ಮಲ್ಲಮ್ಮನ ಬೆಳವಡಿ : ಮನುಷ್ಯನು ಸಮಾಜದಲ್ಲಿ ಬದುಕಬೇಕಾದರೆ ಸಂಘಟನೆ ಬೇಕು ಸಂಘಟನೆಗಳು ಒಂದು ಕುಟುಂಬವಿದ್ದಂತೆ ನಾವೆಲ್ಲರೂ ಒಂದೇ ಮನಸ್ಸಿನಿಂದ ರಾಜ್ಯದ ಕನ್ನಡ ನಾಡು ನುಡಿ. ಸಂಸ್ಕೃತಿ ಮತ್ತು ಸಾರ್ವಜನಿಕರ ಹಿತಾಸಕ್ತಿಗಳ ರಕ್ಷಣೆಗಾಗಿ ಹೋರಾಡಬೇಕು ಎಂದು ಬೆಳಗಾವಿ ಜಿಲ್ಲೆಯ ಜಯ ಕರ್ನಾಟಕಾ ಜನಪರ ಸಂಘಟನೆ ಅಧ್ಯಕ್ಷ ಶಿವರೆಡ್ಡಿ ಹುಚರಡ್ಡಿ ಹೇಳಿದರು. ದೊಡ್ಡವಾಡ ಗ್ರಾಮದಲ್ಲಿ ಜಯ ಕರ್ನಾಟಕ ಜನಪರ ಸಂಘಟನೆಯ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿ.
ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಹಾಗೂ ಅಖಂಡ ಭಾಗವೆಂದು ಸ್ಪಷ್ಟ ನಿರ್ಣಯವನ್ನು ಬೆಳಗಾವಿ ಮಹಾನಗರ ಪಾಲಿಕೆ ಅಂಗೀಕರಿಸುವರಿಗೂ ನಮ್ಮ ಹೋರಾಟ ನಿಲ್ಲದು ಎಂದು ಹೇಳಿದರು.
ಪಿಕೆಪಿಎಸ್ ಅಧ್ಯಕ್ಷ ನಿಂಗಪ್ಪ ಚೌಡನವರ ಮಾತನಾಡಿ ಸಂಘಟನೆಗಳು ಸಾಮಾಜಿಕ ಸೇವೆಗೆ ಸಾಕ್ಷಿಯಾಗಿವೆ ಮತ್ತು ಸಮಾಜದಲ್ಲಿನ ಅಂಕುಡಂಕುಗಳನ್ನು ತಿದ್ದಿ ನಡೆಸಬೇಕು ಅಂದರೆ ಸಂಘಟನೆಗಳ ಅವಶ್ಯಕತೆ ಇದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಸಂಗೀತಾ ಚಂದರಗಿ ಈಶ್ವರ ತುಪ್ಪದ, ಭಾಗ್ಯಶ್ರೀ ಪಾಟೀಲ, ಮಿನಾಕ್ಷೀ ಹತ್ತಿಗಿಡದ, ಮಹಾದೇವಿ ಹುಡೇದ, ನೂತನವಾಗಿ ಗ್ರಾಮ ಘಟಕದ ಅಧ್ಯಕ್ಷೆ ಸೋಮವ್ವಾ ಕಾಡನ್ನವರ, ಉಪಾಧ್ಯಕ್ಷೆ ಶಾಂತಾ ಮುರಗೋಡ ಪುರುಷರ ಘಟಕದ ಅಧ್ಯಕ್ಷರಾಗಿ ಪರಮೇಶ್ ಅಂದಾನಶೆಟ್ಟಿ, ಉಪಾಧ್ಯಕ್ಷರಾಗಿ ರದ್ರಪ್ಪಾ ತೋಟಗಿ, ಸಿದ್ದಲಿಂಗಪ್ಪಾ ಸುಣಕುಪ್ಪಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ದೂಡವಾಡ ಗ್ರಾಮದ ಜಡಿ ಸಿದ್ದೇಶ್ವರ ಸಭಾ ಭವನದಲ್ಲಿ ಜಯ ಕರ್ನಾಟಕ ಜನಪರ ಸಂಘಟನೆಯ ಗ್ರಾಮ ಘಟಕ ಉದ್ಘಾಟಿಸಿದ ಶಿವ ರೆಡ್ಡಿ ಹುಚ್ಚರಡ್ಡಿ ಹಾಗೂ ನಿಂಗಪ್ಪ ಚೌಡನವರ ಸಂಗೀತಾ ಚಂದರಗಿ ಇತರರು ಇದ್ದರು.
ವರದಿ : ದುಂಡಪ್ಪ ಹೂಲಿ

