LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಶ್ರಾವಣ ಮಾಸದ ಪ್ರಮುಖ ಹಬ್ಬವಾದ ನಾಗಪಂಚಮಿ ಆಚರಣೆ

Advertisement

ಬೈಲಹೊಂಗಲ : ಶ್ರಾವಣ ಮಾಸದ ಪ್ರಮುಖ ಹಬ್ಬವಾದ ನಾಗಪಂಚಮಿ ಆಚರಣೆಗೆ ನಗರ ಹಾಗೂ ತಾಲೂಕಿನ ಜನತೆ ಸಜ್ಜಾಗಿದ್ದಾರೆ. ಆಗಸ್ಟ್ 16 ಮತ್ತು 17ರಂದು ಹಬ್ಬದ ಸಂಭ್ರಮ ಮನೆ ಮಾಡಿದ್ದು, ಮಹಿಳೆಯರು ಹಾಗೂ ಮಕ್ಕಳು ಜೋಕಾಲಿ ಆಡುವುದು, ಸಾಂಪ್ರದಾಯಿಕ ತಿನಿಸುಗಳನ್ನು ಸವಿಯುವ ಮೂಲಕ ಹಬ್ಬ ಆಚರಿಸಲು ಸಿದ್ಧತೆ ನಡೆಸಿದ್ದಾರೆ.

ನಾಗಪಂಚಮಿ ಹಿನ್ನೆಲೆಯಲ್ಲಿ ನಗರದ ಮಾರುಕಟ್ಟೆಗಳಲ್ಲಿ ನಾನಾ ಬಗೆಯ ಉಂಡಿಗಳ ಮಾರಾಟ ಭರದಿಂದ ಸಾಗಿದೆ. ಶೇಂಗಾ, ಎಳ್ಳು, ರವೆ, ಬುಂದಿ, ಬೇಸನ್, ಖಾರದಾನಿ, ಗುಳ್ಳಡಕಿ ಸೇರಿದಂತೆ ಹತ್ತಾರು ಬಗೆಯ ಉಂಡಿಗಳು ಸ್ವೀಟ್ ಮಾರ್ಟ್‌ಗಳಲ್ಲಿ ಲಭ್ಯವಿದ್ದು, ಕೆಜಿಗೆ ₹180ರಿಂದ ₹300ರವರೆಗೆ ದರವಿದೆ. ಚಕ್ಕುಲಿ, ಚೋಡಾ ಸೇರಿದಂತೆ ಖಾರದ ತಿಂಡಿಗಳಿಗೂ ಬೇಡಿಕೆ ಹೆಚ್ಚಾಗಿದೆ.

ಹಿಂದೆ ನಾಗಪಂಚಮಿ ಸಂದರ್ಭದಲ್ಲಿ ಮನೆಯಲ್ಲಿಯೇ ಉಂಡಿಗಳನ್ನು ತಯಾರಿಸುವುದು ವಾಡಿಕೆಯಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಸಮಯದ ಅಭಾವದಿಂದಾಗಿ ಮಾರುಕಟ್ಟೆಯಲ್ಲಿ ಸಿದ್ಧವಾಗಿ ದೊರೆಯುವ ಉಂಡಿಗಳ ಖರೀದಿಗೆ ಜನರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ಸಿಹಿ ತಿಂಡಿ ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ.

ಇದೇ ವೇಳೆ ರಾಯಣ್ಣ ವೃತ್ತದಲ್ಲಿ ಕುಂಬಾರ ಕುಟುಂಬಗಳು ಮಣ್ಣಿನಿಂದ ತಯಾರಿಸಿದ ವಿವಿಧ ಬಗೆಯ ನಾಗಪ್ಪನ ಮೂರ್ತಿಗಳನ್ನು ಮಾರಾಟಕ್ಕೆ ಇಟ್ಟಿವೆ.  ಒಂದು ಹೆಡೆ ಹಾಗೂ ಐದು ಹೆಡೆಯ ನಾಗಪ್ಪನ ಮೂರ್ತಿಗಳವರೆಗೆ ಲಭ್ಯವಿದ್ದು, ಭಕ್ತರು ಖರೀದಿಸುತ್ತಿದ್ದಾರೆ.

