ಬೆಳಗಾವಿ: ಜಮೀನುಗಳಿಗೆ ತೆರಳುವ ಹದೆಗೆಟ್ಟ ರಸ್ತೆ ಸುಧಾರಿಸುವಂತೆ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಅಧಿಕಾರಿಗಳಿಗೆ ಧನ್ಯವಾದಗಳು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ವಾಸು ಮೇಟಿ ಬಣದ ರಾಜ್ಯ ಮಹಿಳಾ ಸಂಘಟನಾ ಕಾರ್ಯದರ್ಶಿ ಕಮಲಾ ಪಾಟೀಲ್ ಹೆಳಿದರು.
ಕಂಗ್ರಾಳಿ ಕೆ ಎಚ್ ಗ್ರಾಮದ ರೈತರ ಜಮೀನುಗಳಿಗೆ ತೆರಳುವ ಕಾಳಕಟ್ಟ ರಸ್ತೆ ಕಾಮಗಾರಿ ಪ್ರಾರಂಭದ ವೇಳೆ ಮಾತನಾಡಿದರ ಅವರು ಹದೆಗೆಟ್ಟ ರಸ್ತೆ ಸುಧಾರಿಸುವಂತೆ ನಮ್ಮ ಸಂಘಟನೆವತಿಯಿಂದ ಸಲ್ಲಿಸಿದ ಮನವಿಗೆ ಸ್ಪಂದಿಸಿ ಅಧಿಕಾರಿಗಳು ರಸ್ತೆ ಕಾಮಗಾರಿ ಪ್ರಾರಂಭಿಸಿದ್ದಾರೆ. ಇದರಿಂದ ರೈತರು ತಮ್ಮ ಕೃಷಿ ಚಟುವಟಿಕಗಳಿಗೆ ತೆರಳಲು ಮತ್ತು ಜಮೀನಲ್ಲಿ ಬೇಳೆದ ಬೆಳೆ ಸಾಗಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.


ಕಮಲಾ ಹರೀಶ್ ಪಾಟೀಲ್ ರಾಜ್ಯ ರೈತ ಸಂಘದ ಮಹಿಳಾ ಸಂಘಟನೆ ಕಾರ್ಯದರ್ಶಿ, ಕಾರ್ತಿಕ್ ಪಾಟೀಲ್, ಈರಣ್ಣ ವಾಸನ್ನವರ್, ಗ್ರಾಮ ರೈತ ಸಂಘದ ಅಧ್ಯಕ್ಷರು ನಾರಾಯಣ್ ಪಾಟೀಲ್,
ಮೀನಾ ಮುತಗೆಕರ್, ಎಲ್ಲಪ್ಪ ಪಾಟೀಲ್ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಕೇದಾರಿ ಪಾಟೀಲ್ ಪಿಕೆಪಿಎಸ್ ಸೊಸೈಟಿ ಉಪಾಧ್ಯಕ್ಷರು ಕಂಗ್ರಾಳಿ k h. ಮೊದಲಾದವರು ಉಪಸ್ಥಿತರಿದ್ದರು

