LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ನಾಗರ ಪಂಚಮಿ ದಿವಸ : ವ್ಯಾಪಾರಸ್ಥರು ಕೂಡಿ ನಾಗಪ್ಪನ ಮೂರ್ತಿ ಪ್ರತಿಷ್ಠಾಪನೆ

Advertisement

ಕಲಾದಗಿ : ಹಿಂದೂ ಧರ್ಮದಲ್ಲಿ  ಪ್ರಕೃತಿ ಆರಾಧನೆಗೆ ಮಹತ್ವವಿದ್ದು ಅದರಲ್ಲಿ ನಾಗರ ಪಂಚಮಿಯು  ಶ್ರಾವಣ ಮಾಸದ ಪ್ರಮುಖ ಹಬ್ಬವಾಗಿದೆ  ಪ್ರತಿ ವರ್ಷ ಶ್ರಾವಣ ಮಾಸದ  ಶುಕ್ಲ ಪಕ್ಷದ ಪಂಚಮಿ ತಿಥಿಯಂದು ನಾಗರ ಪಂಚಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದ  ಆದಕಾರಣ ಗ್ರಾಮದ ಬಸವೇಶ್ವರ ವೃತ್ತದ ಸಮೀಪ ಬಾಲು ಚೌಡಾ ಜಾಗದಲ್ಲಿ ಇಲ್ಲಿನ ಎಲ್ಲಾ ವ್ಯಾಪಾರಸ್ಥರು ಕೂಡಿ ಹೊಸದಾಗಿ ನಾಗಪ್ಪನ ವಿಗ್ರಹ ಪ್ರತಿಷ್ಠಾಪನೆ ಹಮ್ಮಿಕೊಳ್ಳಲಾಯಿತು  ಶುಭ ದಿನ, ಸೂಕ್ತ ಸ್ಥಳ ಹಾಗೂ ಧಾರ್ಮಿಕ ವಿಧಿವಿಧಾನಗಳಾದ ಜಲಧಿವಾಸ ಪ್ರಾಣ ಪ್ರತಿಷ್ಠೆ ಮತ್ತು ಹಾಲಿನ ಅಭಿಷೇಕದಂತಹ ಕ್ರಮಬದ್ಧವಾದ ಸಿದ್ಧತೆ ಮಾಡಿದರು.

ಪ್ರತಿಷ್ಠೆ ಮಾಡುವ ಮೊದಲು ವಿಗ್ರಹವನ್ನು ಜಲ ಅಥವಾ ಧಾನ್ಯದಲ್ಲಿ ಇಡಲಾಯಿತು  ನಂತರ ವಿಗ್ರಹ ಪ್ರತಿಷ್ಠಾಪನೆ ಮಾಡುವ ಜಾಗವನ್ನು ಸಗಣಿಯಿಂದ ಸಾರಿಸಿ  ರಂಗೋಲಿ ಹಾಕಿ ಅಲಂಕರಿಸಿ ಹೊಸ ವಿಗ್ರಹಕ್ಕೆ ಹಾಲು, ಜಲ, ತುಪ್ಪ ಮತ್ತು ಜೇನುತುಪ್ಪದಿಂದ ಪ್ರಾಥಮಿಕ ಅಭಿಷೇಕ ಮಾಡಿ. ಅರಿಶಿನ, ಕುಂಕುಮ, ಗಂಧ ಹಾಗೂ ವಿಧವಿಧವಾದ ಹೂವಿನ ಹಾರಗಳಿಂದ ನಾಗಪ್ಪನಿಗೆ ಪೂಜೆ ಸಲ್ಲಿಸಿದರು  ಎಳ್ಳುಂಡಿ, ತಂಬಟ್ಟು ಉಂಡಿ ಅಥವಾ ಹಾಲು-ತುಪ್ಪವನ್ನು ದೇವರಿಗೆ ನೈವೇದ್ಯ ಅರ್ಪಿಸಿದರು ನಂತರ ಎಲ್ಲಾ ಭಕ್ತರಿಗೂ ಅನ್ನಪ್ರಸಾದ ಮಾಡಿರೋದು ಈ ಕಾರ್ಯಕ್ರಮದಲ್ಲಿ ಎಲ್ಲಾ ವ್ಯಾಪಾರಸ್ಥರು ಹಾಗೂ ಮಹಿಳೆಯರು ಭಾಗವಹಿಸಿದ್ದರು.

ವರದಿ : ಬಸವರಾಜ ಪೂಜಾರಿ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಸಮರ್ಪಕ ಆಸ್ತಿ ಹೊಂದಿರುವ ಆರೋಪ :  ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್‌ ಮಧ್ಯಂತರ ರಿಲೀಫ್ ಆರ್‌ಎಸ್‌ಎಸ್ ಎಂಬುದು ಒಂದು ಸಾವಿರ ತಲೆಗಳಿರುವ ವಿಷಸರ್ಪದಂತೆ : ಯತ್ರೀಂದ ಸಿದ್ದರಾಮಯ್ಯ  ನಾಗಪಂಚಮಿ ಆಚರಣೆಬೆಂಗಳೂರಲ್ಲಿ ಡಬಲ್ ಮರ್ಡರ್ : ತಂದೆ ಹಾಗೂ ಮಗನ ನಿಗೂಢ ಸಾವು, ಪತ್ನಿ ಮೇಲೆ ಅನುಮಾನ ವಿಧಾನ ಪರಿಷತ್‌ ಉಪಸಭಾಪತಿ ಸ್ಥಾನಕ್ಕೆ ಉಮಾಶ್ರೀ ನಾಮಪತ್ರ ಸಲ್ಲಿಕೆ ಊರಿನ ಕೀರ್ತಿ ಎತ್ತಿಹಿಡಿದ ವಿದ್ಯಾರ್ಥಿಗಳು: ಬಳ್ಳಿಗೇರಿ ಶಾಲಾ ಆವರಣದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ!ಶ್ರಾವಣ ಮಾಸದ ಪ್ರಮುಖ ಹಬ್ಬವಾದ ನಾಗಪಂಚಮಿ ಆಚರಣೆನಾಗರ ಪಂಚಮಿ ದಿವಸ : ವ್ಯಾಪಾರಸ್ಥರು ಕೂಡಿ ನಾಗಪ್ಪನ ಮೂರ್ತಿ ಪ್ರತಿಷ್ಠಾಪನೆಮಳೆ ಪ್ರಮಾಣ ಆಧರಿಸಿ ನೀರು ಬಿಡುಗಡೆಗೆ ಕ್ರಮ : ಸತೀಶ್ ಜಾರಕಿಹೊಳಿ 5 ರೂ.ಗೆ ಊಟ ನೀಡುವ 25 ಅಟಲ್‌ ಕ್ಯಾಂಟೀನ್ ಗಳ ಉದ್ಘಾಟನೆ