ನಗರದ ವಿವಿಧೆಡೆ ತೆರೆದಿರುವ ಅಳ್ಳುಬಟ್ಟಿಗಳಲ್ಲಿಯೂ ಜನದಟ್ಟಣೆ ಕಂಡುಬಂದಿದೆ. ಜನರು ಸರದಿ ಸಾಲಿನಲ್ಲಿ ನಿಂತು ಅಳ್ಳು  ಹುರಿಸಿಕೊಂಡು ಮನೆಗೆ ಕೊಂಡೊಯ್ಯುತ್ತಿದ್ದಾರೆ. ಒಟ್ಟಾರೆ ನಾಗಪಂಚಮಿ ಹಬ್ಬದ ಹಿನ್ನೆಲೆಯಲ್ಲಿ ಬೈಲಹೊಂಗಲ ನಗರದ ಮಾರುಕಟ್ಟೆಗಳಲ್ಲಿ ಹಬ್ಬದ ಖರೀದಿ ಭರಾಟೆ ಜೋರಾಗಿದೆ.

ವರದಿ : ದುಂಡಪ್ಪ ಹೂಲಿ  

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಸಮರ್ಪಕ ಆಸ್ತಿ ಹೊಂದಿರುವ ಆರೋಪ :  ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್‌ ಮಧ್ಯಂತರ ರಿಲೀಫ್ ಆರ್‌ಎಸ್‌ಎಸ್ ಎಂಬುದು ಒಂದು ಸಾವಿರ ತಲೆಗಳಿರುವ ವಿಷಸರ್ಪದಂತೆ : ಯತ್ರೀಂದ ಸಿದ್ದರಾಮಯ್ಯ  ನಾಗಪಂಚಮಿ ಆಚರಣೆಬೆಂಗಳೂರಲ್ಲಿ ಡಬಲ್ ಮರ್ಡರ್ : ತಂದೆ ಹಾಗೂ ಮಗನ ನಿಗೂಢ ಸಾವು, ಪತ್ನಿ ಮೇಲೆ ಅನುಮಾನ ವಿಧಾನ ಪರಿಷತ್‌ ಉಪಸಭಾಪತಿ ಸ್ಥಾನಕ್ಕೆ ಉಮಾಶ್ರೀ ನಾಮಪತ್ರ ಸಲ್ಲಿಕೆ ಊರಿನ ಕೀರ್ತಿ ಎತ್ತಿಹಿಡಿದ ವಿದ್ಯಾರ್ಥಿಗಳು: ಬಳ್ಳಿಗೇರಿ ಶಾಲಾ ಆವರಣದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ!ಶ್ರಾವಣ ಮಾಸದ ಪ್ರಮುಖ ಹಬ್ಬವಾದ ನಾಗಪಂಚಮಿ ಆಚರಣೆನಾಗರ ಪಂಚಮಿ ದಿವಸ : ವ್ಯಾಪಾರಸ್ಥರು ಕೂಡಿ ನಾಗಪ್ಪನ ಮೂರ್ತಿ ಪ್ರತಿಷ್ಠಾಪನೆಮಳೆ ಪ್ರಮಾಣ ಆಧರಿಸಿ ನೀರು ಬಿಡುಗಡೆಗೆ ಕ್ರಮ : ಸತೀಶ್ ಜಾರಕಿಹೊಳಿ 5 ರೂ.ಗೆ ಊಟ ನೀಡುವ 25 ಅಟಲ್‌ ಕ್ಯಾಂಟೀನ್ ಗಳ ಉದ್ಘಾಟನೆ