LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಮಾಯಸಂದ್ರದಲ್ಲಿ ಕನ್ನಡ ರಾಜ್ಯೋತ್ಸವ: ಸೌರಭ ಕಾನ್ವೆಂಟಿಗೆ ಸಮಗ್ರ ಪ್ರಶಸ್ತಿ

Advertisement

ತುರುವೇಕೆರೆ : ತಾಲ್ಲೂಕಿನ ಮಾಯಸಂದ್ರ ಗ್ರಾಮದಲ್ಲಿ ಆಯೋಜಿಸಿದ್ದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗ್ರಾಮದ ಸೌರಭ ಕಾನ್ವೆಂಟಿನ ವಿದ್ಯಾರ್ಥಿಗಳು ಪಥಸಂಚಲನ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದರು.

71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾಯಸಂದ್ರ ನಾಡಕಛೇರಿಯ ಉಪತಹಸೀಲ್ದಾರ್ ಸುರೇಶ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡ ಭಾಷೆ ಮಾತನಾಡುವ ಪ್ರಾಂತ್ಯಗಳನ್ನು ಒಗ್ಗೂಡಿಸಿ 1956 ರಲ್ಲಿ ಮೈಸೂರು ರಾಜ್ಯ ಮಾಡಲಾಯಿತು. ತದನಂತರದಲ್ಲಿ 1973 ನವೆಂಬರ್ 01 ರಂದು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಅಂದಿನಿಂದ ನವೆಂಬರ್ 01 ನೇ ತಾರೀಖಿನಂದು ಕನ್ನಡ ನಾಡಿನಾದ್ಯಂತ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ ಎಂದರು.

news_1793681994_0_985.webp

 

ಸೌರಭ ಕಾನ್ವೆಂಟಿನ ವಿದ್ಯಾರ್ಥಿಗಳು ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಥ ಸಂಚಲನದಲ್ಲಿ ದ್ವಿತೀಯ,. ರಾಷ್ಟ್ರಗೀತೆ, ನಾಡಗೀತೆ, ರೈತಗೀತೆ, ವಂದೇ ಮಾತರಂ ಗೀತೆ, ಝಂಡಾ ಗೀತೆ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ಸಾಂಸ್ಕೃತಿಕ ನೃತ್ಯ ಪ್ರದರ್ಶನದಲ್ಲಿ ದ್ವಿತೀಯ ಸ್ಥಾನ ಪಡೆದರು. ಶಾಲೆಯ ಮೌನಶ್ರೀ ಕನ್ನಡ ತಾಯಿ ಭುವನೇಶ್ವರಿ ವೇಷಧಾರಿಯಾಗಿ, ಗಾನವಿ ಒನಕೆ ಓಭವ್ವ ವೇಷಧಾರಿಯಾಗಿ, ಧನಲಕ್ಷ್ಮೀ, ಮಾರಿಯಾ ಫಾತಿಮಾ ನಾಡಿನ ಸಂಸ್ಕೃತಿಗೆ ಸಂಬಂಧಿಸಿದ ವೇಷಭೂಷಣ ತೊಟ್ಟು ನಾಗರೀಕರ ಗಮನಸೆಳೆದರು. 

ಈ ಸಂದರ್ಭದಲ್ಲಿ ತೆಂಗು ಮತ್ತು ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಎನ್.ಆರ್.ಜಯರಾಮ್, ಸೌರಭ ಕಾನ್ವೆಂಟಿನ ಕಾರ್ಯದರ್ಶಿ ಕಲ್ಪನಾ ಮುನಿರಾಜು, ಪಿಡಿಒ ಸಾವಿತ್ರಮ್ಮ, ಕಾರ್ಯದರ್ಶಿ ಧರ್ಮಪ್ರಕಾಶ್ ಸೇರಿದಂತೆ ಹೋಬಳೀಯ ನಾಗರೀಕರು, ಗಣ್ಯರು, ವಿವಿಧ ಶಾಲೆಗಳ ಮುಖ್ಯಶಿಕ್ಷಕರು, ಶಿಕ್ಷಕವೃಂದ ಉಪಸ್ಥಿತರಿದ್ದರು.

ವರದಿ : ಗಿರೀಶ್ ಕೆ ಭಟ್

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತರಗತಿಯಲ್ಲಿಯೇ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು; ಸಿಸಿಟಿವಿಯಲ್ಲಿ ದೃಶ್ಯ ಸೆರೆತರಗತಿಯಲ್ಲಿಯೇ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು; ಸಿಸಿಟಿವಿಯಲ್ಲಿ ದೃಶ್ಯ ಸೆರೆಬಿಷ್ಣೋಯ್ ಗ್ಯಾಂಗ್ ಹೆಸರಲ್ಲಿ ಬಾಲಿವುಡ್ ನಟರಿಗೆ ಬೆದರಿಕೆ : ಬೆಂಗಳೂರಿನ ಟೆಕ್ಕಿ ಅರೆಸ್ಟ್ ಡೀಸೆಲ್ ಬೆಲೆ ಹೆಚ್ಚಾದಾಗ ಯಾರೂ ಮಾತನಾಡಲಿಲ್ಲ : ಡಿ. ಕೆ ಶಿವಕುಮಾರ್ ಅಗ್ನಿವೀರರ ಸೇವಾ ಅವಧಿ ಮತ್ತೆ 2 ವರ್ಷ ವಿಸ್ತರಣೆ : ಕೇಂದ್ರ ಅನುಮೋದನೆ ಕಬ್ಬಿನ ಬೆಳೆಗಾರರ ಸಂಧಾನ ಸಭೆಗಳು ವಿಫಲ : ಡಿಸಿ ಕಚೇರಿಗೆ ಬೀಗ ಹಾಕಲು‌ ಯತ್ನಿಸಿದ ರೈತರು ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 5 ವಿಕೆಟ್ ಗಳ ಸುಲಭ ಜಯಅಸ್ಸಾಮ್ ವಿರುದ್ಧ ಕರ್ನಾಟಕಕ್ಕೆ ಇನ್ನಿಂಗ್ಸ್ 314 ರನ್ ಗಳ ದೊಡ್ಡ ಗೆಲುವು ಗೃಹಲಕ್ಷ್ಮಿಯರ 5 ಸಾವಿರ ಕೋಟಿ ರೂ. ಹಣ ಎಲ್ಲಿ ಹೋಯಿತು? : ನಿಖಿಲ್ ಕುಮಾರಸ್ವಾಮಿಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ನಿಯಮ ಅಪ್ರಸ್ತುತ