LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

ಗೆಳತಿಯರಿಗೆ ಐಫೋನ್ ಗಿಫ್ಟ್ ಕೊಡಲೆಂದು 6.5 ಲಕ್ಷ ಮೌಲ್ಯದ ನಲ್ಲಿಗಳನ್ನು ಕದ್ದ ಅಪ್ರಾಪ್ತರು 

Advertisement

ನಾಗ್ಪುರ: ಗೆಳತಿಯರಿಗೆ ಐಫೋನ್ ಗಿಫ್ಟ್ ಕೊಡಲೆಂದು ಇಬ್ಬರು ಅಪ್ರಾಪ್ತ ಯುವಕರು 6.5 ಲಕ್ಷ ಮೌಲ್ಯದ ಐಷಾರಾಮಿ ನಲ್ಲಿಗಳನ್ನು ಕಳವು ಮಾಡಿದ ಘಟನೆ ಮಹಾರಾಷ್ಟ್ರದಲ್ಲಿ ಬೆಳಜಿಗೆ ಬಂದಿದೆ.

ಮಹಾರಾಷ್ಟ್ರದ ನಾಗ್ಪುರದಲ್ಲಿ ಈ ಘಟನೆ ನಡೆದಿದ್ದು, ಕದ್ದ ನಲ್ಲಿಗಳನ್ನು ಕೇವಲ 20 ಸಾವಿರ ರೂ.ಗೆ ಗುಜರಿ ವ್ಯಾಪಾರಿಗೆ ಮಾರಾಟ ಮಾಡಿ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.

ನಾಗ್ಪುರದ ರಾಹುಲ್ ಸೆರಾಮಿಕ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಟೈಲ್ಸ್ ಹಾಗೂ ಸ್ಯಾನಿಟರಿ ವೇರ್ ಅಂಗಡಿಯಲ್ಲಿ ಐಷಾರಾಮಿ ನಲ್ಲಿಗಳನ್ನು ಕದ್ದು ಆರೋಪಿಗಳು ಎಸ್ಕೇಪ್ ಆಗಿದ್ದರು. 

ಮೇ 27ರ ಮಧ್ಯರಾತ್ರಿ ಅಂಗಡಿಯ ಮೇಲ್ಛಾವಣಿಯ ತಗಡಿನ ಶೀಟ್‌ಗಳನ್ನು ತೆಗೆದು ಒಳನುಗ್ಗಿದ ಖದೀಮರು ದುಬಾರಿ ಬೆಲೆಯ 21 ನಲ್ಲಿಗಳನ್ನು ಕದ್ದೊಯ್ದಿದ್ದಾರೆ.

 ಕಳವಾದ ವಸ್ತುಗಳಲ್ಲಿ ಸುಮಾರು 4 ಲಕ್ಷ ಮೌಲ್ಯದ ಚಿನ್ನದ ವಿನ್ಯಾಸದ ಐದು ನಲ್ಲಿಗಳು ಸೇರಿದಂತೆ ರೋಸ್ ಗೋಲ್ಡ್ ಮತ್ತು ಸಿಲ್ವರ್ ಬಣ್ಣದ ಐಷಾರಾಮಿ ನಲ್ಲಿಗಳೂ ಇದ್ದವು.

ಕಳ್ಳತನದ ಬಗ್ಗೆ ಅಂಗಡಿ ಮಾಲೀಕ ರಾಹುಲ್ ಜಯಚಂದ್ ಬಾತ್ರಾ ಎಂಬುವವರು ಪೊಲಿಸರಿಗೆ ದೂರು ನೀಡಿದ್ದರು.

ಪ್ರಕರಣ ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ನಡೆಸಿದಾಗ ಕದ್ದ ಐಷಾರಾಮಿ ನಲ್ಲಿಗಳನ್ನು ಕೇವಲ 20 ಸಾವಿರ ರೂಒಪಯಿಗೆ ಗುಜರಿ ಅಂಗಡಿಯಲ್ಲಿ ಸೇಲ್ ಮಾಡಿರುವುದು ಪತ್ತೆಯಾಗಿದೆ. ಘಟನೆ ನಡೆದ ಕೇವಲ 12 ಗಂಟೆಗಳಲ್ಲಿ ನಾಗ್ಪುರ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ. 

