ಕಲಾದಗಿ : ಉತ್ತರ ಕರ್ನಾಟಕದಲ್ಲಿ ಶ್ರಾವಣ ಮಾಸದ ಆಗಮನವೆಂದರೆ ಹಬ್ಬಗಳ ಸಾಲಿಗೆ ಮುನ್ನುಡಿ ಆ ಸಂಭ್ರಮಕ್ಕೆ ನಾಂದಿ ಹಾಡುವುದೇ ನಾಗರ ಪಂಚಮಿ ಈ ಭಾಗದಲ್ಲಿ ಪಂಚಮಿ ಕೇವಲ ಒಂದು ಧಾರ್ಮಿಕ ಆಚರಣೆಯಷ್ಟೇ ಅಲ್ಲ ಅದು ಮಣ್ಣಿನ ಸಂಸ್ಕೃತಿ, ಕೃಷಿ ಬದುಕು ಮತ್ತು ಅಣ್ಣ-ತಂಗಿಯರ ಅವಿನಾಭಾವ ಪ್ರೀತಿಯನ್ನು ಬೆಸೆಯುವ ಭಾವನಾತ್ಮಕ ಹಬ್ಬ.
ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿಯ ಅಂಗವಾಗಿ ಮಹಿಳೆಯರು ವಿವಿಧ ದೇವಾಲಯಗಳಲ್ಲಿನ ನಾಗರ ಪ್ರತಿಮೆಗೆ ಭಕ್ತಿಯಿಂದ ಹಾಲೇರೆದು ಪೂಜಿಸಿದರು.
ಮಹಿಳೆಯರು ನಾಗರಪಂಚಮಿ ದಿನದಂದು ನಾಗಪ್ಪನಿಗೆ (ನಾಗದೇವನಿಗೆ) ಹಾಲು ಎರೆದು ಪೂಜಿಸುವುದು ಭಾರತೀಯ ಸಂಪ್ರದಾಯದ ಪ್ರಮುಖ ಆಚರಣೆಯಾಗಿದೆ ಇದು ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು ನಡೆಯುತ್ತದೆ ಹಾಲು ಸಮೃದ್ಧಿ, ಸೌಭಾಗ್ಯ ಹಾಗೂ ತಂಪಿನ ಸಂಕೇತವಾಗಿದ್ದು ಕುಟುಂಬದ ರಕ್ಷಣೆ ಮತ್ತು ಸಂತಾನ ಭಾಗ್ಯಕ್ಕಾಗಿ ಮಹಿಳೆಯರು ಭಕ್ತಿಯಿಂದ ಹುತ್ತಕ್ಕೆ ಅಥವಾ ನಾಗನ ವಿಗ್ರಹಕ್ಕೆ ಹಾಲು ಎರೆಯುತ್ತಾರೆ ಮನೆಯ ಹತ್ತಿರವಿರುವ ಹುತ್ತಕ್ಕೆ ಅಥವಾ ನಾಗರ ಕಲ್ಲಿನ ಮೂರ್ತಿಗೆ ಅರಿಶಿನ, ಕುಂಕುಮ, ಹೂವು ಹಾಗೂ ನೈವೇದ್ಯವನ್ನು ಅರ್ಪಿಸುತ್ತಾರೆ ದೇವಸ್ಥಾನದ ಆವರಣ ಸೇರಿದಂತೆ ವಿವಿಧೆಡೆ ಇರುವ ನಾಗಪ್ಪನ ಪ್ರತಿಷ್ಠಾಪನೆಯ ಸ್ಥಳಗಳಿಗೆ ತೆರಳಿ ಹೂವಿನ ಹಾರ, ಹಾಲು, ನೈವಿಧ್ಯಗಳೊಂದಿಗೆ ತೆರಳಿ “ ದೇವರ ಪಾಲು, ಗುರುವಿನ ಪಾಲು, ಹಿರಿಯರ ಪಾಲು, ಸರ್ವರ ಪಾಲು" ಎಂದು ಹೇಳುತ್ತಾ ಮಕ್ಕಳೊಂದಿಗೆ ನಾಗರ ಪ್ರತಿಮೆಗೆ ಹಾಲು ಎರೆದು ಪೂಜೆ ಸಲ್ಲಿಸಿದರು.
ಕುಟುಂಬಕ್ಕೆ ಯಾವುದೇ ಸರ್ಪದೋಷ ಅಥವಾ ತೊಂದರೆ ಬಾರದಂತೆ ತಡೆಯಲು ನಾಗದೇವನನ್ನು ಪ್ರಾರ್ಥಿಸಲಾಗುತ್ತದೆ ಮಕ್ಕಳಿಲ್ಲದ ಮಹಿಳೆಯರು ಹುತ್ತಕ್ಕೆ ಪೂಜೆ ಮಾಡಿ ಹಾಲು ಎರೆದರೆ ನಾಗಪ್ಪನ ಕೃಪೆಯಿಂದ ಸಂತಾನ ಭಾಗ್ಯ ಸಿಗುತ್ತದೆ ಎಂಬ ಬಲವಾದ ನಂಬಿಕೆಯಿದೆ.
ಸಾಯಂಕಾಲ ನದಿಗೆ ವಿಸರ್ಜನೆ ನಾಗರ ಪಂಚಮಿ ಹಬ್ಬದ ದಿನ ಪೂಜಿಸಿದ ಮಣ್ಣಿನ ನಾಗಪ್ಪನನ್ನು (ನಾಗರ ವಿಗ್ರಹ) ವಿಸರ್ಜಿಸಲು ಪೂಜೆ ಮುಗಿದ ನಂತರ ಅಥವಾ ಸಂಜೆ ಹರಿಯುವ ನದಿ, ಕೆರೆ ಅಥವಾ ಶುದ್ಧ ಜಲಶೇಖರಕ್ಕೆ ಭಕ್ತಿಯಿಂದ ಕೊಂಡೊಯ್ದು ನೀರಿನಲ್ಲಿ ವಿಸರ್ಜಿಸುವದು ಇದು ಪ್ರಕೃತಿಯೊಂದಿಗೆ ನಮ್ಮ ನಂಟನ್ನು ಮತ್ತು ಜಲಮೂಲಗಳ ಪಾವಿತ್ರ್ಯತೆಯನ್ನು ಸೂಚಿಸುತ್ತದೆ ಪೂಜೆ ಮುಗಿದ ಬಳಿಕ ನಾಗಪ್ಪನಿಗೆ ನಮಸ್ಕರಿಸಿ "ನಾಗ ದೇವತೆಗೆ ನಮಃ" ಎಂದು ಪ್ರಾರ್ಥಿಸಿ ಹರಿಯುವ ನೀರಿನಲ್ಲಿ ವಿಸರ್ಜಿಸುವದು.
ವರದಿ : ಬಸವರಾಜ ಪೂಜಾರಿ


