ರಾವಲಪಿಂಡಿ: ಪಾಕಿಸ್ತಾನ ಹಾಗೂ ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವಿನ ತ್ರಿಕೋನ ಕ್ರಿಕೆಟ್ ಸರಣಿಯ 4 ನೇ ಪಂದ್ಯ ನಾಡೇದ್ದು, 25 ರಂದು ನಡೆಯಲಿದೆ.
ಇಲ್ಲಿನ ರಾವಲಪಿಂಡಿ ಕ್ರಿಕೆಟ್ ಮೈದಾನದಲ್ಲಿ ಪಂದ್ಯ ಅಂದು 1:30 ಕ್ಕೆ ಶುರುವಾಗಲಿದೆ.
ಪಾಕಿಸ್ತಾನ ತಾನಾಡಿದ ಮೊದಲ ಎರಡೂ ಪಂದ್ಯಗಳನ್ನು ಶ್ರೀಲಂಕಾ ವಿರುದ್ಧ ಹಾಗೂ ಇಂಗ್ಲೆಂಡ್ ವಿರುದ್ಧ ಗೆದ್ದು ಮುನ್ನಡೆಯಲ್ಲಿದೆ. ಇಂಗ್ಲೆಂಡ್ ತಾನಾಡಿದ ಎರಡೂ ಪಂದ್ಯಗಳನ್ನೂ ಸೋತಿದ್ದರೆ, ಶ್ರೀಲಂಕಾ ತಂಡವು ಇಂಗ್ಲೆಂಡ್ ವಿರುದ್ಧದ ದಾಖಲೆಯ ರನ್ ಚೇಸ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದಿತ್ತು.


