LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Politics News

ದಸರಾದಲ್ಲಿ ಸಚಿವರನ್ನ ಎಸ್ಪಿ ತಡೆ ವಿಚಾರ : ಹಿಂದಿನ ಕಾರಣ ಬಯಲು

Advertisement

ಮೈಸೂರು : ಜಂಬೂಸವಾರಿ ದಿನ ಅಂದರೆ ನಿನ್ನೆ (ಅ.21) ಮೈಸೂರು ಅರಮನೆ ಆವರಣದಲ್ಲಿ ನಂದಿ ಧ್ವಜದ ಪೂಜೆಗೆ ತೆರಳುತ್ತಿದ್ದ ಮೂವರು ಸಚಿವರಾದ ಶಿವರಾಜ್ ತಂಗಡಗಿ, ನರೇಂದ್ರ ಸ್ವಾಮಿ, ಬಸವಂತಪ್ಪ ಅವರನ್ನು ಎಸ್ಪಿ ಸಿ.ಬಿ.ರಿಷ್ಯಂತ್ ತಡೆದಿದ್ದು, ಈ ಪ್ರಕರಣ ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ.

ಸಚಿವರನ್ನ ತಡೆದಿದ್ದೇಕೆ? ದಲಿತ ಸಚಿವರು ಎಂಬ ಕಾರಣಕ್ಕೆ ತಡೆಯಲಾಯ್ತಾ ಎಂಬ ವ್ಯಾಪಾಕ ಟೀಕೆ ವ್ಯಕ್ತವಾಗುತ್ತಿದ್ದು, ಇದೀಗ ಅಸಲಿ ಕಾರಣ ಬಯಲಾಗಿದೆ. ನಂದಿ ಧ್ವಜದ ಪೂಜೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಇವರಿಬ್ಬರನ್ನು ಹೊರತುಪಡಿಸಿ ಬೇರೆ ಯಾವ ಸಚಿವರಿಗೂ ಅವಕಾಶ ಇಲ್ಲ. ಹೀಗಾಗಿ ಇಬ್ಬರನ್ನು ಹೊರತುಪಡಿಸಿ ಯಾರಿಗೂ ಅವಕಾಶ ನೀಡಬಾರದು ಎಂದು ಅಧಿಕಾರಿಗಳಿಗೆ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್‌ ಸೂಚಿಸಿದ್ದರು. ಅದರಂತೆ ಎಸ್ಪಿ ರಿಷ್ಯಂತ್ ಸಚಿವರನ್ನು ತಡೆದಿದ್ದಾರೆ ಎನ್ನುವುದು ತಿಳಿದುಬಂದಿದೆ.

ಸಚಿವರಿಗೆ ಅವಕಾಶವಿಲ್ಲ ಎಂದು ಬ್ರೀಫಿಂಗ್ ಮಾಡಿದ್ದ ಕಮಿಷನರ್

ನಂದಿ ಧ್ವಜದ ಪೂಜೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಇಬ್ಬರನ್ನೂ ಹೊರತುಪಡಿಸಿ ಬೇರೆ ಯಾವ ಸಚಿವರಿಗೂ ಅವಕಾಶ ಇಲ್ಲ. ಸಚಿವರು ಅವರಿಗೆ ಮೀಸಲಿಟ್ಟ ಸ್ಥಳದಲ್ಲಿ ಕುಳಿತಿರಬೇಕೆಂದು ತೀರ್ಮಾನಿಸಲಾಗಿತ್ತು. ಈ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಕಮಿಷನರ್​​ ಬ್ರೀಫಿಂಗ್ ಮಾಡಿದ್ದರು.ಹೀಗಾಗಿ ಪೊಲೀಸ್ ಹಿರಿಯ ಅಧಿಕಾರಗಳ ತೀರ್ಮಾನದಂತೆ ಕರ್ತವ್ಯ ನಿರ್ವಹಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಂಗಳೂರಿನಲ್ಲಿ ಹೈಟೆಕ್ ಸಿಮ್ ಬಾಕ್ಸ್ ದಂಧೆ: ಮಹಾರಾಷ್ಟ್ರದ ನಾಲ್ವರು ಅರೆಸ್ಟ್ ಪ್ರೇಮದ ಊರಲಿ' ಟಿಕೆಟ್​​​ಗಾಗಿ ಬಡಿದಾಡಿಕೊಂಡ ಮಹಿಳೆಯರು : ಗಂಟನ್ ತಾಳಿ ಪೀಸ್ ಪೀಸ್ ಜೋ ರೂಟ್ ನೂತನ ದಾಖಲೆ ದಸರಾದಲ್ಲಿ ಸಚಿವರನ್ನ ಎಸ್ಪಿ ತಡೆ ವಿಚಾರ : ಹಿಂದಿನ ಕಾರಣ ಬಯಲುಹ್ಯಾಂಡಲ್‌ರಹಿತ ಬೈಕ್‌ನಲ್ಲಿ 460 ಕಿ.ಮೀ. ಪಯಣ: ಇಳಕಲ್ಲ ವೀರಣ್ಣ ಕುಂದರಗಿ ಮಠ ಸಾಧನೆಹುಬ್ಬಳ್ಳಿಯಲ್ಲಿ ಮಾಂಜಾದಾರ ಕುತ್ತಿಗೆಗೆ ಸಿಲುಕಿ ಮಹಿಳೆ ದುರ್ಮರಣಕಿವೀಸ್ ವಿರುದ್ಧ ಭಾರತಕ್ಕೆ 4 ವಿಕೆಟ್ ಗಳ ಗೆಲುವು ಮಲ್ಲೂರ ಗ್ರಾಮದಲ್ಲಿ ₹70 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಮಹಾಂತೇಶ ಕೌಜಲಗಿ ಅವರಿಂದ ಭೂಮಿಪೂಜೆರಸ್ತೆಬದಿಯಲ್ಲಿ ಬೂದುಗುಂಬಳದ ರಾಶಿ : ನಷ್ಟದಲ್ಲಿ ವ್ಯಾಪಾರಸ್ಥರು, ಕಂಗಾಲಾದ ರೈತರು ಅ. 26ರಂದು ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಸಭೆ: ಡಿ. ಕೆ ಶಿವಕುಮಾರ್