LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Politics News

ಸ್ಟಿಂಗ್ ಆಪರೇಷನ್ ನಲ್ಲಿ ನಮ್ಮ ಪಕ್ಷದವರೇ ಇದ್ದಾರೆ : ಯತೀಂದ್ರ ಸಿದ್ದರಾಮಯ್ಯ 

Advertisement

ಮೈಸೂರು : ತೀವ್ರ ಸಂಚಲನ ಸೃಷ್ಟಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ. ಯತೀಂದ್ರ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದು, ಪ್ರಕರಣದ ಹಿಂದೆ ಸ್ವಪಕ್ಷದವರೇ ಕೈವಾಡವಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೇಜೋವಧೆ ಮಾಡಲು ಮತ್ತು ಟಿಕೆಟ್‌ಗಾಗಿ ಬ್ಲಾಕ್ ಮೇಲ್ ಮಾಡುವ ಉದ್ದೇಶದಿಂದಲೇ ಈ ಕೃತ್ಯ ಎಸಗಲಾಗಿದೆ ಎಂದು ಅವರು ಮೈಸೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ.

ಕಳೆದ 40 ವರ್ಷಗಳ ರಾಜಕೀಯ ಜೀವನದಲ್ಲಿ ಯಾವುದೇ ಕಳಂಕವಿಲ್ಲದೆ ಸೇವೆ ಸಲ್ಲಿಸಿರುವ ತಮ್ಮ ತಂದೆಯ ಹೆಸರನ್ನು ಕೆಡಿಸಲು ಹಾಗೂ ಮುನ್ನೆಲೆಗೆ ಬರುತ್ತಿರುವ ವಿಚಾರಗಳನ್ನು ಹತ್ತಿಕ್ಕಲು ಈ ಸಂಚು ರೂಪಿಸಲಾಗಿದೆ ಎಂದು ಯತೀಂದ್ರ ಆರೋಪಿಸಿದ್ದಾರೆ. ಪುತ್ತೂರು ಟಿಕೆಟ್‌ಗಾಗಿ ಸ್ಟಿಂಗ್ ಆಪರೇಷನ್ ನಡೆಸಿದ ಆ ಮಹಿಳೆ ಕೂಡ ತಮ್ಮದೇ ಪಕ್ಷದವರು ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದಾರೆ.

ಈ ಬೆಳವಣಿಗೆಯಿಂದ ಸಿದ್ದರಾಮಯ್ಯ ಬೇಸರಗೊಂಡಿದ್ದಾರೆ ಎಂದು ತಿಳಿಸಿರುವ ಯತೀಂದ್ರ, "ನಮ್ಮ ತಂದೆ ಯಾವುದೇ ತಪ್ಪು ಮಾಡಿಲ್ಲವಾದ್ದರಿಂದ ಸತ್ಯವು ಖಂಡಿತಾ ಹೊರಬರುತ್ತದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 ತಂದೆಯ ಮೇಲಿನ ಈ ಅರೋಪಗಳಿಂದ ತಾಯಿ ಕೂಡ ಬೇಸರಗೊಂಡಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ನಿರ್ದೋಷಿ ಎಂಬುದು ತಿಳಿದಾಗ ತಾಯಿ ಖುಷಿಪಡುತ್ತಾರೆ ಎಂದು ತಿಳಿಸಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಉತ್ತರ ಕನ್ನಡದಲ್ಲಿ ಪ್ರತ್ಯಕ್ಷವಾಯ್ತು ಅಪರೂಪದ ಬೆಕ್ಕು ಹಾವುಸ್ಟಿಂಗ್ ಆಪರೇಷನ್ ನಲ್ಲಿ ನಮ್ಮ ಪಕ್ಷದವರೇ ಇದ್ದಾರೆ : ಯತೀಂದ್ರ ಸಿದ್ದರಾಮಯ್ಯ 5 ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದ ಬಂಗಾರದ ಬೆಲೆ ಬೆಚ್ಚಿ ಬೀಳಿಸೋ ಘಟನೆ : ಹಾವಿನ ಜೊತೆಗೆ ರಾತ್ರಿ ಕಳೆದ ಅಣ್ಣ ತಂಗಿಧಾರವಾಡದಲ್ಲಿ ವಸತಿ ನಿಲಯಕ್ಕೆ ಬೆತ್ತಲೆ ನುಗ್ಗಲು  ವ್ಯಕ್ತಿ ಯತ್ನ : ಸಿಸಿಟಿವಿಯಲ್ಲಿ ದೃಶ್ಯ ಸೆರೆ ಇಂಗ್ಲೆಂಡ್ ವಿರುದ್ಧ ಶ್ರೀಲಂಕಾಕ್ಕೆ ಐತಿಹಾಸಿಕ ಗೆಲುವು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹಲವು ಸೇವೆಗಳ ದರ ಹೆಚ್ಚಳ : ಪಂಚಾಮೃತ ಮಹಾಭಿಷೇಕ 11,000 ರೂ. ಹುಬ್ಬಳ್ಳಿಯಲ್ಲಿ ಮಾಂಜಾ ಅವಘಡ : ಮಹಿಳೆ ಬಲಿ ಬಳಿಕ ಯುವಕನ ಮೂಗು ಕಟ್ಗೊಬ್ಬರದ ಗುಣಮಟ್ಟ ಕಳಪೆಯಾದ್ರೆ ಡೀಲರ್ ಹೊಣೆಗಾರನಲ್ಲ : ಹೈಕೋರ್ಟ್ ತೀರ್ಪು ವಿಧಾನ ಪರಿಷತ್ ಸ್ಥಾನಗಳ ಚುನಾವಣೆ: ಇಂದು ಮತದಾನ