ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿನ ಅಕ್ರಮ ಆರೋಪಗಳ ತನಿಖೆಗೆ ರಚಿಸಲಾಗಿರುವ ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ಹಿರಿಯ ಐಪಿಎಸ್ ಅಧಿಕಾರಿ ಆರ್. ಹಿತೇಂದ್ರ (R Hithendra) ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಿ ಹೈಕೋರ್ಟ್ (High Court) ಆದೇಶ ಹೊರಡಿಸಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಧಾರವಾಡ ಏಕಸದಸ್ಯ ನ್ಯಾಯಪೀಠವು ಸೋಮವಾರ ಈ ಕುರಿತಾದ ಅರ್ಜಿಯ ವಿಚಾರಣೆ ನಡೆಸಿ ಈ ತೀರ್ಪು ನೀಡಿದೆ.
ಇದರನ್ವಯ, ಈ ಮೊದಲು ಎಸ್ಐಟಿ ಮುಖ್ಯಸ್ಥರಾಗಿ ಆದೇಶಿಸಲಾಗಿದ್ದ ಅಲೋಕ್ ಕುಮಾರ್ ಅವರ ಜಾಗಕ್ಕೆ ಆರ್. ಹಿತೇಂದ್ರ ಅವರನ್ನು ನೇಮಿಸಲಾಗಿದೆ. ಹಾಗೆಯೇ, ದಿವ್ಯಾ ಗೋಪಿನಾಥ್ ಅವರ ಬದಲಿಗೆ ಸೌಮೇಂದು ಮುಖರ್ಜಿ ಅವರನ್ನು ಎಸ್ಐಟಿಗೆ ಸೇರ್ಪಡೆಗೊಳಿಸಲಾಗಿದೆ.


