LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

814 ಪಿಯು ಕಾಲೇಜ್ ಉಪನ್ಯಾಸಕರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ 

Advertisement

ಬೆಂಗಳೂರು: ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರ ಹುದ್ದೆ ಪಡೆಯಲು ಕಾಯುತ್ತಿದ್ದ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಿಹಿಸುದ್ದಿ ನೀಡಿದೆ.

ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆಯ ವಿವಿಧ ವಿಷಯಗಳ ಒಟ್ಟು 814 ಉಪನ್ಯಾಸಕ ಹುದ್ದೆಗಳ ನೇರ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಉಳಿಕೆ ಮೂಲ ವೃಂದ (RPC) 778 ಹುದ್ದೆಗಳು ಹಾಗೂ ಕಲ್ಯಾಣ ಕರ್ನಾಟಕ ವೃಂದದ 36 ಹುದ್ದೆಗಳು ಸೇರಿದಂತೆ ಒಟ್ಟು 814 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಅರ್ಹ ಅಭ್ಯರ್ಥಿಗಳು ನವೆಂಬರ್ 26ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು, ಡಿಸೆಂಬರ್ 25, 2026 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಈ ನೇಮಕಾತಿ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನಡೆಸಲಿದೆ.

ವಿಷಯವಾರು ಹುದ್ದೆಗಳ ವಿವರ

ಒಟ್ಟು 13 ವಿಷಯಗಳಲ್ಲಿ ಉಪನ್ಯಾಸಕರ ನೇಮಕಾತಿ ನಡೆಯಲಿದೆ. ವಿಷಯವಾರು ಹುದ್ದೆಗಳ ವಿವರ ಹೀಗಿದೆ:

ವಿಷಯ ಹುದ್ದೆಗಳ ಸಂಖ್ಯೆ

ಕನ್ನಡ – 89

ಇಂಗ್ಲಿಷ್ – 145

ಇತಿಹಾಸ – 50

ಅರ್ಥಶಾಸ್ತ್ರ – 90

ರಾಜ್ಯಶಾಸ್ತ್ರ – 25

ಸಮಾಜಶಾಸ್ತ್ರ – 25

ಭೂಗೋಳಶಾಸ್ತ್ರ – 10

ವಾಣಿಜ್ಯಶಾಸ್ತ್ರ -150

ಭೌತಶಾಸ್ತ್ರ – 30

ರಸಾಯನಶಾಸ್ತ್ರ – 30

ಗಣಿತಶಾಸ್ತ್ರ - 30

ಜೀವಶಾಸ್ತ್ರ - 30

ಗಣಕವಿಜ್ಞಾನ - 110

ಒಟ್ಟು - 814

ಶೈಕ್ಷಣಿಕ ಅರ್ಹತೆ ಏನು?

* ಸಂಬಂಧಪಟ್ಟ ವಿಷಯದಲ್ಲಿ ಕನಿಷ್ಠ ಶೇ.55 ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ (Master’s Degree) ಹೊಂದಿರಬೇಕು.

* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಕನಿಷ್ಠ ಶೇ.50 ಅಂಕಗಳ ಅರ್ಹತೆ ನಿಗದಿಪಡಿಸಲಾಗಿದೆ.

* ಬಿ.ಇಡಿ (B.Ed) ಅಥವಾ ತತ್ಸಮಾನ ಪದವಿ ಹೊಂದಿರಬೇಕು.

* ಗಣಕವಿಜ್ಞಾನ ವಿಷಯಕ್ಕೆ ಅಧಿಸೂಚನೆಯಲ್ಲಿ ನಿಗದಿಪಡಿಸಿರುವ ಎಂಸಿಎ, ಎಂ.ಎಸ್ಸಿ, ಎಂ.ಟೆಕ್ ಅಥವಾ ಬಿ.ಇ (ಕಂಪ್ಯೂಟರ್ ಸೈನ್ಸ್/ಇನ್ಫರ್ಮೇಷನ್ ಸೈನ್ಸ್) ಅರ್ಹತೆ ಅನ್ವಯಿಸುತ್ತದೆ.

ವಯೋಮಿತಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ವಯಸ್ಸು ಇರಬೇಕು.

* ಸಾಮಾನ್ಯ ವರ್ಗ: ಗರಿಷ್ಠ 40 ವರ್ಷ

* 2ಎ, 2ಬಿ, 3ಎ, 3ಬಿ: ಗರಿಷ್ಠ 43 ವರ್ಷ

* ಎಸ್‌ಸಿ, ಎಸ್‌ಟಿ ಮತ್ತು ಪ್ರವರ್ಗ-1: ಗರಿಷ್ಠ 45 ವರ್ಷ

ವೇತನ ಎಷ್ಟು?

