ಬೆಳಗಾವಿ: ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಏತ ನೀರಾವರಿ ಯೋಜನೆ ಹಾಗೂ ಶ್ರೀ ಬಸವೇಶ್ವರ ಏತ ನೀರಾವರಿ ಯೋಜನೆ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಬೇಕೆಂದು ಆಗ್ರಹಿಸಿ ರಾಮದುರ್ಗ ತಾಲೂಕಿನ ಸಾಲಹಳ್ಳಿಯಲ್ಲಿ ಇದೇ ಮೇ -25ರಂದ ರೈತ ಸಂಘದವರು ಹಮ್ಮಿಕೊಂಡ ಬೃಹತ್ ಹೋರಾಟ ನಡೆಸಿದರು.
ನೀರಾವರಿ ಯೋಜನೆ ಕುಂಠಿತ ಹಿನ್ನಲೆ ರೈತರ ಬೃಹತ ಹೋರಾಟದಲ್ಲಿ ಭಾಗಿಯಾಗಿ ರೈತರ ಸಮಸ್ಯೆಗಳನ್ನ ತಿಳಿಸಿದ ರೈತ ಸಂಘದ ಚೂನಪ್ಪ ಪೂಜಾರ, ಹಾಗೂ ಜಗದೀಶ್ ದೇವರೆಡ್ಡಿ ಮತ್ತು ರೈತ ಸಂಘದ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಮತ್ತು ಇನ್ನು ಹಲವಾರು ರೈತ ಮುಖಂಡರು ಹಾಗೂ ಪತ್ರಕರ್ತರು ಮಾತನಾಡಿದರು.
ಸಾಲಹಳ್ಳಿಯಲ್ಲಿ ಕರ್ನಾಟಕ ರೈತ ಸಂಘ ಹಮ್ಮಿಕೊಂಡಿದ್ದ ರಾಮದುರ್ಗ ಸಮಗ್ರ ನೀರಾವರಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ರಾಮದುರ್ಗ ಶಾಸಕ ಅಶೋಕ್ ಪಟ್ಟಣ ಭಾಗಿಯಾಗಿ ಸಮಸ್ತ ರೈತ ಸಮುದಾಯಕ್ಕೆ ಅತೀ ಶೀಘ್ರದಲ್ಲಿ ಸಮಗ್ರ ನೀರಾವರಿ ಯೋಜನೆಯ ಬೇಡಿಕೆ ಈಡೇರಿಸುವಂತೆ ರೈತರಿಗೆ ಪರಿಹಾರದ ಭರವಸೆ ನೀಡಿದರು.
ವರದಿ: ಮಂಜುನಾಥ ಕಲಾದಗಿ