ಸುಮಾರು 20 ರಿಂದ 35 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿ ಇಬ್ಬರು ಅಪ್ರಾಪ್ತರನ್ನು ವಶಕ್ಕೆ ಪಡೆದಿದ್ದಾರೆ.

ಅಲ್ಲದೆ, ಕದ್ದ ಮಾಲನ್ನು ಖರೀದಿಸಿದ್ದ 38 ವರ್ಷದ ಇರ್ಫಾನ್ ಅಲಿ ಎಂಬಾತನನ್ನು ಬಂಧಿಸಿ, ಕದ್ದ ಎಲ್ಲಾ ಐಷಾರಾಮಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಪೊಲೀಸರ ವಿಚಾರಣೆಯ ವೇಳೆ, ತಮ್ಮ ಗೆಳತಿಯರಿಗೆ ದುಬಾರಿ ಐಫೋನ್‌ಗಳನ್ನು ಉಡುಗೊರೆಯಾಗಿ ನೀಡಲು ಹಣದ ಅಗತ್ಯವಿದ್ದಿದ್ದರಿಂದ ಈ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂಗ್ಲೆಂಡ್ - ಶ್ರೀಲಂಕಾ 3 ನೇ ಟಿ-20 ಇಂದು 1 ಕೋಟಿ 10 ಲಕ್ಷ ಅನುದಾನ ವಿವಿಧ ಅಭಿವೃದ್ಧಿ ಕಾಮಗಾರಿಗೆ  ಭೂಮಿ ಪೂಜೆ ಜೆ ಟಿ ಪಾಟೀಲಜಿಂಬಾಬೆ ವಿರುದ್ಧ ಏಕದಿನ ಸರಣಿ ಗೆದ್ದ ಆಸ್ಟ್ರೇಲಿಯಾ ಅಮಿತ್ ಶಾ ಆರೋಗ್ಯದಲ್ಲಿ ಏರುಪೇರು : ಹುಬ್ಬಳ್ಳಿಯ ಹೋಟೆಲ್‌ನಲ್ಲಿಯೇ ಚಿಕಿತ್ಸೆ, ಕಾರ್ಯಕ್ರಮ ಗೈರುಮಹಿಳೆ ಕೊಂದು ಶವದ ಮೇಲೆ ಮಗು ಮಲಗಿಸಿದ ಪಾಪಿಗಳುನಿಪ್ಪಾಣಿ ನಗರದಲ್ಲಿ ಸಣ್ಣಪುಟ್ಟ ವಿವಾದಕ್ಕೆ ಯುವಕನ ಬರ್ಬರ ವಾಗಿ ಮರ್ಡರ್ಅವರಾದಿ ಗ್ರಾಮ ಪಂಚಾಯ್ತಿಗೆ ನುಗ್ಗಿ ತಂದೆ, ಮಗಳ ಕೊಲೆ ಕೇಸ್ : ಮೂವರು ಹಂತಕರು ಅರೆಸ್ಟ್ನಿರಂತರ ವಿದ್ಯುತ ಸರಬರಾಜುಗೆ ಆಗ್ರಹಿಸಿ ಹೆಸ್ಕಾಂ ಚಿಕ್ಕೊಡಿ ಕಚೇರಿಗೆ ಮುತ್ತಿಗೆ ಹಾಕಲು ಕರವೇ ಹಾಗೂ ರೈತರ ನಿರ್ಧಾರಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ಹೊಸ ರೂಲ್ಸ್ : ಸೆಲ್ಫಿ, ರೀಲ್ಸ್‌ಗೆ ಬ್ರೇಕ್ಗಣೇಶ ವಿಸರ್ಜನೆ ವೇಳೆ ಟ್ರ್ಯಾಕ್ಟರ್ ಹರಿದು ಇಬ್ಬರು ಬಾಲಕರು ಸಾವು