳು ವಿಫಲ : ಡಿಸಿ ಕಚೇರಿಗೆ ಬೀಗ ಹಾಕಲು‌ ಯತ್ನಿಸಿದ ರೈತರು ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 5 ವಿಕೆಟ್ ಗಳ ಸುಲಭ ಜಯಅಸ್ಸಾಮ್ ವಿರುದ್ಧ ಕರ್ನಾಟಕಕ್ಕೆ ಇನ್ನಿಂಗ್ಸ್ 314 ರನ್ ಗಳ ದೊಡ್ಡ ಗೆಲುವು ಗೃಹಲಕ್ಷ್ಮಿಯರ 5 ಸಾವಿರ ಕೋಟಿ ರೂ. ಹಣ ಎಲ್ಲಿ ಹೋಯಿತು? : ನಿಖಿಲ್ ಕುಮಾರಸ್ವಾಮಿಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ನಿಯಮ ಅಪ್ರಸ್ತುತ