LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಆಗಸ್ಟ್ 15, 16 ರಂದು ಶ್ರೀ ಉಡುಸಲಮ್ಮ ದೇವಿಯವರ ನೇತ್ರೋನ್ಮಿಲನ‌ ಕಾರ್ಯಕ್ರಮ

Advertisement

ತುರುವೇಕೆರೆ: ಗ್ರಾಮದೇವತೆ ಶ್ರೀ ಉಡುಸಲಮ್ಮ ದೇವಿಯವರ ನೇತ್ರೋನ್ಮಿಲನ‌ ಕಾರ್ಯಕ್ರಮವನ್ನು ಆಗಸ್ಟ್ 15 ಶನಿವಾರ ಮತ್ತು 16 ಭಾನುವಾರದಂದು ಏರ್ಪಡಿಸಲಾಗಿದೆ ಎಂದು ದೇವಸ್ಥಾನದ ಧರ್ಮದರ್ಶಿ ಶ್ರೀನಿವಾಸ ಟಿ.ಕೆ. ತಿಳಿಸಿದರು.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ಆಗಸ್ಟ್ 15 ರಂದು ಸಂಜೆ ಗೋಧೂಳಿ ಲಗ್ನದಲ್ಲಿ ಅಮ್ಮನವರ ಉತ್ಸವ ಮೂರ್ತಿಯೊಂದಿಗೆ ಮಲ್ಲಾಘಟ್ಟ ಕೆರೆಯಲ್ಲಿ ಗಂಗೆಪೂಜೆ, ಗಣಪತಿ ಪೂಜೆ ನೆರವೇರಿಸಿ ದೇವಸ್ಥಾನದ ಆಲಯ ಪ್ರವೇಶ, ಪುಣ್ಯಾಹ, ಗಣಪತಿ ಹೋಮ, ನವಗ್ರಹ ಹೋಮ, ವಾಸ್ತು ಹೋಮ, ದಿಗ್ಬಲಿಹರಣ, ಲಘು ಪೂರ್ಣಾಹುತಿ, ತೀರ್ಥಪ್ರಸಾದ ವಿನಿಯೋಗ ನಡೆಸಲಾಗುವುದು ಎಂದರು.
news_1786172291_0_758.webp

 

ಆಗಸ್ಟ್ 16 ಭಾನುವಾರದಂದು ಬ್ರಾಹ್ಮೀ ಮುಹೂರ್ತದಲ್ಲಿ ಪುಣ್ಯಾಹ, ಗಣಪತಿ ಪೂಜೆ, ಪಂಚಕಲಸ ಸ್ಥಾಪನೆ, ನವಗ್ರಹ ಆರಾಧನೆ, ಅಷ್ಟೋತ್ತರ ಪೂಜೆ, ಬಲಿಪ್ರಧಾನ, ನಂತರ ಶ್ರೀ ಉಡುಸಲಮ್ಮ ದೇವಿಯವರಿಗೆ ನೇತ್ರೋನ್ಮಿಲನ ಕಾರ್ಯಕ್ರಮ ನೆರವೇರಿಸಲಾಗುವುದು ಎಂದರು.

ಇದೇ ದಿನ ಬೆಳಿಗ್ಗೆ 7.30 ಕ್ಕೆ ಗಣಪತಿ ಹೋಮ, ಕಳಾಹೋಮ, ಶ್ರೀ ಲಕ್ಷ್ಮೀ ಸಹಸ್ರನಾಮ ಪಾರಾಯಣ, ನವಶಕ್ತಿ ಹೋಮ, ದುರ್ಗಾ ಹೋಮ, ಮಹಾಪೂರ್ಣಾಹುತಿ, ಮಹಾಮಂಗಳಾರತಿ ನಡೆಸಿ ತೀರ್ಥ ಪ್ರಸಾದ ವಿತರಣೆ ನಂತರ ಮಧ್ಯಾಹ್ನ 12.30 ಕ್ಕೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದರು.

ಈ ಧಾರ್ಮಿಕ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಶಾಸಕ ಎಂ.ಟಿ. ಕೃಷ್ಣಪ್ಪ, ಮಾಜಿ ಶಾಸಕರಾದ ಮಸಾಲಾ ಜಯರಾಮ್, ಎಂ.ಡಿ. ಲಕ್ಷ್ಮೀನಾರಾಯಣ, ಬೆಮೆಲ್ ಕಾಂತರಾಜು, ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಡಿ. ರಮೇಶ್ ಗೌಡ, ತುಮುಲ್ ನಿರ್ದೇಶಕ ಮಹಲಿಂಗಪ್ಪ, ತಹಸೀಲ್ದಾರ್ ಕುಂಇ ಅಹಮದ್ ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆ. ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಾಯಿಯ ಕೃಪೆಗೆ ಪಾತ್ರರಾಗಬೇಕೆಂದು ಕೋರಿದರು.
ವರದಿ: ಗಿರೀಶ್ ಕೆ ಭಟ್

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಿಮ್ಮನಹಳ್ಳಿ ಗ್ರಾಮದಲ್ಲಿ ಬೋನಿಗೆ ಬಿದ್ದ ಹೆಣ್ಣು ಚಿರತೆಬೆರಳಿನ ಗಾಯ: ಬ್ಯಾಟ್ ಮಾಡಲು ಇಳಿಯುವರೇ ಶುಭಮಾನ್ ಗಿಲ್ಅಪಘಾನಿಸ್ತಾನ್ ತಂಡಕ್ಕೆ ೯೨ ರನ್‌ಗಳ ಜಯದೇವದತ್ತ ಪಡಿಕಲ್ ಆಕರ್ಷಕ ಅರ್ಧ ಶತಕಅಖಂಡ ಕರ್ನಾಟಕ ಹೂಗಾರ ಮಹಾ ಸಭಾದ ಸಾಮಾನ್ಯ ಸಭೆ: ರಾಜ್ಯಾಧ್ಯಕ್ಷ ಬಸವರಾಜ್ ಹೂಗಾರ್ಆಗಸ್ಟ್ 15, 16 ರಂದು ಶ್ರೀ ಉಡುಸಲಮ್ಮ ದೇವಿಯವರ ನೇತ್ರೋನ್ಮಿಲನ‌ ಕಾರ್ಯಕ್ರಮಆಸ್ತಿಗಾಗಿ ಕಲ್ಲಿನಿಂದ ಜಜ್ಜಿ ಅಣ್ಣನನ್ನೇ ಭೀಕರವಾಗಿ ಕೊಲೆಗೈದ ತಮ್ಮಮೂಲಭೂತ ಸೌಲಭ್ಯಗಳಿಗೆ ಆಗ್ರಹಿಸಿ ಯುವಕರ ಮೌನ ಪ್ರತಿಭಟನೆ; ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿದ ಇಒ ವೀರಣ್ಣ ವಾಲಿಸಂಪುಟ ವಿಸ್ತರಣೆ ಬಳಿಕ ಖಾತೆ ಹಂಚಿಕೆ ಕಸರತ್ತು : ಸಿದ್ದರಾಮಯ್ಯ ಜೊತೆ ಡಿ.ಕೆ.ಶಿ ಮಿಟಿಂಗ್ ​ಕಾಯಕವೇ ಕೈಲಾಸವೆಂದ ನಿಸ್ಸ್ವಾರ್ಥ ಸೇವಕ: ಶ್ರೀ ಶಿವಪ್ಪ ತಳವಾರ ಅವರಿಗೆ ಭಾವಪೂರ್ಣ ಶುಭಕೋರಿಕೆ