LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ಜಮೀನು ಲೀಸ್‌ ವಿವಾದ: ಇಬ್ಬರ ಕೊಲೆ, ಇನ್ನಿಬ್ಬರಿಗೆ ಗಾಯ 

Advertisement

ವಿಜಯಪುರ: ಜಮೀನು ಲೀಸ್ ವಿವಾದ ಹಿನ್ನೆಲೆಯಲ್ಲಿ ನಡೆದ ಎರಡು ಗುಂಪು ಘರ್ಷಣೆಯು ಇಬ್ಬರು ಕೊಲೆಯಲ್ಲಿ ಅಂತ್ಯವಾದ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕಿನ ತಡಲಗಿ ಗ್ರಾಮದಲ್ಲಿ ಶುಕ್ರವಾರ (ನ.13) ನಡೆದಿದೆ. ಘಟನೆಯಲ್ಲಿ ಇನ್ನಿಬ್ಬರು ಗಾಯಗೊಂಡಿದ್ದಾರೆ.

ತಡಲಗಿ ಗ್ರಾಮದ ಹನುಮವ್ವ ಮೇಟಿ ಎಂಬುವವರ ಜಮೀನು ಲೀಸ್ ಪಡೆದಿದ್ದ ಸಾಲೋಟಗಿ ಕುಟುಂಬದವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ.

ಲೀಸ್ ಪಡೆದಿದ್ದ ಸಾಲೋಟಗಿ ಕುಟುಂಬದವರು 10 ಎಕರೆ ಜಮೀನಿನಲ್ಲಿ ಕಬ್ಬು ಬೆಳೆದಿದ್ದರು.‌ ಆದರೆ, ಈ ಜಮೀನಿನಲ್ಲಿ ನಮ್ಮ ಪಾಲಿದೆ ಎಂದು ಹನುಮವ್ವ ಸಂಬಂಧಿಕರು ತಗಾದೆ ತೆಗೆದು ಕಬ್ಬು ಕಟಾವಿಗೆ ವಿರೋಧಿಸಿದ್ದರು.

ಇಂದು ಕಬ್ಬು ಕಟಾವು ವೇಳೆ ಲೀಸ್ ಪಡೆದ ಸಾಲೋಟಗಿ ಹಾಗೂ ಹನುಮವ್ವ ಸಂಬಂಧಿಕರ ಮದ್ಯೆ ವಾಗ್ವಾದ ನಡೆದಿದೆ. ಅಲ್ಲದೇ, ಮಾತಿಗೆ ಮಾತು ಬೆಳೆದು ಕೈ-ಕೈ ಮಿಲಾಯಿಸಿದ ಕಲ್ಲು, ಕಟ್ಟಿಗೆ, ಬೊಂಬುಗಳಿಂದ ಹಲ್ಲೆ ನಡೆಸಲಾಗಿದೆ.

ಇದರಲ್ಲಿ ಹನುಮಂತ ಹಾಗೂ ಮತ್ತೋರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನಿರಿಗೆ ಗಂಭೀರವಾಗಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಸ್ಥಳಕ್ಕೆ ಕೊಲ್ಹಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸೈಯದ್ ಮುಸ್ತಾಕ್ ಅಲಿ ಟಿ-20 : ಕರ್ನಾಟಕ ಶುಭಾರಂಭ2,000ಕ್ಕೆ ಮರುಳಾಗಬೇಡಿ, 5,000 ರೂ. ಬರುವಂತೆ ಮಾಡಬಲ್ಲೆ: ಕುಮಾರಸ್ವಾಮಿ 600ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಹಿರಿಯ ತೆಲುಗು ನಟ ಗಿರಿಬಾಬು ನಿಧನಅಯ್ಯಪ್ಪ ಭಕ್ತರಿಗೆ ಸಿಹಿ ಸುದ್ದಿ :  2 ಲಕ್ಷ ಉಚಿತ ಜೀವ ವಿಮೆ, ಮನೆಯ ಬಾಗಿಲಿಗೇ ಪ್ರಸಾದ RSSಗೂ ನೋಂದಣಿ ಮಾಡಿಸಲಿದ್ದೇನೆ: ಪ್ರಿಯಾಂಕ್ ಖರ್ಗೆಭಾರತ ಕಿರಿಯರ ತಂಡಕ್ಕೆ 338 ರನ್ ಗಳ ಗೆಲುವಿನ ಗುರಿ 15 ಸಾವಿರ ರೂ. ಸಂಬಳ ಪಡೆಯುವ ಯುವಕನ ಹೆಸರಿನಲ್ಲಿ 350 ಕೋಟಿ ರೂ. ವಂಚನೆ538 ಕೋಟಿ ರೂ. ಕೊಟ್ಟು ಕೋಟೆ ಖರೀದಿಸಿದ ಫೇಸ್‌ಬುಕ್‌ ಮಾಲಿಕ ಜುಕರ್‌ಬರ್ಗ್‌ಉಡುಪಿಗೆ ಬಂದ ಭೂಗತ ಪಾತಕಿ ರವಿ ಪೂಜಾರಿ :  ತಾಯಿಯ ಮೃತದೇಹದ ಮುಂದೆ ಬಿಕ್ಕಿ ಬಿಕ್ಕಿ ಅಳುಕಲಾದಗಿಯ ಶ್ರೀ ಗುರುಲಿಂಗೇಶ್ವರ ಪ್ರೌಢ ಶಾಲೆ : ಜವಾಹರಲಾಲ್ ನೆಹರು ಜನ್ಮದಿನದ ಹಾಗೂ ಮಕ್ಕಳ ದಿನಾಚರಣೆ ಆಚರಣೆ