ಆಯ್ಕೆಯಾದ ಅಭ್ಯರ್ಥಿಗಳಿಗೆ ₹69,250 ರಿಂದ ₹1,34,200 ವರೆಗೆ ವೇತನ ಶ್ರೇಣಿ ನಿಗದಿಪಡಿಸಲಾಗಿದೆ. ಇದರ ಜೊತೆಗೆ ನಿಯಮಾನುಸಾರ ಎನ್‌ಪಿಎಸ್ (NPS) ಹಾಗೂ ಕೆಜಿಐಡಿ ಸೌಲಭ್ಯಗಳು ಅನ್ವಯವಾಗಲಿವೆ. ನೇಮಕಗೊಂಡ ಅಭ್ಯರ್ಥಿಗಳು ಎರಡು ವರ್ಷಗಳ ಖಾಯಂ ಪೂರ್ವ ಅವಧಿಯಲ್ಲಿರುತ್ತಾರೆ.

ಅರ್ಜಿ ಶುಲ್ಕ

ಅಭ್ಯರ್ಥಿಗಳ ವರ್ಗ ಶುಲ್ಕ

ಸಾಮಾನ್ಯ ಹಾಗೂ ಇತರೆ ಅರ್ಹ ವರ್ಗಗಳು – ₹750

ಎಸ್‌ಸಿ, ಎಸ್‌ಟಿ, ಪ್ರವರ್ಗ-1, ಮಾಜಿ ಸೈನಿಕರು ಹಾಗೂ ತೃತೀಯ ಲಿಂಗಿ ಅಭ್ಯರ್ಥಿಗಳು -₹500

ವಿಶೇಷ ಚೇತನ ಅಭ್ಯರ್ಥಿಗಳು -₹250

ಪರೀಕ್ಷಾ ವಿಧಾನ

ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆಯು 2027ರ ಫೆಬ್ರವರಿಯಲ್ಲಿ ಆಫ್‌ಲೈನ್ ಓಎಂಆರ್ (OMR) ಮಾದರಿಯಲ್ಲಿ ನಡೆಯುವ ಸಾಧ್ಯತೆ ಇದೆ.

Advertisement

Author
bharathvaibhavx
📰 BV News 5 | Kannada | English
Voice of the People
📲 Breaking News,
📡 Latest Updates,
🎥 Exclusive Stories,
🌍 Stay informed, stay ahead.
✅ Follow us here 👇🏻
@bv_news_5
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತ ಎ, ತಂಡಕ್ಕೆ ಸೋಲುಹಸೆಮಣೆ ಏರಬೇಕಿದ್ದ ಯುವತಿ ಆತ್ಮಹತ್ಯೆ : ಕೊರಳಲ್ಲಿ ಅರಿಶಿಣ ಕೊಂಬು ಪತ್ತೆಹೋಮ್‌ವರ್ಕ್ ಮಾಡದ್ದಕ್ಕೆ 2ನೇ ತರಗತಿ ಬಾಲಕನ ಮೇಲೆ ಹಲ್ಲೆ : ಆಸ್ಪತ್ರೆಗೆ ದಾಖಲು ಭೂ ಪರಿಹಾರ ನೀಡದ ಹಿನ್ನೆಲೆ: ಚಿಕ್ಕೋಡಿಯ ಕರ್ನಾಟಕ ನೀರಾವರಿ ನಿಗಮದ ಕಚೇರಿ ವಸ್ತುಗಳು ಜಪ್ತಿ 814 ಪಿಯು ಕಾಲೇಜ್ ಉಪನ್ಯಾಸಕರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಸಂವಿಧಾನದ ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ನ್ಯಾಯಾಧೀಶ ಆನಂದ್ ಹೆಚ್. ಕೊಣ್ಣೂರುಸಂವಿಧಾನದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ತಾಯಪ್ಪ ಬಿ. ಹೊಸೂರುಶ್ರೀಲಂಕಾ ಎ, ತಂಡಕ್ಕೆ 318 ರನ್ ಗಳ ಗೆಲುವಿನ ಗುರಿ ನೀಡಿದ ಭಾರತ ಎ ತಿರುಪತಿ ತಿಮ್ಮಪ್ಪನಿಗೆ ₹206 ಕೋಟಿ ಮೌಲ್ಯದ ಚಿನ್ನ,ವಜ್ರಾಭರಣ ದೇಣಿಗೆ ನೀಡಿದ ದಂಪತಿಧಾರವಾಡದಲ್ಲಿ ಹೃದಯಾಘಾತಕ್ಕೆ 22 ವರ್ಷದ ಕಾನೂನು ವಿದ್ಯಾರ್ಥಿ ಬಲಿ