Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಏಜೆಂಟ್ ನಂಬಿ ಹೋದವನಿಗೆ 2 ಮಕ್ಕಳ ತಾಯಿ ಜೊತೆ ಮದುವೆ 

Advertisement
ಹಾವೇರಿ: ರಾಜ್ಯದಲ್ಲಿ ಮದುವೆಗೆ ಹೆಣ್ಣು ಸಿಗದೆ ಯುವಕರು ಪಾದಯಾತ್ರೆ, ಹರಕೆಗಳ ಮೊರೆ ಹೋಗುತ್ತಿರುವುದು ಹೊಸತೇನಲ್ಲ. ಆದರೆ, ಇದೇ ಹತಾಶೆಯನ್ನು ಬಂಡವಾಳ ಮಾಡಿಕೊಂಡ ಖತರ್ನಾಕ್ ಗ್ಯಾಂಗ್‌ವೊಂದು ಯುವಕನಿಗೆ ಲಕ್ಷಾಂತರ ರೂಪಾಯಿ ಮೋಸ ಮಾಡಿ ಮದುವೆ ಮಾಡಿಸಿರುವ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿ ನಡೆದಿದೆ.

ಏನಿದು ಘಟನೆ ?

ತುಮ್ಮಿನಕಟ್ಟಿ ಗ್ರಾಮದ ರವೀಂದ್ರ ಜವಳಿ ಎಂಬ ಯುವಕ ಮದುವೆಗಾಗಿ ಹೆಣ್ಣು ಹುಡುಕುತ್ತಿದ್ದರು. ಇದನ್ನು ತಿಳಿದ ಬ್ರೋಕರ್, ರೇಖಾ ಎಂಬಾಕೆಯನ್ನು ಪರಿಚಯಿಸಿದ್ದಾರೆ. ರೇಖಾ ನೋಡಲು ಲಕ್ಷಣವಾಗಿದ್ದಾಳೆಂದು ನಂಬಿದ ರವೀಂದ್ರ ಮತ್ತು ಅವರ ಕುಟುಂಬಸ್ಥರು ಮದುವೆಗೆ ಒಪ್ಪಿಗೆ ನೀಡಿದ್ದಾರೆ.

ವಧುದಕ್ಷಣೆ ಹೆಸರಲ್ಲಿ 2.5 ಲಕ್ಷ ಲೂಟಿ

ಈ ಐನಾತಿ ಲೇಡಿ ಮತ್ತು ಆಕೆಯ ಗ್ಯಾಂಗ್ ಮದುವೆಗೆ ಮುನ್ನವೇ ವಧುದಕ್ಷಣೆಯ ಹೆಸರಿನಲ್ಲಿ ರವೀಂದ್ರ ಅವರಿಂದ ಬರೋಬ್ಬರಿ 2.5 ಲಕ್ಷ ರೂಪಾಯಿ ಹಣವನ್ನು ಪೀಕಿದ್ದಾರೆ. ಅಷ್ಟೇ ಅಲ್ಲದೆ, ವಯಸ್ಸಿನ ವ್ಯತ್ಯಾಸ ತಿಳಿಯಬಾರದೆಂದು ಆಧಾರ್ ಕಾರ್ಡ್‌ನಲ್ಲಿ ಜನ್ಮ ದಿನಾಂಕವನ್ನೇ ಎಡಿಟ್ ಮಾಡಿ ವಂಚಿಸಿದ್ದರು. ಇಬ್ಬರು ಮಕ್ಕಳ ತಾಯಿಯಾಗಿದ್ದ ರೇಖಾ, ತಾನು ಕನ್ಯೆ ಎಂದು ನಂಬಿಸಿ ರವೀಂದ್ರ ಅವರೊಂದಿಗೆ ವೈವಾಹವಾಗಿದ್ದಾರೆ.

ಬಯಲಾದ 'ಕಿಲಾಡಿ' ಪತ್ನಿಯ ಕಳ್ಳಾಟ

ಮದುವೆಯಾಗಿ ಕೇವಲ ಐದು ದಿನಗಳು ಕಳೆದಿರಲಿಲ್ಲ, ಅಷ್ಟರಲ್ಲೇ ಈ ಯುವತಿಯ ಅಸಲಿ ಮುಖವಾಡ ಕಳಚಿ ಬಿದ್ದಿದೆ. ಮನೆಗೆ ಬಂದಿದ್ದ ರೇಖಾಳಿಗೆ ಆಕೆಯ ಮಕ್ಕಳು ಫೋನ್ ಮಾಡಿದ್ದರು.

ಮಕ್ಕಳೊಂದಿಗೆ ಮಾತನಾಡುತ್ತಿದ್ದಾಗ ಬಂದ ಅನುಮಾನದಿಂದ ರವೀಂದ್ರ ರೇಖಾಳನ್ನು ವಿಚಾರಿಸಿದ್ದಾರೆ. ಬಳಿಕ ತನಗೆ ಈಗಾಗಲೇ ಎರಡು-ಮೂರು ಮದುವೆಯಾಗಿರುವುದು ಮತ್ತು ಇಬ್ಬರು ಮಕ್ಕಳಿರುವ ಸತ್ಯವನ್ನು ಆಕೆ ಒಪ್ಪಿಕೊಂಡಿದ್ದಾಳೆ.

ತನ್ನ ಕಳ್ಳಾಟ ಬಯಲಾಗುತ್ತಿದ್ದಂತೆ ರೇಖಾ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾಳೆ. ಗ್ರಾಮದಿಂದ ಸುಮಾರು 2 ಕಿಲೋಮೀಟರ್ ದೂರದವರೆಗೂ ಓಡಿ ಹೋಗಿದ್ದಾಳೆ.

ಆದರೆ ಬಿಡದ ರವೀಂದ್ರ ಮತ್ತು ಗ್ರಾಮಸ್ಥರು ಆಕೆಯನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಸದ್ಯ ಹತಾಶನಾಗಿರುವ ರವೀಂದ್ರ, ಅತ್ತ ಮದುವೆಯೂ ಇಲ್ಲದೆ, ಇತ್ತ ಹಣವೂ ಇಲ್ಲದೆ ಕಂಗಾಲಾಗಿದ್ದು, ನ್ಯಾಯಕ್ಕಾಗಿ ಹಲಗೇರಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